ತರಬೇತಿ ಪಡೆದವರಿಗೆ ಪ್ರಮಾಣ ಪತ್ರ

ಬಳ್ಳಾರಿ,ನ.4- ಜಿಲ್ಲೆಯ ಸಂಡೂರು ತಾಲೂಕಿನ ವಡ್ಡು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಸೋಮವಾರ ಜಿಲ್ಲಾ ಖನಿಜ ಪ್ರತಿಷ್ಟಾನ ಟ್ರಸ್ಟ್ (ಡಿ.ಎಂ.ಎಫ್) ಅನುದಾದಡಿಯಲ್ಲಿ ಸಂಡೂರು ಸ್ವಯಂ ಶಕ್ತಿ ಯೋಜನೆ ಅಡಿಯಲ್ಲಿನ 75 ದಿನದ ಕೌಶಲ್ಯ ಬಂಧು ತಂತ್ರಾಂಶ ಮೂಲಕ ತರಬೇತಿ ಪಡೆದು ಯಶಸ್ವಿಗೊಂಡ 47 ಅಭ್ಯರ್ಥಿಗಳಿಗೆ ವಡ್ಡು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಎಸ್.ಸಿದ್ದಪ್ಪ ಮತ್ತು ಕ್ಯೂನಿಕ್ಸ್ ಸಂಸ್ಥೆಯ ಮುಖ್ಯಸ್ಥೆ ವೈಶಾಲಿ ಗೀತಾ ಅವರು ಪ್ರಮಾಣ ಪತ್ರಗಳನ್ನು ವಿತರಿಸಿದರು.