ತರಬೇತಿ ಕೇಂದ್ರ ಸ್ಥಾಪನೆಗಾಗಿ ಸ್ಥಳ ಪರಿಶೀಲನೆ

ಚಿಂಚೋಳಿ,ನ.10- ಸರ್ಕಾರಿ ಉಪಕರಣಗಾರ ಮತ್ತು ತರಬೇತಿ ಕೇಂದ್ರ ಸ್ಥಾಪನೆಗಾಗಿ ಇಲ್ಲಿನ ಚಂದಾಪೂರ ಆದರ್ಶ ವಿದ್ಯಾಲಯದ ಹತ್ತಿರ ಸ್ಥಳವನ್ನು ಪರಿಶೀಲನೆ ಕೈಗೊಳ್ಳಲಾಯಿತು.
ಶಾಸಕರಾದ ಡಾ. ಅವಿನಾಶ ಜಾಧವ ಹಾಗೂ ಹಿಂದಿನ ಶಾಸಕರು, ಲೋಕಸಭಾ ಸದಸ್ಯರಾದ ಡಾ ಉಮೇಶ ಜಾಧವ ಅವರ ಪ್ರಯತ್ನದಿಂದ ಈ ಕೇಂದ್ರ ಸ್ಥಾಪನೆಯ ಪ್ರಕ್ರಿಯೆಗೆ ಚಾಲನೆ ದೊರೆತಿದೆ.
ಚಿಂಚೋಳಿ ತಾಲೂಕಿನ ವಿದ್ಯಾರ್ಥಿಗಳ ಭವಿಷ್ಯಕ್ಕಾಗಿ ಇಲ್ಲಿ ಸರ್ಕಾರಿ ಉಪಕರಣಗಾರ ಮತ್ತು ತರಬೇತಿ ಕೇಂದ್ರ ಸ್ಥಾಪನೆಗೆ ಕಾರ್ಯಾಯೋಜನೆ ಸಿದ್ದಗೊಳ್ಳಲಿದೆ ಹೀಗಾಗಿ ಶಾಸಕರ ಸೂಚನೆಯ ಮೇರೆಗೆ ಕಲಬುರಗಿ ಉಖಿಖಿಅ ಕೇಂದ್ರದ ಪ್ರಾಂಶುಪಾಲರಾದ ಮೋಹನ ರಾಠೋಡ ಸ್ಥಳ ಪರಿಶಿಲಿಸಿದರು.
ಈ ಸಂದರ್ಭದಲ್ಲಿ.ಕ್ಷೇತ್ರ ಶಿಕ್ಷಣಾಧಿಕಾರಿ ದತ್ತಪ್ಪ ತಳವಾರ.ಭೂಮಾಪನ ಅಧಿಕಾರಿಗಳಾದ ಚಂದ್ರಕಾಂತ.ಆದರ್ಶ ವಿದ್ಯಾಲಯದ ಪ್ರಾಂಶುಪಾಲರಾದ ನಾಗೇಶ ಭದ್ರಶೆಟ್ಟಿ. ಬಿಜೆಪಿಯ ಮುಖಂಡರಾದ ಶ್ರೀಮಂತ ಕಟ್ಟಿಮನಿ. ಭೀಮಶೆಟ್ಟಿ ಮುರಡ. ಲಕ್ಷ್ಮಣ ಅವುಂಟಿ. ಶ್ರೀಕಾಂತ ದೇಗಲ್ಮಡಿ. ಶಾಸಕರ ಆಪ್ತ ಕಾರ್ಯದರ್ಶಿ ಶ್ರೀನಿವಾಸ ಚಿಂಚೋಳಿಕರ ಉಪಸ್ಥಿತರಿದ್ದರು.