ತರಬೇತಿ ಕಾರ್ಯಕ್ರಮದ ಸಮಾರೋಪ

ಕಲಬುರಗಿ:ನ.8:ಇಂದಿನ ಆಧುನಿಕ ಜಗತ್ತಿನಲ್ಲಿ ಕಂಪ್ಯೂಟರ್ ತಂತ್ರಜ್ಞಾನದ ಅನೇಕ ವಿಷಯಗಳು, ಸಂಶೋಧನೆಗಳು, ವಿದ್ಯಾರ್ಥಿಗಳಿಗೆ ತಿಳಿಸಬೇಕಾಗಿದೆ ಅಂತವುಗಳಲ್ಲಿ ದತ್ತಾಂಶಗಳ ವಿಶ್ಲೇಷಣೆ ಬಹು ಮುಖ್ಯವಾಗಿದ್ದು ಆ ವಿಷಯದ ಕುರಿತ ಉಚಿತವಾಗಿ ನಮ್ಮ ವಿದ್ಯಾರ್ಥಿಗಳಿಗೆ ತರಬೇತಿ ನೀಡಲು ಆಗಮಿಸಿದ ಹನಿವೆಲ್ ಕಂಪನಿಯ ಐಸಿಟಿ ಅಕಾಡೆಮಿಗೆ ನಮ್ಮ ಎಚ್. ಕೆ. ಇ. ಸೊಸೈಟಿಯ ಆಡಳಿತ ಮಂಡಳಿಯ ವತಿಯಿಂದ ಹೃತ್ಪೂರ್ವಕ ವಂದನೆಗಳು. ಇಂತಹ ಯಾವುದೇ ಕಾರ್ಯಕ್ರಮಗಳು ಕಾಲೇಜಿನಲ್ಲಿ ನಡೆದರೆ ಅದಕ್ಕೆ ನಮ್ಮ ಸಂಪೂರ್ಣ ಬೆಂಬಲ ಇದೆ. ವಿದ್ಯಾರ್ಥಿಗಳು ಇಂತಹ ತರಬೇತಿಯ ಸದುಪಯೋಗ ಪಡೆದುಕೊಂಡು ದೇಶದ ನಿರ್ಮಾಣದಲ್ಲಿ ತಮ್ಮ ನುರಿತ ತಂತ್ರಜ್ಞಾನದೊಂದಿಗೆ ತೊಡಿಸಿಕೊಂಡು ದೇಶದ ಆಸ್ತಿ ಆಗಬೇಕೆಂದು ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಡಾ. ಭೀಮಾಶಂಕರ್ ಬಿಲಗುಂದಿಯವರು ತಿಳಿಸಿದರು.
ಅವರು ಪಿ ಡಿ ಎ ಇಂಜಿನಿಯರಿಂಗ್ ಕಾಲೇಜಿನ ತರಬೇತಿ ಮತ್ತು ನೇಮಕಾತಿ ಸಭಾಂಗಣದಲ್ಲಿ ಕಾಲೇಜಿನ ಎಲೆಕ್ಟ್ರಾನಿಕ್ಸ್, ಕಂಪ್ಯೂಟರ್ ಸೈನ್ಸ್ ,ಇನ್ಫಾರ್ಮಶನ್ ಸೈನ್ಸ್, ಮತ್ತು ಎಲೆಕ್ಟ್ರಿಕಲ್ ವಿಭಾಗದ ಅಂತಿಮ ವಿದ್ಯಾರ್ಥಿಗಳಿಗಾಗಿ ಪ್ರತಿಷ್ಠಿತ ಹನಿವೆಲ್ ಕಂಪನಿಯ ತಾಂತ್ರಿಕ ತರಬೇತಿ ಕಾರ್ಯಕ್ರಮದಡಿಯ ಸೆಂಟರ್ ಆಫ್ ಎಕ್ಸಲೆನ್ಸ್ ಫಾರ್ ಯೂತ್ ಎಂಪವಮೆರ್ಂಟ್ ಮತ್ತು ಐಸಿಟಿ ಅಕಾಡೆಮಿಯು ಆಯೋಜಿಸಿದ ಡಾಟಾ ಅನಾಲಿಟಿಕ್ಸ್ ಮತ್ತು ಪವರ್ ಬಿಐಎಂ ವಿಷಯದ ಕುರಿತ 27 ಅಕ್ಟೋಬರ್ 2023 ರಿಂದ ಏಳು ನವೆಂಬರ್ 2023ರವರೆಗಿನ 12 ದಿನದ ತರಬೇತಿ ಕಾರ್ಯಕ್ರಮ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸುತ್ತಾ ನುಡಿದರು .
ಐಸಿಟಿ ಅಕಾಡೆಮಿಯು ತರಬೇತಿ ನೀಡುವುದಲ್ಲದೆ ನೇಮಕಾತಿಯಲ್ಲಿ ಮತ್ತು ಗ್ಲೋಬಲ್ ಸರ್ಟಿಫಿಕೇಷನ್ ಕೊಡುವುದರಲ್ಲಿ ಕೂಡ ಸಹಾಯಮಾಡುತ್ತದೆ ಎಂದು ಸಂಚಾಲಕರಾದ ಶ್ರೀ ಸೈಯದ್ ಅವರು ನುಡಿದರು.
ಕಾಲೇಜಿನ ಆಡಳಿತ ಮಂಡಳಿಯ ಸದಸ್ಯರು ಮತ್ತು ಹೈದರಾಬಾದ್ ಮತ್ತು ಹೈ.ಕ. ಶಿ.ಸಂಸ್ಥೆಯ ಆಡಳಿತ ಮಂಡಳಿಯ ಸದಸ್ಯರಾದ ವಾಸ್ತುಶಿಲ್ಪಿ ಶ್ರೀ ಬಸವರಾಜ್ ಕಂಡೆ ರಾವ್ ಅವರು ವಿದ್ಯಾರ್ಥಿಗಳು ತರಬೇತಿಯ ಸದುಪಯೋಗ ಪಡೆಯಬೇಕೆಂದು ಹೇಳಿದರು.
ಶ್ರೀಮತಿ ಭಾಗ್ಯಲಕ್ಷ್ಮಿ ಕಾಬಾ ನಿರೂಪಿಸಿದರು .ಪೆÇ್ರ .ಅಕ್ಷಯ್ ಅಸ್ಪಲಿ ಸ್ವಾಗತಿಸಿದರು. ಡಾ. ನಾಗೇಶ್ ಸಾಲಿಮಠ್ ವಂದಿಸಿದರು. ವೇದಿಕೆಯಲ್ಲಿ ಐಸಿಟಿ ಸಂಚಾಲಕರಾದ ಮಿಸ್ಟರ್ ಸೈಯದ್ ಮತ್ತು ಸೋನಿ ಅವರು ಮತ್ತು ಕಾಲೇಜಿನ ಪ್ರಾಚಾರ್ಯರಾದ ಡಾ. ಶಶಿಕಾಂತ್ ಆರ್ ಮೀಸೆ ತರಬೇತಿ ಮತ್ತು ನೇಮಕಾತಿ ವಿಭಾಗದ ಮುಖ್ಯಸ್ಥರಾದ ಡಾ. ಮಹದೇವಪ್ಪ ಗಾದಿಗೆ ಉಪಸ್ಥಿತರಿದ್ದರು. ಶ್ರೀ ಅನುಪ್ ಮತ್ತು ಶ್ರೀಮತಿ ಸೀಮಾ ಅವರು ಸಂಪನ್ಮೂಲ ವ್ಯಕ್ತಿಗಳಾಗಿ ಎರಡು ದಿನ ತರಬೇತಿ ನೀಡಿದರು. ಈ ತರಬೇತಿಯಲ್ಲಿ 121 ಜನ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.