ತರಬೇತಿಯ ಜ್ಞಾನ ವೃತ್ತಿಯಲ್ಲಿ ಅಳವಡಿಸಿಕೊಳ್ಳಿ:ಸೈಯದ ಶೇರಅಲಿ

ಸೈದಾಪುರ:ಫೆ.25:ತರಬೇತಿಯಲ್ಲಿ ಪಡೆದ ಜ್ಞಾನವನ್ನು ವೃತ್ತಿಯಲ್ಲಿ ಅಳವಡಿಸಿಕೊಂಡಾಗ ಮಾತ್ರ ಉತ್ತಮ ಶಿಕ್ಷಕರು ನಾವಾಗುತ್ತೇವೆ ಎಂದು ಮುಖ್ಯಗುರು ಸೈಯದ ಶೇರಅಲಿ ಅಭಿಪ್ರಾಯಪಟ್ಟರು.
ಇಲ್ಲಿಗೆ ಸಮೀಪದ ಬಾಡಿಯಾಲ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾ ವರ್ಧಕ ಡಿ.ಎಲ್.ಇಡಿ ಕಾಲೇಜಿನ ವತಿಯಿಂದ ನಿಯೋಜನೆಗೊಂಡ ಪ್ರಶಿಕ್ಷಣಾರ್ಥಿಗಳ ನಿಕಟಸೇವಾ ತರಬೇತಿ ಮುಕ್ತಾಯದ ಅಂಗವಾಗಿ ಹಮ್ಮಿಕೊಂಡ ಬೀಳ್ಕೊಡಿಗೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಂಸ್ಥೆಯಿಂದ ನಿಮಗೆ ನೀಡಲಾದ ಕಾರ್ಯವನ್ನು ಪ್ರಾಮಾಣಿಕ ಹಾಗೂ ಶಿಸ್ತಿನಿಂದ ನಿರ್ವಹಿಸಿದ್ದಿರಿ ಇದು ನಮಗೆ ತೃಪ್ತಿಯನ್ನುಂಟು ಮಾಡಿದೆ. ನಿಮ್ಮ ಸೇವೆಯಿಂದ ಮಕ್ಕಳಿಗೆ ಅನುಕೂಲವಾಗಿದೆ. ಮುಂದಿನ ದಿನಗಳಲ್ಲಿ ಉತ್ತಮ ಸಾಧನೆಯೊಂದಿಗೆ ಸರಕಾರಿ ನೌಕರಿ ಪಡೆಯುವ ಸಾಮಾಥ್ರ್ಯ ನಿಮ್ಮದಾಗಲಿ ಎಂದು ಹಾರೈಸಿದರು.
ಮುಖ್ಯ ಅತಿಥಿಗಳಾಗಿ ವಿದ್ಯಾ ವರ್ಧಕ ಪ್ರೌಢ ಶಾಲೆಯ ಸಮಾಜ ವಿಜ್ಞಾನ ಶಿಕ್ಷಕ ಗೂಳಪ್ಪ.ಎಸ್.ಮಲ್ಹಾರ ಮಾತನಾಡಿ, ಶಾಲಾ ವತಿಯಿಂದ ಪ್ರಶಿಕ್ಷಣಾರ್ಥಿಗಳಿಗೆ ಗೌರವ ಪೂರ್ವಕವಾಗಿ ಬೀಳ್ಕೊಡುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ. ಇದು ಮುಂದಿನ ದಿನಗಳಲ್ಲಿ ಅವರು ಉತ್ತಮ ಕಾರ್ಯನಿರ್ವಹಿಸಲು ಪ್ರೋತ್ಸಾಹವನ್ನುಂಟು ಮಾಡುವಂತಿದೆ. ಇದರ ಸರಿಯಾದ ಸದುಪಯೋಗ ಪಡೆದುಕೊಂಡು ಉತ್ತಮ ಸಾಧನೆ ನಿಮ್ಮದಾಗಲಿ ಎಂದುಹೇಳಿದರು.
ಈ ಸಂದರ್ಭದಲ್ಲಿ ಬಸವರಾಜಯ್ಯ ಸ್ವಾಮಿ, ಪ್ರಶಿಕ್ಷಣಾರ್ಥಿಗಳಾದ ಸ್ವಾತಿ, ಸುನಿತಾ, ಸುಮಂಗಲ, ಭಾವನ, ಶಿಕ್ಷಕರು, ಅತಿಥಿ ಶಿಕ್ಷಕರು, ವಿದ್ಯಾರ್ಥಿಗಳು ಸೇರಿದಂತೆ ಇತರರಿದ್ದರು. ಶಿಕ್ಷಕ ಶ್ರೀನಿವಾಸ್ ನಿರೂಪಿಸಿದರು. ಅಂಬರೀμï ವಂದಿಸಿದರು.