ತರಬೇತಿಯ ಜ್ಞಾನ ನಮ್ಮದಾಗಿಸಿಕೊಳ್ಳಬೇಕು:ಮನಗನಾಳ

ಸೈದಾಪುರ:ನ.17:ಗುಣಮಟ್ಟದ ಶಿಕ್ಷಣ ಕಲ್ಪಿಸುವುದಕ್ಕಾಗಿ ಸಾಕಷ್ಟು ಸಂಶೋಧನೆಯೊಂದಿಗೆ ಅಸ್ಥಿತ್ವಕ್ಕೆ ತರಲಾದ ತರಬೇತಿಯ ಜ್ಞಾನವನ್ನು ನಮ್ಮದಾಗಿಸಿಕೊಳ್ಳಬೇಕು ಎಂದು ಬಿಆರ್‍ಪಿ ಬಸವರಾಜ ಮನಗನಾಳ ಅಭಿಪ್ರಾಯಪಟ್ಟರು.

ಇಲ್ಲಿನ ಸರಕಾರಿ ಪ್ರೌಢ ಶಾಲೆಯಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಕಲಿಕೆ ಟಾಟಾ ಟ್ರಸ್ಟ್ ಟೈಟಿನ ವತಿಯಿಂದ ನಲಿಕಲಿ ತರಗತಿ ನಿರ್ವಹಣೆ ಕುರಿತು ಅತಿಥಿಶಿಕ್ಷಕರಿಗೆ ಹಮ್ಮಿಕೊಂಡ 3 ದಿನಗಳ ತರಬೇತಿ ಕಾರ್ಯಕ್ರಕ್ಕೆ ಚಾಲನೆ ನೀಡಿ ಮಾತನಾಡಿದರು. ಕಲಿಕೆ ಆಸಕ್ತಿದಾಯಕವಾಗಿರಲು ನಲಿಕಲಿ ತರಗತಿ ನಿರ್ವಹಣೆ ಉತ್ತಮವಾದ ವಿಧಾನವಾಗಿದೆ. ಅತಿಥಿ ಶಿಕ್ಷಕರಿಗೆ ಇದರ ಬಗಗೆ ತರಬೇತಿ ನೀಡಲಾಗುತ್ತಿದೆ. ಇದರ ಸರಿಯಾದ ಸದುಪಯೋಗ ಪಡೆದುಕೊಂಡು ಶೈಕ್ಷಣಿಕ ಅಭಿವೃದ್ದಿಗೆ ಪ್ರಯತ್ನಸುವಂತೆ ಸಲಹೆ ನೀಡಿದರು.

ಸಿಆರ್‍ಪಿಗಳಾದ ಮುಕುಂದರಾವ, ಷಣ್ಮೂಖ, ಮಲ್ಲಪ್ಪ, ದೇವಪ್ಪ, ಸುಬ್ರಮಣ್ಯ, ಎಸ್‍ಆರ್‍ಟಟಿ ನೋಡಲ ನಿಂಗಪ್ಪ, ಸುರೇಶ, ಸಂಪನ್ಮೂಲ ವ್ಯಕ್ತಿಗಳಾದ ಸಂಜೀವಪ್ಪ, ಮೃತ್ಯುಂಜಯ, ಜ್ಯೋತಿ.ಜಿ ಸೇರಿದಂತ ಅತಿಥಿ ಶಿಕ್ಷಕರು ಉಪಸ್ಥಿತರಿದ್ದರು