ಸೈದಾಪುರ:ಜೂ.3:ತರಬೇತಿಯಲ್ಲಿ ಕಲಿತದ್ದನ್ನು ವೃತ್ತಿಯಲ್ಲಿ ಅಳವಡಿಸಿಕೊಂಡು ಉತ್ತಮ ಶಿಕ್ಷರಾಗುವಂತೆ ಮುಖ್ಯಗುರು ಲಿಂಗಾರೆಡ್ಡಿ ನಾಯಕ ಅಭಿಪ್ರಾಯಪಟ್ಟರು.
ಇಲ್ಲಿನ ವಿದ್ಯಾ ವರ್ಧಕ ಡಿ.ಎಲ್.ಎಡ್ ಕಾಲೇಜಿನಲ್ಲಿ ದ್ವಿತೀಯ ವರ್ಷದ ಪ್ರಶಿಕ್ಷಣಾರ್ಥಿಗಳಿಗೆ ಹಮ್ಮಿಕೊಂಡ ಬೀಳ್ಕೊಡಿಗೆ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು. ಸತತ ಪ್ರಯತ್ನದಿಂದ ಉತ್ತಮ ಸಾಧನೆ ನಮ್ಮದಾಗುತ್ತದೆ. ಇದಕ್ಕಾಗಿ ಏಕಾಗ್ರತೆ, ಆಸಕ್ತಿಯೊಂದಿಗೆ ಪ್ರಯತ್ನ ಮಾಡಬೇಕು ಎಂದರು. ಬದಲಾದ ಶೈಕ್ಷಣಿಕ ವ್ಯವಸ್ಥೆಯಲ್ಲಿ ಯಶಸ್ಸು ನಮ್ಮದಾಗಲು ಸ್ಪರ್ದಾತ್ಮಕ ಮನೋಭಾನೆಯನ್ನು ಕಂಡು ಕೊಳ್ಳಬೇಕು. ಇದರಿಂದ ಕಠಿಣವಾಗಿರುವುದು ಸುಲಭವಾಗುತ್ತದೆ. ಇದಕ್ಕೆ ಉಪನ್ಯಾಸಕರ ಮಾರ್ಗದರ್ಶನ ಪಡೆದುಕೊಳ್ಳುವಂತೆ ಸಲಹೆ ನೀಡಿದರು.
ಪ್ರಾಂಶುಪಾಲ ಕರಬಸಯ್ಯ ದಂಡಿಗಿಮಠ ಅಧ್ಯಕ್ಷತೆ ವಹಿಸಿದ್ದರು. ಅತಿಥಿಗಳಾಗಿ ಹಂಪಣ್ಣ ಸಜ್ಜನಶೆಟ್ಟಿ, ಜಿ.ಎಂ.ಗುರುಪ್ರಸಾದ ಸೇರಿದಂತೆ ಉಪನ್ಯಾಸಕರಾದ ಸಾಬಯ್ಯ ರಾಯಪ್ಪನೋರ, ಹಣಮರೆಡ್ಡಿ ಮೋಟ್ನಳ್ಳಿ, ಶ್ವೇತಾ ರಾಘವೇಂದ್ರ ಪೂರಿ, ಆನಂದ ಪಾಟೀಲ ಕೊಂಡಾಪುರ, ಪ್ರಥಮ ಹಾಗೂ ದ್ವಿತೀಯ ವರ್ಷದ ಪ್ರಶಿಕ್ಷಣಾರ್ಥಿಗಳು ಉಪಸ್ಥಿತರಿದ್ದರು. ಶ್ವೇತಾಶ್ರೀ ಹಾಗೂ ಸ್ವಾತಿ ಪ್ರಾರ್ಥಾನಾಗೀತೆ ಹಾಡಿದರು. ರಾಜಶ್ರೀ ಸ್ವಾಗತಿಸಿದಳು. ರಹೀಮ ನಿರೂಪಿಸಿದಳು. ನಾಗಮ್ಮ ವಂದಿಸಿದಳು.
ಇಗಾಗಲೇ ಡಿ.ಎಲ್.ಎಡ್ ಕಾಲೇಜುಗಳು ತಮ್ಮ ಅಸ್ಥಿತ್ವ ಕಳೆದುಕೊಳ್ಳುತ್ತಿರುವ ಸಂದರ್ಭದಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣ ನೀಡುವುದರೊಂದಿಗೆ ಸಂಸ್ಥೆ ಈ ಭಾಗದ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ನೆರವು ನೀಡುತ್ತಿರುವುದು ಉತ್ತಮ ಬೆಳವಣೆಯಾಗಿದೆ. ಇದರ ಸದುಪಯೋಗ ಪ್ರಶಿಕ್ಷಣಾರ್ಥಿಗಳು ಪಡೆದುಕೊಂಡು ಉತ್ತಮ ಸಾಧನೆ ಮಾಡಿದಾಗ ಇಲ್ಲಿನ ಮಹತ್ವ ಹೆಚ್ಚಾಗುತ್ತದೆ. ಆ ಮೂಲಕ ಇನ್ನು ಹೆಚ್ಚಿನ ನೆರವು ನೀಡುವಲ್ಲಿ ಸಹಾಯವಾಗುತ್ತದೆ.
ಕರಬಸಯ್ಯ ದಂಡಿಗಿಮಠ ಪ್ರಾಂಶುಪಾಲರು