ತರಕಾರಿ, ಹಣ್ಣುಗಳಿಗೆ ದರ ನಿಗಧಿಪಡಿಸಿದ ಡಿಸಿ

ರಾಯಚೂರು,ಮೇ.೨೧-ಜಿಲ್ಲೆಯಾದ್ಯಂತ ಕೋವಿಡ್-೧೯ ಪ್ರಕರಣಗಳು ಹರಡದಂತೆ ಸೂಕ್ತ ಮುಂಜಾಗ್ರತಾ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ರಾಜ್ಯದಲ್ಲಿ ಜನತಾ ಕರ್ಪ್ಯೂ ಹಾಗೂ ಜಿಲ್ಲೆಯಲ್ಲಿ ಲಾಕ್ ಡೌನ್ ಜಾರಿಗೊಳಿಸಿದ್ದರಿಂದ ಹಣ್ಣು ಮತ್ತು ತರಕಾರಿ ಉತ್ಪನ್ನಗಳನ್ನು ಸಗಟು ವ್ಯಾಪಾರಸ್ಥರಿಂದ ಖರೀದಿ ಮಾಡಿ ಚಿಲ್ಲರೆ ವರ್ತಕರು ಗ್ರಾಹಕರಿಗೆ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿರುವುದು ಕಂಡು ಬಂದಿದೆ.
ಈ ಹಿನ್ನಲೆಯಲ್ಲಿ ಗ್ರಾಹಕರಿಗೆ ಹಣ್ಣು ಮತ್ತು ತರಕಾರಿ ಉತ್ಪನ್ನಗಳನ್ನು ಈ ಕೆಳಕಂಡಂತೆ ಗರಿಷ್ಟ ದರಗಳನ್ನು ನಿಗದಿತ ದರದಲ್ಲಿ ದೊರೆಯುವಂತೆ ೨೦೨೧ರ ಮೇ.೨೦ರಂದು ಜಿಲ್ಲಾಧಿಕಾರಿಯವರ ಕಚೇರಿಯ ಸಭಾಂಗಣದಲ್ಲಿ ಜಿಲ್ಲಾಧಿಕಾರಿಯವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಒಮ್ಮತದ ತೀರ್ಮಾನವನ್ನು ಕೈಗೊಳ್ಳಲಾಗಿದ್ದು, ಈ ಕೆಳಗಿನಂತೆ ಗ್ರಾಹಕರಿಗೆ ನಿಗದಿತ ಬೆಲೆಯಲ್ಲಿ ಹಣ್ಣು ಮತ್ತು ತರಕಾರಿ ಉತ್ಪನ್ನಗಳನ್ನು ದೊರೆಯುವಂತೆ ಮಾಡಲು ವಿಪತ್ತು ನಿರ್ವಹಣಾ ಕಾಯ್ದೆ-೨೦೦೫ ಕಲಂ ೩೪(ಎಂ) ಅಡಿಯಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಜಿಲ್ಲಾಧಿಕಾರಿ ಆರ್. ವೆಂಕಟೇಶ ಕುಮಾರ್ ಅವರು ಆದೇಶ ಹೊರಡಿಸಿದ್ದಾರೆ.
೧. ತರಕಾರಿ ಪದಾರ್ಥಗಳು:-
ಕ್ರ..ಸಂ. ತರಕಾರಿ ಉತ್ಪನ್ನದ ಹೆಸರು, ಸಗಟು ವ್ಯಾಪಾರ ದರ (ಪ್ರತಿ ಕೆ.ಜಿ.ಗೆ) ಹಾಗೂ ಗರಿಷ್ಟ ದರ (ಪ್ರತಿ ಕೆ.ಜಿ.ಗೆ)
೧ ಟಮೋಟೋ – ೧೬ ರೂಪಾಯಿಗಳು, ೨೦ ರೂಪಾಯಿಗಳು.
೨ ಬದನೆಕಾಯಿ – ೧೬ ರೂಪಾಯಿಗಳು, ೧೮ ರೂಪಾಯಿಗಳು.
೩ ಹಸಿ ಮೆಣಸಿನಕಾಯಿ- ೨೦ ರೂಪಾಯಿಗಳು, ೨೪ ರೂಪಾಯಿಗಳು.
೪ ಬೆಂಡೆಕಾಯಿ- ೨೦ ರೂಪಾಯಿಗಳು, ೨೪ ರೂಪಾಯಿಗಳು.
೫ ಹಾಗಲಕಾಯಿ- ೨೦ ರೂಪಾಯಿಗಳು, ೨೪ ರೂಪಾಯಿಗಳು.
೬ ಕ್ಯಾರೆಟ್ -೩೦ ರೂಪಾಯಿಗಳು, ೩೫ ರೂಪಾಯಿಗಳು.
೭ ಬೀನ್ಸ್- ೪೫ ರೂಪಾಯಿಗಳು, ೫೦ ರೂಪಾಯಿಗಳು.
೮ ನುಗ್ಗೆಕಾಯಿ- ೧೫ ರೂಪಾಯಿಗಳು, ೨೦ ರೂಪಾಯಿಗಳು.
೯ ಸೌತೇಕಾಯಿ- ೨೦ ರೂಪಾಯಿಗಳು, ೨೫ ರೂಪಾಯಿಗಳು.
೧೦ ಈರುಳ್ಳಿ -೧೬ ರೂಪಾಯಿಗಳು, ೨೦ ರೂಪಾಯಿಗಳು.
೧೧ ಆಲುಗಡ್ಡೆ- ೧೬ ರೂಪಾಯಿಗಳು, ೨೦ ರೂಪಾಯಿಗಳು.
೧೨ ತೊಂಡೇಕಾಯಿ- ೧೮ ರೂಪಾಯಿಗಳು, ೨೨ ರೂಪಾಯಿಗಳು.
೧೩ ಕ್ಯಾಪ್ಸಿಕಂ -೩೫ ರೂಪಾಯಿಗಳು, ೪೦ ರೂಪಾಯಿಗಳು.
೧೪ ಹೂಕೋಸು- ೩೦ ರೂಪಾಯಿಗಳು, ೩೪ ರೂಪಾಯಿಗಳು.
೧೫ ಕ್ಯಾಬೀಜ್- ೧೨ ರೂಪಾಯಿಗಳು, ೧೬ ರೂಪಾಯಿಗಳು.
೧೬ ಗಜ್ಜೆರಿ- ೨೮ ರೂಪಾಯಿಗಳು, ೩೦ ರೂಪಾಯಿಗಳು.
೧೭ ಈರೇಕಾಯಿ- ೨೭ ರೂಪಾಯಿಗಳು, ೩೨ ರೂಪಾಯಿಗಳು.
೧೮ ಚೌಳೇಕಾಯಿ- ೨೦ ರೂಪಾಯಿಗಳು, ೨೫ ರೂಪಾಯಿಗಳು.
೧೯ ಬೀಟ್ ರೂಟ್- ೧೮ ರೂಪಾಯಿಗಳು, ೨೨ ರೂಪಾಯಿಗಳು.
೨೦ ಬುಡಮಕಾಯಿ- ೧೪ ರೂಪಾಯಿಗಳು, ೧೯ ರೂಪಾಯಿಗಳು.
೨೧ ಸೋರೇಕಾಯಿ- ೧೦ ರೂಪಾಯಿಗಳು, ೧೫ ರೂಪಾಯಿಗಳು.
೨೨ ಬೂದು ಗುಂಬಳಕಾಯಿ- ೨೦ ರೂಪಾಯಿಗಳು, ೨೫ ರೂಪಾಯಿಗಳು.
೨೩ ಗೆಣಸು- ೧೬ ರೂಪಾಯಿಗಳು, ೨೦ ರೂಪಾಯಿಗಳು.
೨೪ ಅರವಿಗಡ್ಡೆ- ೩೦ ರೂಪಾಯಿಗಳು, ೩೫. ರೂಪಾಯಿಗಳು.
೨೫ ಕಂದಗಡ್ಡೆ- ೩೦ ರೂಪಾಯಿಗಳು, ೩೨ ರೂಪಾಯಿಗಳು.
೨. ಹಣ್ಣು ಪದಾರ್ಥಗಳು:-
ಕ್ರ.ಸಂ. ಹಣ್ಣು ಉತ್ಪನ್ನದ ಹೆಸರು ಸಗಟು ವ್ಯಾಪಾರ ದರ (ಪ್ರತಿ ಕೆ.ಜಿ.ಗೆ) ಗರಿಷ್ಟ ದರ
(ಪ್ರತಿ ಕೆ.ಜಿ.ಗೆ)
೧ ಸೇಬು- ೧೮೦ ರೂಪಾಯಿಗಳು, ೧೯೦ ರೂಪಾಯಿಗಳು.
೨ ಆರೇಂಜ್- ೧೭೦ ರೂಪಾಯಿಗಳು, ೧೮೦ ರೂಪಾಯಿಗಳು.
೩ ಸಪೋಟಾ- ೩೦ ರೂಪಾಯಿಗಳು, ೩೫ ರೂಪಾಯಿಗಳು.
೪ ಕಲ್ಲಂಗಡಿ- ೮ ರೂಪಾಯಿಗಳು, ೧೩ ರೂಪಾಯಿಗಳು.
೫ ಕರಬೂಜ- ೧೨ ರೂಪಾಯಿಗಳು, ೧೫ ರೂಪಾಯಿಗಳು.
೬ ಅಂಜೂರು- ೪೫ ರೂಪಾಯಿಗಳು, ೫೦ ರೂಪಾಯಿಗಳು.
೭ ಮಾವಿನ ಹಣ್ಣು (ರಸಪೂರಿ)- ೨೫ ರೂಪಾಯಿಗಳು, ೩೦ ರೂಪಾಯಿಗಳು.
೮ ಮಾವಿನ ಹಣ್ಣು (ಬೆನೆಷಾನ)- ೩೦ ರೂಪಾಯಿಗಳು, ೩೫ ರೂಪಾಯಿಗಳು.
೯ ಮಾವಿನ ಹಣ್ಣು (ಕೆಸರ್) -೪೦ ರೂಪಾಯಿಗಳು, ೪೫ ರೂಪಾಯಿಗಳು.
೧೦ ಮಾವಿನ ಹಣ್ಣು (ಹಿಮಾಹಿತಿ)- ೫೦ ರೂಪಾಯಿಗಳು, ೫೫ ರೂಪಾಯಿಗಳು.
೧೧ ಮಾವಿನ ಹಣ್ಣು (ಹಫುಸ್)- ೪೦ ರೂಪಾಯಿಗಳು, ೪೫ ರೂಪಾಯಿಗಳು.
೧೨ ಬಾಳೆಹಣ್ಣು (ಎಲಕ್ಕಿ)- ೪೦ ರೂಪಾಯಿಗಳು, ೪೦ ರೂಪಾಯಿಗಳು.
೧೩ ಬಾಳೆಹಣ್ಣು (ಪಚ್ಚೆ)- ೧೫ ರೂಪಾಯಿಗಳು, ೨೦ ರೂಪಾಯಿಗಳು.
೧೪ ಮೊಸಂಬಿ- ೩೦ ರೂಪಾಯಿಗಳು, ೩೦ ರೂಪಾಯಿಗಳು.
೧೫ ದಾಳಿಂಬೆ- ೭೦ ರೂಪಾಯಿಗಳು, ೭೫ ರೂಪಾಯಿಗಳು.
೧೬ ಪೇರು(ಸೀಬೆ)- ೩೦ ರೂಪಾಯಿಗಳು, ೩೦ ರೂಪಾಯಿಗಳು.
೧೭ ದ್ರಾಕ್ಷಿ (ಸೋನಾಕ)- ೭೦ ರೂಪಾಯಿಗಳು, ೭೦ ರೂಪಾಯಿಗಳು.
೧೮ ದ್ರಾಕ್ಷಿ (ತಾಮಸನ್ ಸೀಡ್ ಲೆಸ್)- ೭೦ ರೂಪಾಯಿಗಳು, ೮೦ ರೂಪಾಯಿಗಳು.
೧೯ ಪಪ್ಪಾಯಿ- ೨೦ ರೂಪಾಯಿಗಳು, ೨೫ ರೂಪಾಯಿಗಳು.
ಮೇಲ್ಕಂಡ ಹಣ್ಣು ಮತ್ತು ತರಕಾರಿ ಉತ್ಪನ್ನಗಳಿಗೆ ಗರಿಷ್ಟ ದರ ನಿಗದಿಪಡಿಸಲಾಗಿದ್ದು, ನಿಗದಿಪಡಿಸಿದ ದರಕ್ಕಿಂತ ಯಾವುದೇ ಕಾರಣಕ್ಕೂ ಹೆಚ್ಚಿನ ಬೆಲೆಗೆ ಮಾರಾಟ ಮಾಡುವಂತಿಲ್ಲ. ನಿಗದಿಪಡಿಸಿದ ದರಕ್ಕಿಂತ ಹೆಚ್ಚಿನ ದರದಲ್ಲಿ ಮಾರಾಟ ಮಾಡಿದ್ದಲ್ಲಿ ವಿಪತ್ತು ನಿರ್ವಹಣಾ ಕಾಯ್ದೆ-೨೦೦೫ ಹಾಗೂ ಇದಕ್ಕೆ ಅನ್ವಯವಾಗುವ ಇತರೆ ಕಾಯ್ದೆಗಳನ್ವಯ ಕ್ರಿಮಿನಲ್ ಮೊಕದ್ದಮೆಯನ್ನು ಹೂಡಲಾಗುವುದೆಂದು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷರೂ ಆಗಿರುವ ಜಿಲ್ಲಾಧಿಕಾರಿಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.