ತರಕಾರಿ ಮಾರುಕಟ್ಟೆಯಲ್ಲಿ ಮತಯಾಚಿಸಿದ ಕೆಆರ್ ಪಿ ಪಕ್ಷದ ಅಭ್ಯರ್ಥಿ


(ಸಂಜೆವಾಣಿ ವಾರ್ತೆ)
ಬಳ್ಳಾರಿ, ಏ.14: ಕೆ.ಆರ್.ಪಿ.ಪಕ್ಷದ ನಗರ ಕ್ಷೇತ್ರದ ಅಭ್ಯರ್ಥಿ ಲಕ್ಷ್ಮಿ ಅರುಣ ಜನಾರ್ಧನರೆಡ್ಡಿ ಅವರು ಇಂದು ನಗರದ ದೊಡ್ಡ ಮಾರುಕಟ್ಟೆ ಪ್ರದೇಶಕ್ಕೆ ತೆರಳಿ ಮಾತಯಾಚನೆ ಮಾಡಿದರು.
ಮಾರುಕಟ್ಟೆಯಲ್ಲಿ ತರಕಾರಿ ಮಾರಾಟ ಮಾಡುತ್ತಿದ್ದವರು ಮತ್ತು ಖರೀದ ಮಾಡುತ್ತಿದ್ದವರ  ಬಳಿ ತೆರಳಿ. ನಗರ ಕ್ಷೇತ್ರಕ್ಕೆ ಮೊದಲ ಮಹಿಳಾ ಶಾಸಕಿಯನ್ನಾಗಿ ಮಾಡಲು ನೀವೆಲ್ಲ ನನ್ನ ಫುಟ್ ಬಾಲಕ್ ಗುರ್ತಿಗೆ ಮತ ಹಾಕಿ ಎಂದು ಮನವಿ ಮಾಡಿದರು.
ರೆಡ್ಡಿ ಅವರ ಪತ್ನಿ ಮಾರುಕಟ್ಟೆಗೆ ಬಂದು ಮತಯಾಚಿಸಿದ್ದರ ಬಗ್ಗೆ ಮಹಿಳೆಯರು. ಅನುಕಂಪ ವ್ಯಕ್ತಪಡಿಸಿ ಮತ ನೀಡುವ ಭರವಶೆ ನೀಡಿದರು