ತರಕಾರಿ ಮಾರುಕಟ್ಟೆಗೆ ಶಾಸಕ ನಾಡಗೌಡ ಭೇಟಿ ಪರಿಶೀಲನೆ

ಮುದ್ದೇಬಿಹಾಳ:ಮೇ.30: 6ನೇ ಬಾರಿಗೆ ಶಾಸಕರಾಗಿ ಆಯ್ಕೆಗೊಂಡ ಬಳಿಕ ಶಾಸಕ ಸಿ ಎಸ್ ನಾಡಗೌಡ ಅವರು ಪುರಸಭೆ ಮುಖ್ಯಾಧಿಕಾರಿ ಕೆ ಎಂ ಖಿಲಾರಿ, ಇಂಜಿನಿಯರ್ ಭೀಮನಗೌಡ ಬಗಲಿ ನೇತೃತ್ವದ ವಿವಿಧ ಅಧಿಕಾರಿಗಳೊಂದಿಗೆ ಪಟ್ಟಣದ ಇಂದಿರಾ ಸರ್ಕಲ್ ಬಳಿ ಇರುವ ತರಕಾರಿ ಮಾರುಕಟ್ಟೆಗೆ ಸೋಮವಾರ ಬೇಟಿ ನೀಡಿ ಅವ್ಯವಸ್ಥೇ ಪರಿಶಿಲನೆ ನಡೆಸಿ ವ್ಯಾಪಾರಸ್ಥರ ಸಮಸ್ಯೆ ಆಲಿಸಿದರು.
ಈ ವೇಳೆ ಕಳೇದ 2013ರಿಂದ 18ರವೆಗಿನ ಸಿದ್ರಾಮಯ್ಯನವರ ನೇತೃತ್ವದ ಕಾಂಗ್ರೇಸ್ ಸರಕಾರದ ಅವಧಿಯಲ್ಲಿಯಲ್ಲಿಯೇ ಸಧ್ಯದ ತರಕಾರಿ ಮಾರುಕಟ್ಟೆಯನ್ನು ಎಲ್ಲ ತರಕಾರಿ ಮಾರಾಟ ಮಾಡುವ ವ್ಯಾಪಾರಸ್ಥರಿಗೆ ಹಾಗೂ ತರಕಾರಿ ಕೊಡುಕೊಳ್ಳುವ ಸಾಮಾನ್ಯ ಜನರಿಗೂ ತೊಂದರೆಯಾಗದಂತೆ ಸುಸಜ್ಜಿತ ಎಲ್ಲ ಮೂಲ ಸೌಲಭ್ಯಗಳುಳ್ಳ ಮಾರುಕಟ್ಟೆಯಾಗಿ ನಿರ್ಮಿಸಬೇಕು ಎಂಬು ನನ್ನಾಸೆಯಾಗಿತ್ತು. ಆದರೇ 2018ರಲ್ಲಿ ಚುನಾವಣೆಯಲ್ಲಿ ಪರಾಭವಗೊಂಡ ಹಿನ್ನೇಲೆಯಲ್ಲಿ ಅಭಿವೃದ್ಧಿ ಪಡಿಸಲು ಸಾಧ್ಯವಾಗಲಿಲ್ಲ ಸಧ್ಯ ಈ ಬಾರಿ ಮತಕ್ಷೇತ್ರದ ಜನರು ಪುನಃ ನನ್ನನ್ನು ಗೆಲ್ಲಿಸಿ ವಿಧಾನ ಸೌಧಕ್ಕೆ ಕಳುಹಿಸಿದ್ದಾರೆ.
ಕಾರಣ ನಾನು ಪ್ರಥಮವಾಗಿ ಇಲ್ಲಿನ ತರಕಾರಿ ಮಾರುಕಟ್ಟೆ ಅಭಿವೃದ್ಧಿಪಡಿಸುವ ಉದ್ದೇಶದಿಂದ ಪರಿಶಿಲನೆ ನಡೆಸಲಾಗಿದೆ ಸಧ್ಯ ರಾಜ್ಯದಲ್ಲಿ ಮತ್ತೇ ಸಿದ್ರಾಮಯ್ಯನವರ ನೇತೃತ್ವದ ಕಾಂಗ್ರೇಸ್ ಅಧಿಕಾರದಲ್ಲಿದೇ ಪುರಸಭೆಗೆ ಇನ್ನಷ್ಟು ಹೆಚ್ಚಿನ ಅನುದಾನ ತಂದುಕೊಡುವ ಮೂಲಕ ತರಕಾರಿ ಮಾರುಕಟ್ಟೆಯನ್ನು ಮಾದರಿಯನ್ನಾಗಿ ಮಾಡಲಾಗುವುದು ಎಂದರು.
ಈ ನಿಟ್ಟಿನಲ್ಲಿ ಸಧ್ಯದ ತರಕಾರಿ ಮಾರುಕಟ್ಟೆಯಲ್ಲಿ ತರಕಾರಿ ಮಾರಾಟಗಾರರಿಗೆ ಮಳೇಗಾಲದಲ್ಲಿ, ಬೇಸಿಗೆಯಲ್ಲಾಗಲಿ ವ್ಯಾಪಾರ ಮಾಡಲು ಸುಸಜ್ಜಿತ ಸ್ಥಳವಕಾಶವಿಲ್ಲದಂತಾಗಿದೆ ಜೊತೆಗೆ ಮಳೆ ಬಂದರೆ ಮಾರುಕಟ್ಟೆ ತುಂಬೆಲ್ಲ ನೀರು ತುಂಬಿಕೊಂಡು ಗಲೀಜಾಗಿ ವ್ಯಾಪಾರ ಮಾಡಲು ಹಾಗೂ ತರಕಾರಿ ಕೊಂಡುಕೊಳ್ಳುವ ಜನರಿಗೆ ತೊಂದರೆ ಅನುಭವಿಸುವತಾಗಿದೆ ಅದಲ್ಲದೇ ವ್ಯಾಪಾರಸ್ಥರು ತರಕಾರಿ ಶೇಖರಣೆ ಮಾಡಿಕೊಳ್ಳಲು ಕೂಡ ಸಮರ್ಪಕ ಜಾಗೆಯ ತೊಂದರೆ ಇದೇ ಸಧ್ಯ ಇದೇಲ್ಲವನ್ನು ಸರಿಪಡಿಸಲು ಪುರಸಭೆ ವಿಶೇಷ ಅನುದಾನವನ್ನು ಬಳಸಿಕೊಂಡು ಅಭಿವೃದ್ಧಿ ಪಡಿಸಬಹುದಾಗಿತ್ತು ಆದರೇ ಇಲ್ಲಿಯವರೆಗೂ ಸಾಧ್ಯವಾಗಿಲ್ಲ.
ಕಾರಣ ಬೆಂಗಳೂರದಂತ ಇತರೇ ಕ್ಯಾಪಿಟಲ್ ಸಿಟಿಗಳಲ್ಲಿರುವ ಶುದ್ಧ ಕುಡಿಯುವ ನೀರು, ಮಳೆ ಬಂದ ನೀರು ಎಲ್ಲೀಯೂ ಒಂದು ಹನಿ ನೀರು ನಿಲ್ಲದಂತೆ ಒಳ ಚರಂಡಿ ನಿರ್ಮಾಣ, ಶೌಚಾಲಯ, ಮಾರಾಟಗಾರರಿಗೆ ಶೇಡ್ಡುಗಳ ನಿರ್ಮಾಣ ಸೇರಿದಂತೆ ಇತರೇ ಮೂಲಬೂತ ಸೌಲಭ್ಯಗಳುಳ್ಳ ಹೈಟೆಕ್ ತರಕಾರಿ ಮಾರುಕಟ್ಟೆ ತರಹ ನಿರ್ಮಿಸಲು ಮಾರುಕಟ್ಟೆಯ ಸಂಪೂರ್ಣ ನೀಲನಕ್ಷೇ ತಯಾರಿಸಿ ಯಾರಿಗೂ ತೊಂದರೆಯಾಗದಂತೆ ಏನೇಲ್ಲ ಕ್ರಮ ಕೈಗೊಳ್ಳುವ ನಿರ್ಮಾಣದ ವೆಚ್ಚದ ಬಗ್ಗೆ ಮಾಹಿತಿ ಆದಷ್ಟು ಬೇಗ ಸಲ್ಲಿಸಬೇಕು ಮುಖ್ಯಾಧಿಕಾರಿ ಕೆ ಎಂ ಖಿಲಾರಿಯವರಿಗೆ ಇಂಜಿನಿಯರ್ ಭೀಮನಗೌಡ ಬಗಲಿಯವರಿಗೆ ಸೂಚಿಸಿದರು.
ಈ ವೇಳೆ ತಾಲೂಕಾ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಗುರು ತಾರನಾಳ, ತರಕಾರಿ ವ್ಯಾಪಾರಸ್ಥರ ಮುಖಂಡ ಡಿ ಡಿ ಬಾಗವಾನ, ಅಬ್ದೂಲಗಫೂರ ಮಕಾಂನದಾರ, ಮುಖಂಡ ಶಾಂತಗೌಡ ಪಾಟೀಲ(ನಡಹಳ್ಳಿ), ರುದ್ರಗೌಡ ಅಂಗಡಗೇರಿ, ಪುರಸಭೆ ಸದಸ್ಯರಾದ ಮೈಬೂಬ ಗೊಳಸಂಗಿ, ರೀಯಾಜಹ್ಮದ ಢವಳಗಿ,ಪಿಂಟು ಸಾಲಿಮನಿ ಹುಲಗಪ್ಪ ನಾಯಕಮಕ್ಕಳ ಸೇರಿದಂತೆ ಹಲವರು ಇದ್ದರು.