ತರಕಾರಿ ಬೆಲೆಯಲ್ಲಿ ಕುಸಿತ

ಮೈಸೂರು,ಮಾ.22:- ಕೊರೊನಾ ಎರಡನೇ ಅಲೆಯ ಅಬ್ಬರದಿಂದಾಗಿ ಕೇರಳಿಗರು ಮೈಸೂರಿಗೆ ಬರುತ್ತಿಲ್ಲ. ತರಕಾರಿ ಬೆಲೆಯಲ್ಲಿ ದಿಢೀರ್ ಕುಸಿತ ಕಂಡು ಬಂದಿದೆ.
ಮಧ್ಯವರ್ತಿಗಳು ಹಾಗೂ ಹೊರ ರಾಜ್ಯದ ವ್ಯಾಪಾರಿಗಳು ತರಕಾರಿ ಕೊಂಡುಕೊಳ್ಳಲು ನಿರಾಸಕ್ತಿ ತೋರುತ್ತಿದ್ದು, ಮೈಸೂರು ಎಪಿಎಂಸಿ ಮಾರುಕಟ್ಟೆ ಮೇಲೆ ಕೊರೊನಾ ಪರಿಣಾಮ ಬೀರಿದೆ. ತರಕಾರಿ ಬೆಲೆ ಕುಸಿತದಿಂದ ರೈತರಲ್ಲಿ ಆತಂಕ ಮನೆ ಮಾಡಿದೆ. ವಾರದ ಹಿಂದಿನ ಬೆಲೆಗೂ, ಈಗಿನ ಬೆಲೆಗೂ ಶೇ 70% ರಷ್ಟು ಇಳಿಕೆಯಾಗಿದೆ. ಕೇರಳದಲ್ಲಿ ಕೊರೊನಾ ಆರ್ಭಟ ಹೆಚ್ಚುತ್ತಿರುವುದರಿಂದ ತರಕಾರಿ ಕೊಳ್ಳಲು ಮೈಸೂರಿನತ್ತ ಕೇರಳಿಗರು ಬರುತ್ತಿಲ್ಲ. ಕೇರಳಿಗರಿಲ್ಲದೇ ತರಕಾರಿ ಬೆಲೆಗಳು ಕುಸಿತವಾಗಿದೆ. ಸದ್ಯ ಶೇ 50% ರಷ್ಟು ಮಾತ್ರ ಕೇರಳಕ್ಕೆ ತರಕಾರಿ ಪೂರೈಕೆಯಾಗುತ್ತಿದೆ. ವ್ಯಾಪಾರಿಗಳಿಲ್ಲದೇ ರೈತರಿಗೆ ನಷ್ಟವುಂಟಾಗುತ್ತಿದೆ. ರೈತರು ಬೆಳೆದ ತರಕಾರಿಗಳಿಗೆ ವ್ಯಾಪಾರವಿಲ್ಲದೆ ಲೋಡ್ ಗಟ್ಟಲೆ ತರಕಾರಿಗಳು ವ್ಯರ್ಥವಾಗುತ್ತಿದೆ.