ತರಕಾರಿ ಬೀಜ ವಿತರಣೆ

ಲಕ್ಷ್ಮೇಶ್ವರ,ಮಾ14: ತಾಲೂಕ ಪಂಚಾಯತಿಯ ಸಾಮರ್ಥ್ಯ ಸೌಧದಲ್ಲಿ ಶಾಸಕ ಡಾ. ಚಂದ್ರು ಲಮಾಣಿ ಅವರು ತೋಟಗಾರಿಕಾ ಇಲಾಖೆಯ ವತಿಯಿಂದ ನೀಡಲಾದ ತರಕಾರಿ ಬೀಜಗಳನ್ನು ಫಲಾನುಭವಿಗಳಿಗೆ ನೀಡಿದರು.
ತೋಟಗಾರಿಕಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಸುರೇಶ್ ಕುಂಬಾರ್ ಅವರು ಬರಗಾಲದ ಹಿನ್ನೆಲೆಯಲ್ಲಿ ರೈತರಿಗೆ ಆರ್ಥಿಕವಾಗಿ ಅನುಕೂಲವಾಗಲು 2000 ರೂಗಳ ತರಕಾರಿ ಬೀಜಗಳನ್ನು ವಿತರಿಸಲು ಇಲಾಖೆ ವ್ಯವಸ್ಥೆ ಮಾಡಿದೆ ಎಂದರು 295 ಪರಿಶಿಷ್ಟ ಜಾತಿ ಮತ್ತು ಜನಾಂಗದವರಿಗೆ ಮತ್ತು 236 ಸಾಮಾನ್ಯ ರೈತರಿಗೆ ವಿತರಿಸಲಾಗುವುದು ಎಂದರು.
ಸಾಂಕೇತಿಕವಾಗಿ ವಿತರಣೆ ಮಾಡಿ ಮಾತನಾಡಿದ ಶಾಸಕ ಚಂದ್ರು ಲಮಾಣಿಯವರು ಬರಗಾಲದ ಹಿನ್ನೆಲೆಯಲ್ಲಿ ರೈತರಿಗೆ ಅಲ್ಪಸ್ವಲ್ಪ ನೀರಿನಿಂದ ಬೆಳೆಯಬಹುದಾದ ತರಕಾರಿ ಬೀಜಗಳನ್ನು ವಿತರಿಸಲು ಇಲಾಖೆ ವ್ಯವಸ್ಥೆ ಮಾಡಿದ್ದು ರೈತರು ಇದರ ಲಾಭ ಪಡೆದುಕೊಳ್ಳಬೇಕು ಎಂದರು.
ಈ ಸಂದರ್ಭದಲ್ಲಿ ತಹಶೀಲ್ದಾರ್ ವಾಸುದೇವ್ ವಿ ಸ್ವಾಮಿ ತಾಲೂಕ ಪಂಚಾಯಿತಿ ಆಡಳಿತ ಅಧಿಕಾರಿ ಜಗದೇವ್ ಬಿ ತಾಲೂಕಾ ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಧರ್ಮರ ಕೃಷ್ಣಪ್ಪ ಇದ್ದರು.