ತರಕಾರಿ ನುಚ್ಚಿನುಂಡೆ

ಬೇಕಾಗುವ ಪದಾರ್ಥಗಳು:
ನೆನೆಸಿದ ತೊಗರಿಬೇಳೆ – ೧ ಲೋಟ
ನೆನೆಸಿದ ಕಡ್ಲೆಬೇಳೆ – ೧ ಲೋಟ
ಉಪ್ಪು, ಇಂಗು, ಕೊತ್ತಂಬರಿಸೊಪ್ಪು, ನಿಂಬೆರಸ, ಹಸಿಮೆಣಸಿನಕಾಯಿ, ಶುಂಠಿ, ಕರಿಬೇವು, ತೆಂಗಿನತುರಿ, ಬೀನ್ಸ್, ಕ್ಯಾರೆಟ್, ಬೇಯಿಸಿದ ಅವರೆಕಾಳು.
ವಿಧಾನ: ನೆನೆಸಿದ ತೊಗರಿಬೇಳೆ, ನೆನೆಸಿದ ಕಡ್ಲೆಬೇಳೆ, ಉಪ್ಪು, ಇಂಗು, ಕೊತ್ತಂಬರಿಸೊಪ್ಪು, ನಿಂಬೆರಸ, ಹಸಿಮೆಣಸಿನಕಾಯಿ, ಶುಂಠಿ, ಕರಿಬೇವು, ತೆಂಗಿನತುರಿ, ಬೀನ್ಸ್, ಕ್ಯಾರೆಟ್, ಬೇಯಿಸಿದ ಅವರೆಕಾಳು ಹಾಕಿ ಕಲೆಸಿ, ಉದ್ದುದ್ದ ಉಂಡೆಮಾಡಿ ಎಣ್ಣೆ ಸವರಿದ ತಟ್ಟೆಗೆ ಹಾಕಿ, ಇಡ್ಲಿಯ ರೀತಿ ಹಬೆಯಲ್ಲಿ ೮ – ೧೦ ನಿಮಿಷ ಬೇಯಿಸಬೇಕು.