ತರಕಾರಿ ಗೊಜ್ಜು

ಬೇಕಾಗುವ ಸಾಮಾಗ್ರಿಗಳು

  • ೩ ೧/೨ ಚಮಚ ಕೆಂಪು ಮೆಣಸಿನ ಪುಡಿ * ೧ ಚಮಚ ಮೆಂತ್ಯೆ ಕಾಳು * ಈರುಳ್ಳಿ, ೨ ಹಸಿರು ಮೆಣಸಿನಕಾಯಿ, ಶುಂಠಿ ಮತ್ತು ಬೆಳ್ಳುಳ್ಳಿ ಪೇಸ್ಟ್ * ಅಗತ್ಯವಿದ್ದಷ್ಟು ಕತ್ತರಿಸಿದ ಟೊಮೆಟೊ, ಕ್ಯಾಪ್ಸಿಕಂ, ಹೂಕೋಸು, ಬಟಾಣಿ * ೧ ಚಮಚ ಗರಂ ಮಸಾಲೆ * ಉಪ್ಪು * ೧/೨ ಚಮಚ ಅರಿಶಿಣ * ೧ ಚಮಚ ಧನಿಯಾ ಪುಡಿ * ೧ ಚಮಚ ಕಸೂರಿ ಮೇತಿ * ೨ ಕಪ್ ನೀರು
    ಮಾಡುವ ವಿಧಾನ:
  • ಸ್ವಲ್ಪ ಎಣ್ಣೆಯೊಂದಿಗೆ ಮೇಲೆ ತಿಳಿಸಿರುವ ತರಕಾರಿಗಳನ್ನು ಸ್ವಲ್ಪ ಕೆಂಪುಮೆಣಸಿನ ಪುಡಿ ಮತ್ತು ಮೆಂತ್ಯೆ ಕಾಳುಗಳೊಂದಿಗೆ ಹುರಿದುಕೊಳ್ಳಬೇಕು.
  • ಇದಕ್ಕೆ ಈರುಳ್ಳಿ ಮತ್ತು ಇನ್ನಿತರ ಪೇಸ್ಟನ್ನು ಬೆರೆಸಿ ಚೆನ್ನಾಗಿ ಹುರಿಯಬೇಕು.
  • ಅರಿಶಿಣ, ಧನಿಯಾ ಪುಡಿ, ಗರಂ ಮಸಾಲೆ, ಉಪ್ಪು, ನೀರು ಹಾಕಿ ತರಕಾರಿ ಸ್ವಲ್ಪ ಮೆತ್ತಗಾಗುವವರೆಗೆ ಬೇಯಿಸಿದರೆ ತರಕಾರಿ ಕರಿ ತಿನ್ನಲು ತಯಾರಾಗಿರುತ್ತೆ.
  • ಕೊನೆಯಲ್ಲಿ ಇದರ ಮೇಲೆ ಕಸೂರಿ ಮೇತಿ ಹಾಕಿ ಬಿಸಿ ಇದ್ದಾಗಲೆ ತಿಂದರೆ ಒಳ್ಳೆ ರುಚಿ.