ತಮ್ಮ ಸಂಗೀತದಿಂದ ಜಿಲ್ಲೆಗೆ ಕೀರ್ತಿ ತಂದ ಮಹಾನ್ ಚೇತನ

ಸಿರವಾರ,ಮಾ.೨೫-ಬರಿ ಬಿಸಿಲು ನಾಡು ಎಂದು ಕರೆಸಿಕೊಳುತ್ತಿದ್ದ ಜಿಲ್ಲೆಯನ್ನು ತಮ್ಮ ಹಿಂದುಸ್ಥಾನ ಸಂಗೀತದ ಮೂಲಕ ಜಿಲ್ಲೆಗೆ ಕೀರ್ತಿ ತಂದಿರುವ ಪಂಡಿತ ಸಿದ್ದರಾಮಜಂಬಲದಿನ್ನಿ ಅವರ ಸ್ವಗ್ರಾಮಕ್ಕೆ ಕಮಾನು ನಿರ್ಮಾಣ ನನ್ನ ಅವದಿಯಲ್ಲಿ ಆಗುತ್ತಿರುವುದಕ್ಕೆ ಹೆಮ್ಮೆಯಾಗುತ್ತಿದೆ ಎಂದು ಮಾನ್ವಿ ಕ್ಷೇತ್ರದ ಶಾಸಕರಾದ ರಾಜಾ ವೆಂಕಟಪ್ಪ ನಾಯಕ ಹೇಳಿದರು. ತಾಲ್ಲೂಕಿನ ಚಾಗಭಾವಿ&ಜಂಬಲದಿನ್ನಿ ಕ್ರಾಸ್ ಹತ್ತಿರ (ವಯಾ ಸಿರವಾರ-ಮಾನವಿ ಮುಖ್ಯ ರಸ್ತೆ) ಖ್ಯಾತ ಹಿಂದೂಸ್ತಾನಿ ಗಾಯಕರಾದ ಶ್ರೀ ಪಂಡಿತ ಸಿದ್ದರಾಮ ಜಂಬಲದಿನ್ನಿ ಅವರ ಹೆಸರಿನ ಮಹಾದ್ವಾರ ನಿರ್ಮಾಣಕ್ಕೆ ಶಾಸಕರ ಅನುದಾನದಲ್ಲಿ ೫ ವೆಚ್ಚದಲ್ಲಿ ಶಂಕುಸ್ಥಾಪನೆ ಮಾಡಿ ಮಾತನಾಡಿದ ಅವರು ಈ ಭಾಗದ ಬಹುದಿನಗಳ ಬೇಡಿಕೆಯನ್ನು ಈಡೇರಿಸಿರುವೆ.ಪಂ. ಸಿದ್ದರಾಮ ಜಂಬಲದಿನ್ನಿ ನನ್ನ ಕ್ಷೇತ್ರದವರಾಗಿರುವುದಕ್ಕೆ ನನಗೆ ಹೆಮ್ಮೆಯಾಗಿದೆ. ಕೆಲವರು ಅವರನ್ನ ರಾಯಚೂರು ಸಮಿಪದ ಜಂಬಲದಿನ್ನಿ ಗ್ರಾಮದವರು ಎಂದುಕೊಂಡಿದ್ದಾರೆ. ಜಿಲ್ಲಾ ಕೇಂದ್ರದಲ್ಲಿರುವ ರಂಗಮಂದಿರಕ್ಕೆ ಅವರ ಹೆಸರು ಇಟ್ಟಿರುವುದಕ್ಕೆ ಹೆಮ್ಮೆ ಪಡುತ್ತೆವೆ ಆದರೆ ಅವರ ಜನ್ಮ ದಿನಾಚರಣೆ ಸರ್ಕಾರದಿಂದ ಅದೇ ರಂಗಮಂದಿರದಲ್ಲಿ ಆಚರಣೆ ಮಾಡಿದರೆ ಸಂಪೂರ್ಣ ಅರ್ಥ ಬರುತ್ತದೆ. ಮುಂದಿನ ದಿನಗಳಲ್ಲಿ ಆ ಕೆಲಸ ಮಾಡೊಣ ಎಂದರು. ನಾಗರಾಜ ಬೋಗಾವತಿ, ಖಿ ಬಸವರಾಜ್ , ಖಿ ಬಸವರಾಜ ಗೌಡ , ಖಿ ಅಶೋಕ್,ಅಮರೇಶ್ . ಸುರೇಶ್ ಒ, ಮಲ್ಲಿಕಾರ್ಜುನ ಬಡಿಗೇರ್ ಬಸವರಾಜ್ ಮಡಿವಾಳ, ಅಮರೇಶ್ ಗೌಡ, ವಿರೂಪಾಕ್ಷಿ ಸ್ವಾಮಿ,ಊ ಶರಬನಗೌಡ , ವೀರೇಶ್ ಹಿರೇಮಠ್ ,ವೀರೇಶ್ ಖ , ಜಾಲಾಪೂರ ಕ್ಯಾಂಪ್ ರಾಮಾಚಾರಿ, ಚಂದ್ರಶೇಖರ ಎಲ್ಹೇರಿ. ಚಿದಾನಂದ ಕರಿಗೂಳಿ, ದಾನಪ್ಪ ಸಿರವಾರ.ಮಂಜುನಾಥ ಒ , ಶಿವಪ್ರಸಾದ, ರವಿ ಪೂಜಾರಿ , ವೆಂಕಟೇಶ್ ಮಡಿವಾಳ , ಸಾಬಯ್ಯ ನಾಯಕ್ , ಗ್ಯಾನಪ್ಪ ಚಲುವಾದಿ ಲಕ್ಷ್ಮಣ ಸಿರವಾರ, ಕರಿಯಪ್ಪ ನವಲಕಲ್, ಅಮರೇಶ ಸಾಹುಕಾರ್, ಚನ್ನಪ್ಪ ಹೂಗಾರ್, ಬಸವರಾಜ ಹೂಗಾರ, ಬಸವಂತರಾಯ,ಶ್ರೀ ಆಂಜನೇಯ,ಶ್ರೀ ವಿರೂಪಾಕ್ಷಿ,ಎ.ಬಸವರಾಜ ಸೇರಿದಂತೆ ಇನ್ನಿತರರು ಇದರು.