ತಮ್ಮ ವೃತ್ತಿ ಆಯ್ಕೆಯಲ್ಲಿ ಸೇನಾ ಸೇವೆಗೆ ಮೊದಲ ಆದ್ಯತೆ ಕೊಡಿ:ಜಿ.ಎಸ್.ಕನ್ವರ್

ಬೀದರ, ಮೇ 13: ಎನ್.ಸಿ.ಸಿ.ಯ ಪ್ರತಿಹಂತದ ತರಬೇತಿ, ಸಾಮಾಜಿಕ ಕಾರ್ಯಕ್ರಮಗಳಲ್ಲಿ ಸಕ್ರೀಯವಾಗಿ ಭಾಗವಹಿಸುವಂತೆ ಹಾಗೂ ರಾಷ್ಟ್ರೀಯ ಮಟ್ಟದ ಕ್ಯಾಂಪ್‍ಗಳಲ್ಲಿ ಅತ್ಯತ್ತಮ ಪ್ರದರ್ಶನ ನೀಡುವಂತೆ ಹಾಗೂ ತಮ್ಮ ವೃತ್ತಿಯ ಆಯ್ಕೆಯಲ್ಲಿ ಸೇನಾ ಸೇವೆಗೆ ಮೊದಲ ಆದ್ಯತೆ ಕೊಡಬೇಕೆಂದು ಉಪ ಮಹಾನಿರ್ದೇಶಕರು (ಆಆಉ) ನ್ಯಾಶನಲ್ (ರಾಷ್ಟ್ರೀಯ) ಕೆಡೆಟ್ ಕೋರ್ (ಓಅಅ) ಕರ್ನಾಟಕ ಮತ್ತು ಗೋವಾ ನಿರ್ದೇಶನಾಲಯ ಬೆಂಗಳೂರು ಏಯರ್ ಕಮಡೋರ್ ಬಿ.ಎಸ್. ಕನ್ವರ್ ಹೇಳಿದರು.
ಅವರು ಇತ್ತೀಚಿಗೆ 3 (ಕರ್ನಾಟಕ) ಏಯರ್ ಸ್ಕ್ವಾಡ್ರನ್ (ತಾಂತ್ರಿಕ) ಎನ್.ಸಿ.ಸಿ ಬೀದರಗೆ ಭೇಟಿ ನೀಡಿದಾಗ ಗ್ರೂಪ್ ಕ್ಯಾಪ್ಟನ್ ಜಿ.ಬಿ.ಆರ್ ದತ್ತು ಕಮಾಂಡಿಂಗ್ ಆಫೀಸರ್ 3 (ಕರ್ನಾಟಕ) ಏಯರ್ ಸ್ಕ್ವಾಡ್ರನ್ (ತಾಂತ್ರಿಕ) ಎನ್.ಸಿ.ಸಿ ಇವರು ಎನ್.ಸಿ.ಸಿ ಕಡೆಟ್‍ಗಳ ಮುಖಾಂತರ ವಿದ್ಯುಕ್ತವಾದ ಗೌರವ ವಂದನೆ ಸ್ವೀಕರಿಸಿ ಮಾತನಾಡಿದರು.
ಬೀದರ ಎನ್.ಸಿ.ಸಿ ಘಟಕದ ಕಮಾಂಡಿಂಗ್ ಆಫೀಸರ್ ಇವರು ಘಟಕದಲ್ಲಿ ಎನ್.ಸಿ.ಸಿ ಕೆಡೆಟ್‍ಗಳಿಗೆ ಕೊಡಲಾಗುವ ತರಬೇತಿ ಹಾಗೂ ಕೆಡೆಟ್‍ಗಳು ಭಾಗವಹಿಸುವ ಹಲವಾರು ಸಾಮಾಜಿಕ ಕಾರ್ಯಚಟುವಟಿಕೆಗಳ ಕುರಿತಾಗಿ ಸಂದರ್ಶಕ ಅಧಿಕಾರಿಗಳಿಗೆ ವಿವರಿಸಿದರು.
ತದನಂತರ ಸಂದರ್ಶಕ ಅಧಿಕಾರಿಗಳು ಘಟಕದಲ್ಲಿ ಲಭ್ಯವಿರುವ ತರಬೇತಿಯ ಸಾಧನಗಳು ಮತ್ತು ಸೌಲಭ್ಯಗಳನ್ನು ವೀಕ್ಷಿಸಿ ಸಲಹೆ ನೀಡಿದರು. ನಂತರ ಅವರು ಎನ್.ಸಿ.ಸಿ ಸೌಲಭ್ಯವನ್ನು ಹೊಂದಿರುವ ವಿವಿಧ ಶೈಕ್ಷಣಿಕ ಸಂಘ ಸಂಸ್ಥೆಗಳ ಅಸೋಸಿಯೇಟ್ ಎನ್.ಸಿ.ಸಿ ಆಫೀಸರ್ಸ್ (ಂಓಔs), ಎನ್.ಸಿ.ಸಿ ತರಬೇತುದಾರರು, ಸಿಬ್ಬಂದಿವರ್ಗ ಹಾಗೂ ಕೆಡೆಟ್‍ಗಳ ಜೊತೆ ಸಮಾಲೋಚನೆ ನಡೆಸಿದರು.
ಕೆಡೆಟ್‍ಗಳೊಂದಿಗೆ ಸಮಾಲೋಚನೆ ನಡೆಸಿದ ಅಧಿಕಾರಿಗಳು ಎನ್.ಸಿ.ಸಿ ತರಬೇತಿಯ ವಿವಿಧ ಆಯಾಮಗಳು ಆದರಿಂದ ವಿದ್ಯಾರ್ಥಿ ಜೀವನದಲ್ಲಿ ಆಗುವ ಲಾಭಗಳ ಕುರಿತು ಚರ್ಚಿಸಿದರು. ಕೆಡೆಟ್‍ಗಳ ಎನ್.ಸಿ.ಸಿ ತರಬೇತಿ, ಶೈಕ್ಷಣಿಕ ಸಾಧನೆ, ವೃತ್ತಿ ಜೀವನ ಹಾಗೂ ವೈಯಕ್ತಿಕ ಜೀವನದಲ್ಲಿ ಯಶಸ್ಸು ಸಿಗಲೆಂದು ಎನ್.ಸಿ.ಸಿ ಉಪ ಮಹಾನಿರ್ದೇಶಕರು ಹಾರೈಸಿದರು.
ಎನ್.ಸಿ.ಸಿ ಸಮೂಹ ಪ್ರಧಾನ ಕಛೇರಿ ಬಳ್ಳಾರಿಯ ಮುಖ್ಯ ಕಮಾಂಡರ್ ಕರ್ನಲ್ ಡಿ.ಎಸ್.ಧಾಮಿ ಸೇನಾ ಮೆಡಲ್ (Sಒ) ಹಾಗೂ ಆಡಳಿತಾಧಿಕಾರಿ ಕರ್ನಲ್ ವಿ.ಎಸ್. ಠಾಕೂರ್ ಉಪಸ್ಥಿತರಿದ್ದರು. ಎನ್.ಸಿ.ಸಿ ಘಟಕದ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗ ನಿರ್ವಹಿಸುತ್ತಿರುವ ಅತ್ಯುತ್ತಮ ಸೇವೆಯನ್ನು ಶ್ಲಾಘಿಸಿದ ಉಪ ಮಹಾನಿರ್ದೇಶಕರು ಇನ್ನೂ ಉತ್ತಮ ಸೇವೆ ಸಾಧನೆಗೈದು ಘಟಕವನ್ನು ಉನ್ನತ ಸ್ಥಾನಕ್ಕೆ ಕೊಂಡೊಯ್ಯುವಂತೆ ಹಾರೈಸಿದರೆಂದು ಬೀದರ 3(ಕರ್ನಾಟಕ) ಏಯರ್ ಸ್ಕ್ವಾಡ್ರನ್(ಟಿ) ಎನ್.ಸಿ.ಸಿ.ಸಾರ್ಜೆಂಟ್ ಬಸವರಾಜ ಕಲಾಗತಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.