ತಮ್ಮ ಭವಿಷ್ಯಕ್ಕಾಗಿ ಹೊಲಸು ರಾಜಕೀಯ ಮಾಡುತ್ತಿರುವ ರವಿ ಬೋಸರಾಜು

ರಾಯಚೂರು.ಮೇ.೩೧- ಶಾಸಕ ಡಾ.ಶಿವರಾಜ ಪಾಟೀಲ್ ಅವರ ವಿರುದ್ಧ ಕಾಂಗ್ರೆಸ್ ಕಾರ್ಯಕರ್ತ ರವಿ ಬೋಸರಾಜು ಉದ್ದೇಶ ಪೂರ್ವಕವಾಗಿ ಇಲ್ಲಸಲ್ಲದ ಸುಳ್ಳು ಹೇಳಿ ಅಪಪ್ರಚಾರ ಮಾಡುತ್ತಿರುವುದು ಸರಿಯಾದ ಕ್ರಮವಲ್ಲವೆಂದು ಬಿಜೆಪಿಯ ಯುವ ಮುಖಂಡ ರಂಗ ಅಸ್ಕಿಹಾಳ ಅವರು ಹೇಳಿದ್ದಾರೆ.
ಶಾಸಕರ ವಿರುದ್ಧದ ಹೇಳಿಕೆಗಳಿಗೆ ಪ್ರತಿಕ್ರಿಯಿಸಿ, ಸನ್ನಿ ಬಿನ್ನಿ ಇವರು ಅನಾವಶ್ಯಕವಾಗಿ ಶಾಸಕರ ವಿರುದ್ಧ ಸುಳ್ಳು ಆರೋಪ ಮಾಡುವುದು ಒಳ್ಳೆಯದಲ್ಲವೆಂದು ಹೇಳಿಕೆ ನೀಡಿದ್ದಾರೆ. ಇವರ ವಿರುದ್ಧವೂ ನಿಮ್ಮ ಕಾಂಗ್ರೆಸ್ಸಿನ ಯುವಕರಿಂದ ಪ್ರಚೋದನಕಾರಿ ಹೇಳಿಕೆ ಕೊಡಿಸುವುದು ಒಳ್ಳೆಯದಲ್ಲ. ರವಿ ಬೋಸರಾಜು ಅವರ ನಾಟಕ ರಾಯಚೂರು ಜನರಿಗೆ ಹೊಸದೇನಲ್ಲ. ಇಂತಹ ನಾಟಕ ನೋಡಿ ಜನ ಬೇಸತ್ತಿದ್ದಾರೆ. ಶಾಸಕ ಡಾ.ಶಿವರಾಜ ಪಾಟೀಲ್ ಅವರು ಕೊರೊನಾ ಆರಂಭದಿಂದಲೂ ನಿರಂತರ ಕಾರ್ಯದಲ್ಲಿ ತೊಡಗಿದ್ದಾರೆ.
ಜಿಲ್ಲಾಧಿಕಾರಿಗಳ ಮುಖಾಂತರ ಸಂಬಂಧಪಟ್ಟ ಅಧಿಕಾರಿಗಳ ಮೂಲಕ ಜನರಿಗೆ ಚಿಕಿತ್ಸೆ ದೊರೆಕಿಸಿಕೊಡುವಲ್ಲಿ ನೆರವಾಗಿದ್ದಾರೆ. ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಿಗೆ ಯಾವುದೇ ತೊಂದರೆಯಾಗದಂತೆ ಗಮನ ಹರಿಸುತ್ತಿದ್ದಾರೆ. ಏನಾದರೂ ಸಮಸ್ಯೆ ಬಂದಲ್ಲಿ ತಕ್ಷಣವೇ ಪರಿಹಾರ ಒದಗಿಸುವ ವ್ಯವಸ್ಥೆ ಶಾಸಕರು ಮಾಡುತ್ತಿದ್ದಾರೆ. ಆದರೆ, ಅನಗತ್ಯವಾಗಿ ಸುಳ್ಳು ಹೇಳಿ, ರವಿ ಬೋಸರಾಜು ಅವರು ಅಪಪ್ರಚಾರ ನಡೆಸಿದ್ದಾರೆ. ಸನ್ನಿ ರೋನಾಲ್ಡ್ ಇವರು ವಿಡಿಯೋದ ಹೇಳಿಕೆ ಪ್ರಕಾರ ಪ್ರಜಾಪ್ರಭುತ್ವದಲ್ಲಿ ಶಾಸಕರಿಗೆ ಪ್ರಶ್ನೆ ಕೇಳುವ ಹಕ್ಕು ಎಲ್ಲಾರಿಗೆ ಇದೆ.
ಆದರೆ, ಇಂತಹ ಕೊರೊನಾ ಕಠಿಣ ಪರಿಸ್ಥಿತಿಯಲ್ಲಿ ಈ ಬಗ್ಗೆ ಅಪಪ್ರಚಾರ ಮಾಡಿ, ಜನರಲ್ಲಿ ಗೊಂದಲ ಸೃಷ್ಟಿಸುವುದು ಹೇಳಿಕೆ ನೀಡಬಾರದೆಂದು ಸ್ಪಷ್ಟಪಡಿಸಿದ್ದಾರೆ. ಆದರೂ, ಈ ವಿಷಯ ಅರಿತುಕೊಳ್ಳದೇ, ಸುಮ್ಮನೆ ಅನಾವಶ್ಯಕ ಯುವಕರನ್ನು ಪ್ರೇರೆಪಿಸಿ, ಹೊಲಸು ರಾಜಕೀಯಕ್ಕೆ ಬಳಸಿಕೊಳ್ಳುತ್ತಿದ್ದಾರೆ. ಮತ್ತು ಸಮುದಾಯಗಳ ಮಧ್ಯೆ ಕಿಚ್ಚಿನ ವಾತಾವರಣ ಮಾಡಲಾಗುತ್ತಿದೆ. ಆದರೆ, ಒಂದು ವಿಷಯ ಅರಿತುಕೊಳ್ಳಬೇಕು. ಎಷ್ಟೇ ಪ್ರಯತ್ನಿಸಿದರೂ ನಾವು ಒಗ್ಗಟ್ಟಾಗಿದ್ದೇವೆ. ಆದ್ದರಿಂದ ಅವರು ಈ ಹೊಲಸು ರಾಜಕೀಯ ಇಲ್ಲಿಗೆ ನಿಲ್ಲಿಸಿ, ಸನ್ನಿ ಬಿನ್ನಿ ಅವರ ವಿರುದ್ಧ ಅನಾವಶ್ಯಕವಾಗಿ ಹೇಳಿಕೆ ನೀಡುವುದು ಸ್ಥಗಿತಗೊಳಿಸಬೇಕು. ಇಲ್ಲವಾದಲ್ಲಿ ಮುಂದಾಗುವ ಪರಿಣಾಮಗಳಿಗೆ ಅವರೇ ಹೊಣೆಯಾಗುತ್ತಾರೆ.