ತಮ್ಮ ಜೀವನ ದೇಶ ಸೇವೆಗಾಗಿ ಮುಡಿಪಾಗಿಟ್ಟವರು ಸ್ವಾಮಿ ವಿವೇಕಾನಂದರು: ಡಾ. ಬಿರಾದರ

ಬೀದರ್:ಜ.14: ದೇಶದಲ್ಲಿನ ಯುವ ಸಮೂಹವನ್ನು ರಾಷ್ಟ್ರದ ಸಂಪತ್ತನ್ನಾಗಿ ಮಾರ್ಪಡಿಸುವ ದೃಷ್ಟಿಯಿಂದ ಮನೆಯ ಕುಟುಂಬ ವ್ಯಕ್ತಿಗತ ಹಿತಾಸಕ್ತಿ ಎಲ್ಲವನ್ನು ತೊರೆದು ಸನ್ಯಾಸತ್ವವನ್ನು ಸ್ವಿಕರಿಸಿ ವಿದೇಶಗಳು ಸೇರಿದಂತೆ ಇಡೀ ಭಾರತವನ್ನು ಸುತ್ತಿ ದೇಶದ ಪ್ರೀತಿ, ಕಾಳಜಿ ಮೂಡಿಸುವಲ್ಲಿ ಹಾಗೂ ತಮ್ಮ ಜೀವನವನ್ನ ದೇಶ ಸೇವೆಗಾಗಿ ಮುಡಿಪಾಗಿಟ್ಟವರು ಸ್ವಾಮಿ ವಿವೇಕಾನಂದರು ಎಂದು ಪ್ರಭಾರಿ ಪ್ರಾಚಾರ್ಯ ಡಾ. ರಾಜೇಂದ್ರ ಬಿರಾದರ ಅಭಿಪ್ರಾಯ ಪಟ್ಟರು.
ನಿನ್ನೆ ನಗರದ ಸ್ಥಳೀಯ ಕರ್ನಾಟಕ ಪದವಿ ಕಾಲೇಜು ಏರ್ಪಡಿಸಿದ 161ನೇಯ ಸ್ವಾಮಿ ವಿವೇಕಾನಂದರ ಜಯಂತ್ಯೂತ್ಸವ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿ, ಭಾರತ ದೇಶವನ್ನು ಇಡೀ ವಿಶ್ವವೇ ಉನ್ನತ ಸ್ಥಾನದಿಂದ ಗುರುತಿಸಬೇಕು ಭಾರತದಲ್ಲಿ ವಾಸಿಸುತ್ತಿರುವ ಸಹೋದರ ಸಹೋದರಿಯರು ತಾಯಿ ತಂದೆಯರು ಸುಖವಾಗಿ ಬಾಳಬೇಕೆಂಬುದೇ ವೀವೆಕಾನಂದರ ಆಶಯವಾಗಿತ್ತು ಏಳಿ ಎದ್ದೇಳಿ ಗುರಿ ಮುಟ್ಟುವ ತನಕ ನಿಲ್ಲದಿರಿ ನಿಮ್ಮ ಏಳಿಗೆಗೆ ನೀವೆ ಶಿಲ್ಪಿ ನಿಮ್ಮ ಭವಿಷ್ಯ ನೀವೇ ರೂಪಿಸಿಕೊಳ್ಳಿ ಗುರಿ ತಲುಪಬೇಕೆಂಬ ಹಟವಿದ್ದರೆ ಗೆಲುವು ತಾನಾಗಿಯೇ ಹಿಂದೆ ಬರುತ್ತದೆ. ಸೋಲು-ಗೆಲುವು ಎರಡನ್ನು ಸಮನಾಗಿ ಸ್ವಿಕರಿಸುವ ಮನೋಭಾವ ಇರುವವರು ಮಾತ್ರ ಯಶಸ್ಸಿನ ಮೆಟ್ಟಿಲನ್ನು ಸುಲಭವಾಗಿ ಹತ್ತುತ್ತಾರೆ ಎಂದರು.
ವಿದ್ಯಾರ್ತಿಗಳ ಕ್ಷೇಮ ಅಧಿಕಾರಿ ಪೆÇ್ರೀ. ಶ್ರಿಕಾಂತ ದೊಡ್ಡಮನಿ ಮಾತನಾಡಿ, ಸಾಧನೆ ಮಾಡಬೇಕೆಂಬ ಹಂಬಲ ಇರುವರೆಗೆ ವಿವೇಕಾನಂದರ ಮಾತುಗಳು ಸಾಧನೆಯ ಹಾದಿ ಕಂಡುಕೊಳ್ಳಲು ಸಹಾಯಕಾರಿ ಮತ್ತು ಮಾರ್ಗದರ್ಶಕವಾಗುತ್ತದೆ ಸಿದ್ದಾಂತ ವಿಚಾರ ಆದರ್ಶಗಳಿಂದ ಪ್ರಪಂಚದ ಗಮನವನ್ನು ತನ್ನತ್ತ ಸೆಳೆದುಕೊಂಡು ಯುವ ಜನಾಂಗಕ್ಕೆ ಆದರ್ಶವಾಗಿದ್ದರು. ರಾಮಕೃಷ್ಣ ಪರಮಹಂಸರ ಶಿಷ್ಯರಾಗಿ ಶ್ರದ್ಧೆ ಭಕ್ತಿಯಿಂದ ವಿವಿಧ ವಿಚಾರಗಳ ಬಗ್ಗೆ ಜ್ಞಾನ ಸಂಪಾದಿಸಿಕೊಂಡು ಗುರುವಿಗೆ ತಕ್ಕ ಶಿಷ್ಯರಾಗಿ ರೂಪುಗೊಂಡರು ಎಂದರು.
ಕಾರ್ಯಕ್ರಮ ನಿರೂಪಣೆ ಪೆÇ್ರೀ. ಅಶೋಕ ಹುಡೇದ ನಡೆಸಿಕೊಟ್ಟರು. ಡಾ.ಎಂ.ಎಸ್.ಚೆಲ್ವಾ ವಂದಿಸಿದರು. ಇದೇ ಸಂದರ್ಭದಲ್ಲಿ ರಾಷ್ಟ್ರೀಯ ಸೇವಾ ಯೋಜನೆಯ ಸಂಯೋಜನಾ ಅಧಿಕಾರಿ ಪೆÇ್ರೀ. ಸೋಮನಾಥ ಬಿರಾದರ, ಪೂಜಾ ಶ್ರೀಗಿರಿ, ಶ್ರೀ ಜಗದೀಶ ಬುರಾಳೇ, ಜ್ಯೋತಿ ಪಾಟೀಲ ಹಾಗೂ ವಿದ್ಯಾರ್ಥಿಗಳು, ಉಪನ್ಯಾಸಕರು ಕಾರ್ಯಕ್ರಮದಲ್ಲಿ ಹಾಜರಿದ್ದರು.