ತಮ್ಮ ಅನಕೂಲಕ್ಕಾಗಿ ಮಾಡಿರುವ ರಸ್ತೆಯನ್ನು ಮುಚ್ಚಿಸಿ

ಕೋಲಾರ,ನ.೯- ನಗರದ ಹೊರವಲಯದ ಬೆಂಗಳೂರು ಚೆನ್ನೈ ರಾಷ್ಟ್ರೀಯ ಹೆದ್ದಾರಿಯ ಟಮಕ ಸಮೀಪದ ಸರ್ವಿಸ್ ರಸ್ತೆಯಲ್ಲಿ ಶ್ರೀ ನಾಗಾರ್ಜುನ ಹೋಟೆಲ್ ಮಾಲೀಕರು ಹೆದ್ದಾರಿಯಲ್ಲಿ ರಸ್ತೆ ಮಾಡಿರುವುದು ಸರಿಯಲ್ಲ. ಈ ಕೂಡಲೇ ತೆರೆದಿರುವ ರಸ್ತೆಯನ್ನು ಮುಚ್ಚಲು ಸಂಬಂಧಪಟ್ಟ ಹೆದ್ದಾರಿ ಅಧಿಕಾರಿಗಳು ಸೂಕ್ತ ಕ್ರಮ ವಹಿಸುವಂತೆ ಆಗ್ರಹಿಸಿ ನಮ್ಮ ಕೋಲಾರ ರೈತ ಸಂಘದಿಂದ ರಾಷ್ಟ್ರೀಯ ಹೆದ್ದಾರಿ ಮುಖ್ಯಸ್ಥ ರೆಡ್ಡಿ ಅವರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ನಮ್ಮ ಕೋಲಾರ ರೈತ ಸಂಘದ ಕೋಟಿಗಾನಹಳ್ಳಿ ಗಣೇಶ್‌ಗೌಡ ಮಾತನಾಡಿ, ಹೆದ್ದಾರಿಯಲ್ಲಿ ಆರ್.ಎಲ್.ಜಾಲಪ್ಪ ಆಸ್ಪತ್ರೆ ಅವರ ಹೆಸರರನ್ನು ಹೇಳಿಕೊಂಡು, ನಾಗಾರ್ಜುನ ಹೋಟೆಲ್ ಮಾಲೀಕರು ತಮ್ಮ ವೈಯುಕ್ತಿಕ ಕಾರಣಕ್ಕಾಗಿ ಅನುಕೂಲ ಮಾಡಿಕೊಳ್ಳುವುದಕ್ಕೆ ಅವಕಾಶವನ್ನು ನೀಡಬಾರದೆಂದರಲ್ಲದೆ, ಅವಕಾಶ ಆಗುವುದಂತೂ ನಾಗಾರ್ಜುನ ಹೋಟೆಲ್ ಅವರಿಗೆ ಮಾತ್ರವೇ ವಿನಹ, ಆರ್.ಎಲ್.ಜಾಲಪ್ಪ ಮೆಡಿಕಲ್ ಆಸ್ಪತ್ರೆ ಅವರಿಗೆ ಯಾವುದೇ ರೀತಿಯ ಅನುಕೂಲವಾಗುವುದಿಲ್ಲ ಮನವರಿಕೆ ಮಾಡಿಕೊಟ್ಟಿದ್ದಾರೆ.
ಸರ್ವಿಸ್ ರಸ್ತೆಯಲ್ಲಿ ಯಾವುದೇ ಉಪ ರಸ್ತೆಯನ್ನು ತಮ್ಮ ವೈಯುಕ್ತಿಕ ಕಾರಣಕ್ಕಾಗಿ ಮಾಡಿಕೊಳ್ಳಲು, ಸಂಬಂಧಪಟ್ಟ ಅಧಿಕಾರಿಗಳ ಅನುಮತಿಯನ್ನು ಪಡೆಯದೇ ರಸ್ತೆಯನ್ನು ದುರ್ಬಳಕ್ಕೆ ಮಾಡಿಕೊಂಡಿರುವುದು ಎಷ್ಟು ಸರಿ ಎಂದು ಪ್ರಶ್ನೆ ಮಾಡಿದ್ದಾರೆ.
ಹೆದ್ದಾರಿಯಲ್ಲಿ ಅಕ್ರಮವಾಗಿ ತೆರೆದಿರುವ ಸರ್ವಿಸ್ ರಸ್ತೆಯಲ್ಲಿ ಜಾಲಪ್ಪ ಆಸ್ಪತ್ರೆಗೆ ನಾನಾ ರೀತಿಯ ಮಾರ್ಗಗಳು ಇದ್ದು, ಆ ಮಾರ್ಗಗಳಲ್ಲಿ ಆಂಬುಲೆನ್ಸ್ ವಾಹನಗಳು ಸಂಚಾರ ಮಾಡುತ್ತವೆ. ನಾಗಾರ್ಜುನ ಹೋಟೆಲ್ ಬಳಿ ತೆರೆದಿರುವ ರಸ್ತೆ ಯಾವುದೇ ರೀತಿಯ ಅನುಕೂಲವಾಗುವುದಿಲ್ಲ ಎಂದರು.
ಇದರಿಂದ ವಾಹನ ಸವಾರರ ಅಪಘಾತಗಳಿಗೆ ಸರ್ವಿಸ್ ರಸ್ತೆಯಲ್ಲಿ ತೆರೆದಿರುವ ರಸ್ತೆ ಹೆಚ್ಚು ಪರಿಣಾಮ ಬೀರುವ ಘಟನೆಗಳಿಗೆ ಸಾಕ್ಷಿಯಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮುಂಬರುವ ದಿನಗಳಲ್ಲಿ ನಾಗಾರ್ಜುನ ಹೋಟೆಲ್ ಅವರು, ವೈಯುಕ್ತಿಕವಾಗಿ ನಿರ್ಮಿಸಿರುವ ರಸ್ತೆಯನ್ನು ಮುಚ್ಚದ ಪಕ್ಷದಲ್ಲಿ ಟೋಲ್ ಬಂದ್ ಮಾಡಲಾಗುವುದು ಎಂದು ಎಚ್ಚರಿಸಿದ್ದಾರೆ. ಮನವಿ ಸ್ವೀಕರಿಸಿದ ರೆಡ್ಡಿ ಅವರು ಮನವಿ ಪತ್ರವನ್ನು ತಮ್ಮ ಮೇಲಾಧಿಕಾರಿಗಳಿಗೆ ವ್ಯಾಟ್ಸಾಫ್ ಮೂಲಕ ಕಳುಹಿಸಿ ಅವರ ಗಮನಕ್ಕೆ ತಂದರು. ನಿಯೋಗದಲ್ಲಿ ಕೆಸಿಪಿ ನಾಗರಾಜ್, ಕೆಂಬೋಡಿ ರವಿ, ದೊಡ್ನಹಳ್ಳಿ ನಾರಾಯಣಪ್ಪ, ಕೆಂಬೋಡಿ ಕೃಷ್ಣೆಗೌಡ, ಅಗ್ರಹಾರ ಸೋಮರಸನಹಳ್ಳಿ ನಾರಾಯಣಸ್ವಾಮಿ ಇದ್ದರು.