ತಮಿಳು ನಟ ಅಜಿತ್‌ಗೆ ಮಾತೃ ವಿಯೋಗ

ಚೆನ್ನೈ, ಮಾ.೨೪- ಖ್ಯಾತ ತಮಿಳು ನಟ ಅಜಿತ್ ಕುಮಾರ್ ಅವರ ತಂದೆ ಪಿ ಸುಬ್ರಮಣ್ಯಂ ಅವರು ಇಂದು ವಿಧಿವಶರಾಗಿದ್ದು, ಅವರಿಗೆ ೮೪ ವರ್ಷ ವಯಸ್ಸಾಗಿತ್ತು.
ಸುಬ್ರಮಣ್ಯಂ ಅವರು ಪಾರ್ಶ್ವವಾಯು ಮತ್ತು ವಯೋಸಹಜ ಸಂಬಂಧಿಸಿದ ಕಾಯಿಲೆಗಳೊಂದಿಗೆ ಬಳಲುತ್ತಿದ್ದರು, ಚಿಕಿತ್ಸೆ ಫಲಕಾರಿಯಾಗದೆ ಇಂದು ಕೊನೆಯುಸಿರೆಳೆದಿದ್ದಾರೆ.
ಪಿಎಸ್ ಮಣಿ ಕೇರಳದ ಪಾಲಕ್ಕಾಡ್ ಮೂಲದವರು. ಅವರು ಪಶ್ಚಿಮ ಬಂಗಾಳದ ಪತ್ನಿ ಮೋಹಿನಿ ಅವರನ್ನು ವರಿಸಿದ್ದರು ಮತ್ತು ಅನುಪ್ ಕುಮಾರ್, ಅಜಿತ್ ಕುಮಾರ್ ಮತ್ತು ಅನಿಲ್ ಕುಮಾರ್ ಹಾಗೂ ಬಂಧುಗಳನ್ನು ಅಗಲಿದ್ದಾರೆ.
ಅವರ ಪಾರ್ಥಿವ ಶರೀರವನ್ನು ಬೆಸೆಂಟ್ ನೆಗರ್ ಸ್ಮಶಾನದಲ್ಲಿ ಅಂತ್ಯಸಂಸ್ಕಾರ ನೆರವೇರಲಿದೆ.