ತಮಿಳು ನಟನಿಗೆ ಕಿಚ್ಚನ ಸಾಥ್

ತಮಿಳು ಚಿತ್ರರಂಗದ ಖ್ಯಾತ ನಟ ಹಾಗೂ ಸಂಗೀತ ನಿರ್ದೇಶಕ ವಿಜಯ್ ಆಂಟೋನಿ  ಭಿಕ್ಷುಕ-2 (ಪಿಚೈಕ್ಕಾರನ್ 2)ಚಿತ್ರಕ್ಕೆ ಕಿಚ್ಚ ಸುದೀಪ್ ಬೆಂಬಲ ನೀಡಿದ್ದಾರೆ.

ಪಿಕೈಕ್ಕಾರನ್ ಸಿನಿಮಾದ ಸೀಕ್ವೆಲ್ ಆಗಿರುವ ಚಿತ್ರ ಪ್ಯಾನ್ ಇಂಡಿಯಾ ಚಿತ್ರ ಕನ್ನಡದಲ್ಲಿ ಭಿಕ್ಷುಕ-2 ಎಂಬ ಟೈಟಲ್ ನಡಿ ಮೂಡಿ ಬರುತ್ತಿದೆ .ಚಿತ್ರದ ಕನ್ನಡದ ಟ್ರೇಲರ್‍ನ್ನು ಕಿಚ್ಚ ಸುದೀಪ್ ಬಿಡುಗಡೆ ಮಾಡಿ ಗೆಳೆಯ ವಿಜಯ್ ಆಂಥೋನಿಗೆ ಶುಭ ಕೋರಿದ್ದಾರೆ.

ಪಿಚೈಕ್ಕರನ್ ಮೊದಲ ಭಾಗ ಯಶಸ್ಸು ಕಂಡಿತ್ತು ಜೊತೆಗೆ  ವಿಜಯ್ ಅಂಥೋನಿಗೆ ಒಳ್ಳೆ ಹೆಸರು ತಂದುಕೊಟ್ಟಿತ್ತು. ಈಗ ಪಿಚೈಕ್ಕರನ್ ಸೀಕ್ವೆಲ್ ಮೂಲಕ ವಿಜಯ್ ನಿರ್ದೇಶಕರಾಗಿ ಮೊದಲ ಹೆಜ್ಜೆ ಇಟ್ಟಿದ್ದಾರೆ. ಪತ್ನಿ ಫಾತೀಮಾ ವಿಜಯ್ ಆಂಟೋನಿ ಭಿಕ್ಷುಕ-2 ಚಿತ್ರ ಪ್ರಸ್ತುತ ಪಡಿಸಿದ್ದಾರೆ.

ಮಲೇಷ್ಯಾದಲ್ಲಿ ಪಿಚೈಕ್ಕರನ್-2 ಚಿತ್ರೀಕರಣದ ವೇಳೆ ವಿಜಯ್ ಆಂಟೋನಿ ಗಂಭೀರ ಗಾಯಗೊಂಡಿದ್ದರು. ಶಸ್ತ್ರ ಚಿಕಿತ್ಸೆ ಬಳಿಕ ಚೇತರಿಕೆ ಕಂಡಿರುವ ಅವರೀಗ  ಪ್ರಚಾರಕ್ಕೆ ಕಾರ್ಯಕ್ಕೆ ಸಜ್ಜಾಗಿದ್ದಾರೆ. ಭಿಕ್ಷುಕ-2 ಟ್ರೇಲರ್ ಬಿಡುಗಡೆಯಾಗಿದೆ. ಉದ್ಯಮಿ ವಿಜಯ್ ಮೂರ್ತಿಯನ್ನು ಸತ್ಯ ಕೊಲೆ ಮಾಡ್ತಾನೆ. ಕೊಲೆ ನಂತರ ಮುಂದೇನಾಗುತ್ತದೆ ಎಂಬ ಒಂದಷ್ಟು ತಿರುವುಗಳು ಚಿತ್ರದಲ್ಲಿವೆ.

ವಿಜಯ್ ಆಂಟೋನಿ ನಿರ್ದೇಶನದ ಚಿತ್ರದಲ್ಲಿ ದೇವ್ ಗಿಲ್, ಹರೀಶ್ ಪೆರಾಡಿ, ಜಾನ್ ವಿಜಯ್, ರಾಧಾ ರವಿ, ಮನ್ಸೂರ್ ಅಲಿ ಖಾನ್, ವೈ ಜಿ ಮಹೇಂದ್ರನ್, ರಾಜಾ ಕೃಷ್ಣಮೂರ್ತಿ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

ಕಾವ್ಯ ಥಾಪರ್ ನಾಯಕಿ ವಿಜಯ್ ಆಂಟೋನಿ ನಟನೆ ನಿರ್ದೇಶನದ ಜೊತೆಗೆ ಸಂಗೀತ, ಸಂಕಲನ ಜವಾಬ್ದಾರಿ ಹೊತ್ತುಕೊಂಡಿದ್ದಾರೆ. ಮೇ 19 ರಂದು ಕನ್ನಡ ಸೇರಿ ಪಂಚ ಭಾಷೆಯಲ್ಲಿ ಭಿಕ್ಷುಕ-2 ಚಿತ್ರ ಬಿಡುಗಡೆಯಾಗಲಿದೆ.