ತಮಿಳುನಾಡು ಸಚಿವ ಮುರುಗನ್ ವಿರುದ್ಧ ನಗರದಲ್ಲಿ ಪ್ರತಿಭಟನೆ; ಒಣಗಿದತರಗು ಪ್ರದರ್ಶಿಸಿ ಆಕ್ರೋಶ

ಸಂಜೆವಾಣಿ ವಾರ್ತೆ
ಚಾಮರಾಜನಗರ, ಫೆ.26-ಮೇಕೆದಾಟುಯೋಜನೆಗೆಅಪಸ್ವರಎತ್ತಿರುವ ತಮಿಳುನಾಡು ಸಚಿವದೊರೈ ಮುರುಗನ್ ವಿರುದ್ಧಚಾಮರಾಜನಗರದಲ್ಲಿಕನ್ನಡಪರ ಹೋರಾಟಗಾರರು ಪ್ರತಿಭಟಿಸಿ ಆಕ್ರೋಶ ಹೊರಹಾಕಿದರು.ಕನ್ನಡಪರ ಹೋರಾಟಗಾರಚಾ.ರಂ.ಶ್ರೀನಿವಾಸಗೌಡ ನೇತೃತ್ವದಲ್ಲಿ ಭಾನುವಾರ ಭುವನೇಶ್ವರಿ ವೃತ್ತದಲ್ಲಿ ಜಮಾಯಿಸಿದ ಪ್ರತಿಭಟನಾಕಾರರು ಸಚಿವದೊರೈ ಮುರುಗನ್, ತಮಿಳುನಾಡು ಸರ್ಕಾರದ ವಿರುದ್ಧ ಧಿಕ್ಕಾರದಘೋಷಣೆ, ಜೋಳ, ಕಬ್ಬಿನಒಣಗಿದತರಗು ಪ್ರದರ್ಶನ ಮಾಡಿಆಕ್ರೋಶ ಹೊರಹಾಕಿದರು.
ಕಾವೇರಿ ವಿಚಾರದಲ್ಲಿ ಮತ್ತೇ ಸುಪ್ರೀಂಕೋರ್ಟ್ ಗೆ ಹೋಗುವುದಾಗಿ ಮುರುಗನ್ ಹೇಳಿದ್ದು ಅವರಿಗೆ ಈಗ ಹರಿಸುತ್ತಿರುವ ನೀರು ಸಾಕಾಗುತ್ತಿಲ್ಲವಂತೆ, ರಾಜ್ಯ ಸರ್ಕಾರಕ್ಕೆಜನರ ಬಗ್ಗೆ ಕಾಳಜಿ ಇದ್ದರೇಕೂಡಲೇ ತಮಿಳುನಾಡಿಗೆ ಹರಿಸುತ್ತಿರುವಕಾವೇರಿ ನೀರನ್ನು ನಿಲ್ಲಿಸಬೇಕು, ಈಗಾಗಲೇ ಜನರು ತರಗೆಲೆಗಳಾಗಿದ್ದಾರೆ ಎಂದುಕಿಡಿಕಾರಿದರು.
ಕರ್ನಾಟಕ ಸರ್ಕಾರ ಸುಗ್ರೀವಾಜ್ಞೆತರುವ ಮೂಲಕ ತಮಿಳುನಾಡಿಗೆ ನೀರು ಹರಿಸುವುದನ್ನು ನಿಲ್ಲಿಸಬೇಕು. ಇಲ್ಲವಾದಲ್ಲಿಜಲಕ್ಷಾಮಉಂಟಾಗಿ, ಮುಂದಿನ ದಿನಗಳಲ್ಲಿ ವಿಕೋಪಕ್ಕೆ ಸಿಲುಕಬೇಕಾಗುತ್ತದೆ ಎಂದು ಕಳವಳ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿಗು.ಪುರುಷೋತ್ತಮ್, ಚಾ.ವೆಂ.ರಾಜಗೋಪಾಲ್, ಗಡಿನಾಡುಕನ್ನಡರಕ್ಷಣ ಹೋರಾಟ ವೇದಿಕೆ ಅಧ್ಯಕ್ಷಚಾ.ರಂ.ಕುಮಾರ್, ವೀರಭದ್ರ, ಮಹೇಶ್‍ಗೌಡ, ಆಟೋ ನಾಗೇಶ್, ಸೋಮವಾರಪೇಟೆ ಮಂಜು, ತಾಂಡವಮೂರ್ತಿ ಮತ್ತಿತರರಿದ್ದರು.