ತಮಿಳುನಾಡು ರಾಜ್ಯಪಾಲರಿಗೆ ಕೊರೋನಾ ಸೋಂಕು ಆಸ್ಪತ್ರೆಗೆ ದಾಖಲು

ಚೆನ್ನೈ, ಆ, 2-ಇತ್ತೀಚೆಗೆ ಹೋಮ್​​ ಕ್ವಾರಂಟೈನ್​​ನಲ್ಲಿದ್ದ ತಮಿಳುನಾಡು ರಾಜ್ಯಪಾಲ ಬನ್ವಾರಿಲಾಲ್ ಪುರೋಹಿತ್‌ ಈಗ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಒಂದು ವಾರದ ಹಿಂದೆಯಷ್ಟೇ ತಮಿಳುನಾಡು ರಾಜಭವನದ 84 ಸಿಬ್ಬಂದಿಗೆ ಕೊರೋನಾ ಪಾಸಿಟಿವ್​​ ಬಂದಿತ್ತು. ಹೀಗಾಗಿ ಜುಲೈ 29ರಿಂದ ರಾಜ್ಯಪಾಲರು ರಾಜಭವನದಲ್ಲೇ ಹೋಮ್​​ ಕ್ವಾರಂಟೈನ್​​​ಗೆ ಒಳಗಾಗಿದ್ದರು. ಈಗ ದಿಢೀರ್​​​​ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಬನ್ವಾರಿಲಾಲ್ ಪುರೋಹಿತ್‌ ಅವರಿಗೆ 81 ವರ್ಷ. ಹಲವು ದಿನಗಳಿಂದ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ಈಗ ಕೊರೋನಾ ಕಾಣಿಸಿಕೊಂಡಿದ್ದರಿಂದ ಆರೋಗ್ಯದಲ್ಲಿ ದಿಢೀರ್​ ಏರುಪೇರು ಕಾಣಿಸಿಕೊಂಡಿದೆ. ಹೀಗಾಗಿ ಇವರನ್ನು ಕಾವೇರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ರಾಜ್ಯಪಾಲರ ಆರೋಗ್ಯವನ್ನು ವೈದ್ಯರ ತಂಡವೊಂದು ನಿರಂತರ ತಪಾಸಣೆ ಮಾಡುತ್ತಿದೆ. ಸದ್ಯ ರಾಜಭವನದ ಮೂಲಗಳ ಪ್ರಕಾರ ರಾಜ್ಯಪಾಲರು ಆರೋಗ್ಯವಾಗಿದ್ದಾರೆ.

ಕಳೆದ ತಿಂಗಳು ಜುಲೈ 23ರಂದು ತಮಿಳುನಾಡು ರಾಜ್ಯಪಾಲರ ಕಚೇರಿ 23 ಸಿಬ್ಬಂದಿಗಳಿಗೆ ಕೊರೋನಾ ಕಾಣಿಸಿಕೊಂಡಿತ್ತು. ಬಳಿಕ ಜುಲೈ 29ರಂದು ಮೂವರಿಗೆ ಬಂದಿತ್ತು. ಇದುವರೆಗೂ ರಾಜಭವನದ 84 ಸಿಬ್ಬಂದಿಗಳಿಗೆ ಕೊರೋನಾ ಪಾಸಿಟಿವ್​​ ಆಗಿದೆ. ಈ ಪೈಕಿ ಯಾರೂ ಸಹ ರಾಜ್ಯಪಾಲರ ಸಂಪರ್ಕಕ್ಕೆ ಬಂದಿರಲಿಲ್ಲ.