ತಮಿಳುನಾಡು ಚುನಾವಣೆ ಕಮಲ್ ವಾಹನ ಪರಿಶೀಲನೆ

ತಂಜಾವೂರ್, ಮಾ. ೨೩: ತಮಿಳುನಾಡಿನಲ್ಲಿ ಚುನಾವಣಾ ಪ್ರಚಾರ ಬಿರುಸುಗೊಂಡಿದೆ. ಖ್ಯಾತ ನಟ ಹಾಗೂ ಎಂಎನ್‌ಎಂ ಪಕ್ಷ ದ ಅಧ್ಯಕ್ಷ ಕಮಲ್ ಹಾಸನ್ ತಮ್ಮ ಪಕ್ಷದ ಅಭ್ಯರ್ಥಿಗಳ ಪರ ಚುನಾವಣಾ ಪ್ರಚಾರದಲ್ಲಿ ತುಂಬಾ ಬ್ಯುಸಿಯಾಗಿದ್ದಾರೆ.

ಈ ನಡುವೆಯೇ ತಂಜಾವೂರಿನಲ್ಲಿ ಚುನಾವಣಾ ಪ್ರಚಾರದಲ್ಲಿ ತೊಡಗಿದ್ದ ಕಮಲಹಾಸನ್ ಅವರ ಚುನಾವಣಾ ಪ್ರಚಾರದ ವಾಹನವನ್ನು ರಾಜ್ಯ ಚುನಾವಣಾ ತಪಾಸಣಾ ದಳ ಪರಿಶೀಲನೆ ನಡೆಸಿತು.

ಈ ವಿಧಾನಸಭಾ ಚುನಾವಣೆಯಲ್ಲಿ ಕಮಲ್ ಹಾಸನ್ ಅವರು ಯಾವುದೇ ಚುನಾವಣಾ ಸಾರ್ವಜನಿಕ ಸಭೆಗಳಲ್ಲಿ ಭಾಗಿಯಾಗಲು ಹಿಂದೇಟು ಹಾಕುತ್ತಿದ್ದಾರೆ. ಸಾರ್ವಜನಿಕ ಸಭೆಗಳ ಬದಲಿಗೆ ತಮ್ಮ ಪಕ್ಷದ ಚುನಾವಣಾ ಪ್ರಚಾರ ವಾಹನದ ಮೂಲಕ ಚುನಾವಣಾ ಪ್ರಚಾರ ಕೈಗೊಳ್ಳುತ್ತಿದ್ದಾರೆ.

ನಟ ಕಮಲ್ ಹಾಸನ್ ಅವರ ಎಂಎನ್ ಎಂ ಪಕ್ಷ ಒಟ್ಟು ೨೩೪ ವಿಧಾನಸಭಾ ಕ್ಷೇತ್ರಗಳ ಪೈಕಿ ೧೫೪ ಸ್ಥಾನಗಳಲ್ಲಿ ತಮ್ಮ ಅಭ್ಯರ್ಥಿಗಳನ್ನು ಕಣಕ್ಕೀಳಿಸಿದೆ. ಉಳಿದಂತೆ ಎಐಎಸ್ ಎಂಕೆ ಮತ್ತು ಐಜೆಕೆ ಪಕ್ಷಗಳೊಂದಿಗೆ ಸೀಟು ಹೊಂದಾಣಿಕೆ ಮಾಡಿಕೊಂಡಿದೆ.

ತಮಿಳುನಾಡು ವಿಧಾನಸಭೆ ಚುನಾವಣೆ ಏಪ್ರಿಲ್ ೬ ನಡೆಯಲಿದ್ದು, ಮೇ ೨ರಂದು ಫಲಿತಾಂಶ ಹೊರಬೀಳಲಿದೆ.