ತಮಿಳುನಾಡಿನ ಹೆಸರು ಬದಲಾವಣೆ : ಉಲ್ಟಾ ಹೊಡೆದ ರಾಜ್ಯಪಾಲ ಆರ್. ಎನ್ ರವಿ

ಚೆನ್ನೈ, ಜ.18- ತಮಿಳುನಾಡು ಹೆಸರನ್ನು ತಮಿಳಗಂ ಎಂದು ಬದಲಾಯಿಸಬೇಕು ಎಂದು ಹೇಳಿಕೆ ನೀಡಿ ತಮಿಳುನಾಡು ಜನರ ಆಕ್ರೋಶಕ್ಕೆ ಕಾರಣವಾಗಿದ್ದ ರಾಜ್ಯಪಾಲ ಆರ್‌.ಎನ್ ರವಿ ಅವರು ಉಲ್ಟಾ ಹೊಡೆದಿದ್ದಾರೆ.

ತಮಿಳುನಾಡಿನ ಹೆಸರನ್ನು ಬದಲಾವಣೆ ಮಾಡುವುದಾಗಿ ಹೇಳಿಲ್ಲ. ನನ್ನ ಹೇಳಿಕೆಯನ್ನು ತಪ್ಪಾಗಿ ಬಿಂಬಿಸಲಾಗಿದೆ ಎಂದು ರಾಜ್ಯಪಾಲ ಆರ್. ಎನ್ ರವಿ ಸ್ಪಷ್ಟಪಡಿಸಿದ್ದಾರೆ.

ನನ್ನ ಭಾಷಣದ ಒಟ್ಟು ಒಟ್ಟು ಸಾರ ಅರ್ಥ ಅರ್ಥಮಾಡಿಕೊಳ್ಳದೆ ಗ್ರಹಿಸಿರುವುದು ತಮಿಳುನಾಡು ಪದಕ್ಕೆ ವಿರುದ್ಧ ಎಂಬ ವಾದಗಳು ಚರ್ಚೆಗೆ ಗ್ರಾಸವಾಗಿವೆ ಎಂದು ಹೇಳಿದ್ದಾರೆ‌

‘ತಮಿಳಗಂ’ ಕುರಿತು ಇತ್ತೀಚೆಗೆ ಮಾಡಿದ ಹೇಳಿಕೆಯೊಂದಿಗೆ ರಾಜ್ಯದ ಹೆಸರನ್ನು ಬದಲಾಯಿಸುವಂತೆ ಸೂಚಿಸಿಲ್ಲ. ಭಾಷಣದ ಸಾರ ಅರ್ಥ ಮಾಡಿಕೊಂಡಿಲ್ಲ ಎಂದರು

ಸರಿಯಾಗಿ ಅರ್ಥ ಮಾಡಿಕೊಳ್ಳದೇ ಇರುವುದು
“ತಮಿಳುನಾಡು ವರ್ಸಸ್ ತಮಿಳಗಂ” ಚರ್ಚೆಗೆ ಕಾರಣವಾಯಿತು.ತಮ್ಮ ಭಾಷಣದ ಆಧಾರವನ್ನು “ಅರ್ಥಮಾಡಿಕೊಳ್ಳದೆ” ನಿರ್ಣಯವನ್ನು ಮಾಡಿದರು ಎಂದು ಸರ್ಕಾರದ ವಿರುದ್ದ ಪರೋಕ್ಷ ಅಸಮಾಧಾನ ಹೊರಹಾಕಿದ್ದಾರೆ.

ನನ್ನ ಹೇಳಿಕೆ ದೂರದೃಷ್ಟಿಯಿಂದ ಕೂಡಿದೆ. ತಮಿಳು ಜನರ ನಡುವಿನ ಐತಿಹಾಸಿಕ ಸಾಂಸ್ಕೃತಿಕ ಸಂಪರ್ಕ ತಾವು ಮಾತನಾಡಿದ್ದೆ ಎಂದರು

ಆಗಿನ ಕಾಲದಲ್ಲಿ ತಮಿಳುನಾಡು ಇರಲಿಲ್ಲ ‌ “ಆದ್ದರಿಂದ ಐತಿಹಾಸಿಕ ಸಾಂಸ್ಕೃತಿಕ ಸಂದರ್ಭದಲ್ಲಿ, ನಾನು ತಮಿಳಗಂ ಪದವನ್ನು ಹೆಚ್ಚು ಎಂದು ಉಲ್ಲೇಖಿಸಿದೆ ಎಂದು ಸಮಜಾಯಿಷಿ ನೀಡಿದ್ದಾರೆ.

ರಾಜ್ಯ ವಿಧಾನಸಭೆಯಲ್ಲಿ, ಆಡಳಿತಾರೂಢ ಶಾಸಕರು ರಾಜ್ಯಪಾಲ ರವಿ ವಿರುದ್ಧ ವಿಧಾನಸಭೆಯಲ್ಲಿ “ತಮಿಳುನಾಡಿನಿಂದ ತೊಲಗಿ” ಘೋಷಣೆಗಳನ್ನು ಕೂಗಿದ್ದರು.

ತಮಿಳುನಾಡು ಎಂದರೆ “ತಮಿಳರ ರಾಷ್ಟ್ರ” ಆದರೆ ತಮಿಳಗಂ ಎಂದರೆ “ತಮಿಳು ಜನರ ಮನೆ”. “ನಾಡು” ಎಂಬ ಪದ ತಮಿಳಿನಲ್ಲಿ “ಭೂಮಿ” ಎಂದರ್ಥ ಮತ್ತು ಭಾರತದಲ್ಲಿ ಸ್ವಾಯತ್ತ ಪ್ರದೇಶವನ್ನು ಚಿತ್ರಿಸಲು ಅನೇಕರು ನೋಡಬಹುದು. ತಮಿಳುನಾಡು ಭಾರತದ ಅವಿಭಾಜ್ಯ ಅಂಗವಲ್ಲ ಎಂಬ ನಿರೂಪಣೆಯನ್ನು ತಳ್ಳಲು ಹಲವು ವರ್ಷಗಳಿಂದ ಪ್ರಯತ್ನಗಳು ನಡೆದಿವೆ ಎಂದು ರಾಜ್ಯಪಾಲರು ಹೇಳಿದ್ದಾರೆ.