ತಮಿಳುನಾಡಿನ ಮುತ್ತು ದರ್ಗಾ ಶಿರೂರಕ್ಕೆ ಭೇಟಿ

ಆಳಂದ:ಮೇ.13:ಕನ್ನಡದ ಖ್ಯಾತ ಚಿತ್ರನಟ ದಿ. ಡಾ. ಪುನಿತ ರಾಜಕುಮಾರ ಅವರ ಅಪ್ಪಟ್ಟ ಅಭಿಮಾನಿ ತಮಿಳುನಾಡಿನ ಮುತ್ತು ಎಂಬುವವರು ಕಳೆದ ಎರಡು ವರ್ಷಗಳಿಂದ ಸುಮಾರು 36 ಸಾವಿರ ಕಿ.ಮೀ. ಸೈಕಲ್ ನಲ್ಲಿ ದೇಶ ವಿದೇಶಗಳಲ್ಲಿ ಸಂಚರಿಸಿದ್ದಾರೆ.
ಭಾರತ , ನೇಪಾಳ, ಬಾಂಗ್ಲಾದೇಶ, ವಿಯಟ್ನಾಂ ಸೇರಿದಂತೆ ಮುಂತಾದ ದೇಶಗಳಲ್ಲಿ ದಿ. ಪುನಿತ ರಾಜಕುಮಾರ ಅವರ ಸಾಮಾಜಿಕ ಕಾಳಜಿಯನ್ನು ಪ್ರಚಾರ ಮಾಡುತ್ತಿದ್ದಾರೆ. ಆ ಪ್ರಯುಕ್ತ ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ದರ್ಗಾ ಶಿರೂರ ಗ್ರಾಮಕ್ಕೆ ರವಿವಾರ ಆಗಮಿಸಿದರು. ಇದೇ ಸಂದಭ9ದಲ್ಲಿ ಗ್ರಾಮದ ಅಪ್ಪು ಅಭಿಮಾನಿಗಳಾದ ಪ್ರವೀಣ ಎಸ್ ಸುತಾರ. ವಿರೇಶ ಅಶೋಕ ಸುತಾರ, ಪ್ರಕಾಶ ಗೋಗಾಯಿ, ಶಿವುಕುಮಾರ ಎಲ್. ಘಂಟೆ ಸೇರಿದಂತೆ ಮುಂತಾದ ಯುವಕರು ತಮಿಳು ನಾಡಿನ ಮುತ್ತು ಅವರನ್ನು ಸ್ವಾಗತಿಸಿ ಸತ್ಕರಿಸಿ ಮುಂದಿನ ಪ್ರಯಾಣಕ್ಕೆ ಹಾರೈಸಿದರು.