ತಮಿಳುನಾಡಿನಲ್ಲಿ ಶ್ರೀ ಗುರು ಕೊಟ್ಟೂರೇಶ್ವರಸ್ವಾಮಿಯ ದೇವಾಲಯ

ಸಂಜೆವಾಣಿ ವಾರ್ತೆ
ಕೊಟ್ಟೂರು, ಸೆ.21: ನಾಡಿನ ಲಕ್ಷಾಂತರ ಭಕ್ತರ ಆರಾಧ್ಯ ದೈವ ಪಟ್ಟಣದ ಶ್ರೀ ಗುರು ಕೊಟ್ಟೂರೇಶ್ವರರು ಲೋಕಸಂಚಾರದಲ್ಲಿ ಬರುವಾಗ ತಮಿಳುನಾಡಿನ ಸತ್ಯ ಮಂಗಳ ಕಾಡಿನಲ್ಲಿ ತಪಸ್ಸು ಮಾಡಿದ ಸ್ಥಳ,ಪುಣ್ಯ ಕ್ಷೇತ್ರ ಕೊಟ್ಟೂರು ಬಸವೇಶ್ವರ ದೇವಸ್ಥಾನ ಈಗಲೂ ತಮಿಳುನಾಡಿನ ಕಾಡಿನಲ್ಲಿದೆ. ಒಬ್ಬರು ಇಬ್ಬರು ಹೋಗಲಾಗದ ಸ್ಥಳವೆಂದು  ತಮಿಳುನಾಡಿನಿಂದ ಬಂದ ಭಕ್ತರೊಬ್ಬರು ಇಂದು ತಿಳಿಸಿದರು.
ಧರ್ಮಪುರಿ ಜಿಲ್ಲೆಯಿಂದ ಎಡೆಯೂರಿಗೆ ಬಂದು ಅಲ್ಲಿಂದ ಹಂಪಿಗೆ ಬಂದು ನಂತರ ಕೊಟ್ಟೂರಿಗೆ ಆಗಮಿಸಿದ್ದಾರೆ ಇದೀಗ ಈ ಸುದ್ದಿ ಸಮಾಜೀಕ ಜಾಲತಾಣದಲ್ಲಿ ವೈರಲ್ ಆಗಿದೆ.