ತಮಿಳುನಾಡಿಗೆ ನೀರು ಕೊಡಲಾಗದು: ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್

ಸಂಜೆವಾಣಿ ನ್ಯೂಸ್
ಮೈಸೂರು: ಜು.03:- ರಾಜ್ಯದ ಒಟ್ಟು ನಾಲ್ಕು ಜಲಾನಯನ ಪ್ರದೇಶಗಳಾದ ಕಾವೇರಿ, ಕಬಿನಿ, ಹಾರಂಗಿ, ಹೇಮಾವತಿ ಅಣೆಕಟ್ಟೆಗಳಲ್ಲಿ ಒಟ್ಟು 7 ಟಿಎಂಸಿ ನೀರು ಮಾತ್ರ ಸಂಗ್ರಹ ಇದೆ. ಹೀಗಾಗಿ ತಮಿಳುನಾಡಿಗೆ ನೀರು ಬಿಡಲು ಸಾಧ್ಯವಿಲ್ಲ. ಇದನ್ನು ಕೇಂದ್ರ ತಿಳಿಸುವ ಕೆಲಸ ಮಾಡಲಿ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಒತ್ತಾಯಿಸಿದರು.
ಮೈಸೂರಿನ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಜ್ಯದಲ್ಲಿ ಮಳೆಯ ಅಭಾವ ಇದೆ. ಜುಲೈ ತಿಂಗಳಿಂದ ಮಳೆಯಾಗುವ ಸಾಧ್ಯತೆ ಇದೆ. ಸದ್ಯ ಕುಡಿಯುವ ನೀರಿಗೆ ಸಮಸ್ಯೆಯಾಗುವ ವಾತಾವರಣ ಇದೆ. ಈಗಾಗಲೇ ಕೇಂದ್ರ ಸರ್ಕಾರಕ್ಕೆ ಒತ್ತಾಯ ಮಾಡುತ್ತೇವೆ. ತಮಿಳುನಾಡಿಗೆ ಈ ಬಾರಿ ನೀರು ಕೊಡಲು ಸಾಧ್ಯವಾಗಲ್ಲ. ಕಾವೇರಿ ನೀರಾವರಿ ನಿಗಮದವರು ನಮಗೆ ಮಾಹಿತಿ ನೀಡಿದ್ದಾರೆ ಎಂದರು.
ಕೆ.ಆರ್.ಎಸ್‍ನಲ್ಲಿ 2.825 ಟಿಎಂಸಿ, ಹಾರಂಗಿಯಲ್ಲಿ 1.556 ಟಿಎಂಸಿ, ಕಬಿನಿಯಲ್ಲಿ 0.68 ಟಿಎಂಸಿ, ಹೇಮಾವತಿಯಲ್ಲಿ 2 ಟಿಎಂಸಿ ನೀರಿದೆ. ಬೆಂಗಳೂರು ನಗರ ಒಂದಕ್ಕೆ ಮೂರುವರೆ ಟಿಎಂಸಿ ನೀರು ಬೇಕು.
ಹಾಸನ, ಮಡಿಕೇರಿ, ಮೈಸೂರು ಚಾಮರಾಜನಗರ, ರಾಮನಗರ, ಮಂಡ್ಯ, ತುಮಕೂರು, ಬೆಂಗಳೂರು ರೂರಲ್‍ಗೆ ಎರಡೂವರೆ ಟಿಎಂಸಿ ನೀರು ಬೇಕು. ಕೃಷಿಗೆ 5 ಟಿಎಂಸಿ ನೀರು ಬೇಕು. ನಾವೂ ತಮಿಳುನಾಡಿಗೆ 3.5 ಟಿಎಂಸಿ ನೀರು ಬಿಡಬೇಕು.
ನಮ್ಮಲಿ ಇರೋದು 7 ಟಿಎಂಸಿ ನೀರು ಮಾತ್ರ. ತಮಿಳುನಾಡಿಗೆ ನೀರು ಬಿಟ್ಟರೆ ನಮಗೆ ಬಹಳ ಸಮಸ್ಯೆ ಆಗುತ್ತೆ. ಸೆಂಟ್ರಲ್ ವಾಟರ್ ಕಮಿಷನ್‍ನವರಿಗೆ ಈಗಾಗಲೇ ಸಿದ್ದರಾಮಯ್ಯ, ಡಿ ಕೆ.ಶಿವಕಯಮಾರ್ ಪತ್ರ ಬರೆದಿದ್ದೇವೆ. ಈಗ ತಮಿಳುನಾಡಿಗೆ ನೀರು ಬಿಟ್ರೆ ಪರಿಸ್ಥಿತಿ ಕಷ್ಟವಾಗುತ್ತದೆ. ಹೀಗಾಗಿ ತಮಿಳುನಾಡಿಗೆ ನೀರು ಬಿಡಲಾಗಲ್ಲ. ಕೇಂದ್ರ ಸರ್ಕಾರ ಈ ಬಗ್ಗೆ ಗಮನ ಹರಿಸಬೇಕು. ತಮಿಳುನಾಡಿಗೆ ನೀರು ಬಿಡಲಾಗದು ಅಂತಾ ಕೇಂದ್ರ ಸರ್ಕಾರ ಹೇಳಬೇಕು. ಹಾಗೆಯೇ ದಿನನಿತ್ಯ ಕಾಂಗ್ರೆಸ್ ವಿರುದ್ಧ ಮಾತಾಡುವ ಬಿಜೆಪಿ ನಾಯಕರು ಕೇಂದ್ರ ಸರ್ಕಾರಕ್ಕೆ ಹೇಳಬೇಕು. ಬಿಜೆಪಿಯವರು ಸರಿಯಾಗಿ ಅರ್ಥ ಮಾಡಿಕೊಳ್ಳಬೇಕು ಎಂದರು.
ಕಾವೇರಿ ನೀರು ಬಿಡುವುದು ತೆಡೆವುದು ರಾಜ್ಯ ಸರ್ಕಾರದ ವ್ಯಾಪ್ತಿಯಲ್ಲ. ಕೇಂದ್ರ ಸರ್ಕಾರದ ವ್ಯಾಪ್ತಿಯಾಗಿದೆ. ಆಮೇಲೆ ಮಿಡಿಯಾ ಮುಂದೆ ಬಾಯಿ ಬಡ್ಕೊಬೇಡಿ. ಕಾವೇರಿ ವಿಚಾರವಾಗಿ ಮಾತನಾಡುವ ಕೆಲಸ ಮಾಡಬೇಡಿ. ರಾಜ್ಯದ ಜನರಿಗೆ ನೀರು ಕೊಡಿಸುವ ಕೆಲಸ ಮಾಡಿ, ಕೇಂದ್ರದಲ್ಲಿ ನಿಮ್ಮ ಸರ್ಕಾರವೇ ಇರೋದು.
ಟೋಲ್ ಹೆಸರಲ್ಲಿ ಬಿಜೆಪಿ ರಾಬರಿ:
ಟೋಲ್ ಸಂಗ್ರಹಕ್ಕೆ ಸಾರ್ವಜನಿಕರ ವಿರೋಧ ಇದ್ದರೂ ಸುಲಿಗೆ ಮಾಡಲಾಗುತ್ತದೆ. ಮೈಸೂರು- ಬೆಂಗಳೂರು ಹೋಗೋಕೆ 660 ರೂಪಾಯಿ ಕೊಡಬೇಕು. ದೇಶದಲ್ಲಿ ಒಂದು ರೀತಿ ಶುಲ್ಕ ವಿಧಿಸಿದ್ದರೆ, ಕರ್ನಾಟಕದಲ್ಲಿ ಬೇರೆ ಶುಲ್ಕ ವಿಧಿಸುತ್ತಿದೆ. ಎರಡು ಬಾರಿ ಹೋಗಿ ಬಂದ್ರೆ 1320 ಕೊಡಬೇಕಾಗುತ್ತದೆ. ಮಂಡ್ಯ ಬಳಿ ಎಂಟ್ರಿಗೆ 330 ರಾಮನಗರ ಬಳಿ ಎಕ್ಸಿಟ್ ಗೆ 330 ಕೊಡಬೇಕಾಗುತ್ತದೆ. ಸಿದ್ದರಾಮಯ್ಯ ಸಿಎಂ, ಹೆಚ್ ಸಿ ಮಹದೇವಪ್ಪ ಅವರು ಕೇಂದ್ರದ ಆಸ್ಕರ್ ಫರ್ನಾಂಡೀಸ್ ಕಡೆಯಿಂದ ಮುತುವರ್ಜಿ ವಹಿಸಿ ತಂದ ಪ್ರಾಜೆಕ್ಟ್ ಇದಾಗಿದೆ. ಆರಂಭದಲ್ಲಿ 330 ಕೋಟಿಯಿಂದ ಆರಂಭವಾಗಿದ್ದು , ಅಂತಿಮವಾಗಲು 12000 ಕೋಟಿ ವೆಚ್ಚ ತಗುಲುತ್ತದೆ ಎಂದು ನಿತಿನ್ ಗಡ್ಕರ್ ಹೇಳಿದ್ದಾರೆ
ಬೇರೆ ರಾಜ್ಯಗಳಲ್ಲಿ ಕಿ.ಮೀಗೆ 1ರೂ 48 ಪೈಸೆ ಚಾರ್ಜ್ ಮಾಡುತ್ತಾರೆ. ಆದರೆ ನಮ್ಮ ರಾಜ್ಯದಲ್ಲಿ ಕಿ.ಮೀಗೆ 3 ರೂ 80 ಪೈಸೆ ಚಾರ್ಜ್ ಮಾಡಲಾಗುತ್ತಿದೆ. ಹೈವೆಯಲ್ಲಿ 1ಲಕ್ಷ ವಾಹನ ದಿನಕ್ಕೆ ಓಡಾಡುತ್ತವೆ ಎಂದು ಅಂದಾಜು ಮಾಡಲಾಗುತ್ತಿದೆ. ಅಂದಾಜು ಎರಡು ಟೋಲ್ ಗಳಿಂದ ದಿನಕ್ಕೆ10 ಕೋಟಿ ಸಂಗ್ರಹ ಆಗುತ್ತದೆ. 30 ವರ್ಷಕ್ಕೆ ಟೋಲ್ ಸಂಗ್ರಹಕ್ಕೆ ಟೆಂಡರ್ ನೀಡಲಾಗಿದೆ. ವರ್ಷಕ್ಕೆ 3650 ಕೋಟಿ ಸಂಗ್ರಹ ಆದ್ರೆ ವರ್ಷಕ್ಕೆ 36500 ಕೋಟಿ ಸಂಗ್ರಹ ಆದರೆ, 30 ವರ್ಷಕ್ಕೆ 1 ಲಕ್ಷ ಕೋಟಿ ಸಂಗ್ರಹ ಮಾಡಲಾಗುತ್ತದೆ. ಆದರೆ ರಸ್ತೆಗೆ ಖರ್ಚು ಮಾಡಿರೋ ವೆಚ್ಚ 9550 ಇದು ಕೇಂದ್ರ ಸರ್ಕಾರ ಮಾಡ್ತಾ ಇರೋ ರೋಡ್ ರಾಬರಿಯಾಗಿದೆ. ಇಲ್ಲಿಯವರೆಗೂ ಎಕ್ಸ್‍ಪ್ರೆಸ್ ವೇ ನಲ್ಲಿ
456 ಆಕ್ಸಿಡೆಂಟ್ ಆಗಿದ್ದು, ಸತ್ತಿರೋರ ಸಂಖ್ಯೆ 189 ಮಂದಿ. ಸ್ಕೈ ಲಾರ್ಜ್ ಕಂಪನಿಗೆ ಟೋಲ್ ಸಂಗ್ರಹಕ್ಕೆ ಟೆಂಡರ್ ನೀಡಲಾಗಿದೆ. ಎಷ್ಟು ಲಕ್ಷಕ್ಕೆ ಇವರಿಗೆ ಟೆಂಡರ್ ನೀಡಲಾಗಿದೆ. ದಿನನಿತ್ಯ ಕಲೆಕ್ಟ್ ಆಗ್ತಿರೋದು ದಿನನಿತ್ಯ 10 ಕೋಟಿ. ಆದರೆ ಸರ್ಕಾರ ಟೆಂಡರ್ ಕೊಟ್ಟಿರೋದು 59 ಲಕ್ಷ ಕಲೆಕ್ಟ್ ಮಾಡೋಕೆ. ರಸ್ತೆ ನಿರ್ಮಾಣ ಮಾಡಿರೋ ಸಂಸ್ಥೆ ಟೆಂಡರ್ ನೀಡಿಲ್ಲ. ಮೂರನೇ ವ್ಯಕ್ತಿಯನ್ನ ಇಲ್ಲಿ ಟೋಲ್ ಸಂಗ್ರಹಕ್ಕೆ ಬಿಡಲಾಗಿದೆ. 8 ತಿಂಗಳಿಗೆ ಈಗಾಗಲೇ 3 ಬಾರಿ ಟೋಲ್ ಏರಿಕೆ ಮಾಡಲಾಗಿದೆ.
ಇದರಲ್ಲಿ ಪ್ರತಾಪ್ ಸಿಂಹ ಪಾತ್ರ ಏನು .? ಮೊದಲು ಪ್ರತಾಪ್ ಸಿಂಹ ಫೆಸ್ ಬುಕ್ ಲೈವ್ ಮಾಡ್ತಾ ಇದ್ದರು. ಈಗ ಪ್ರತಾಪ್ ಸಿಂಹ ಬಂದ್ರೆ ರೋಡ್ ನಲ್ಲಿ ಜನ ಹೊಡಿತಾರೆ. ಅಲ್ಲಿಯ ಊರುಗಳಿಗೆ ಹೋದರೆ ಜನ ಸಿಕ್ಕಸಿಕ್ಕಲ್ಲಿ ಹೊಡಿತಾರೆ ಎಂದು ಕಿಡಿಕಾರಿದರು.