ತಬ್ಲೀಗ್ ಪ್ರಕರಣ ಕೇಂದ್ರದ ಪ್ರಮಾಣಪತ್ರಕ್ಕೆ ಸುಪ್ರೀಂ ಬೇಸರ

ನವದೆಹಲಿ, ನ 17- ದೇಶದಲ್ಲಿ ಕೊರೊನಾ ಸೋಂಕು ಹೆಚ್ಚಾಗಲು ತಬ್ಲೀಗಿ ಕಾರಣ ಎಂಬ ಬಗ್ಗೆ ಕೇಂದ್ರ ಸರ್ಕಾರ ಸಲ್ಲಿಸಿರುವ ಪ್ರಮಾಣ ಪತ್ರದ ಬಗ್ಗೆ ಸುಪ್ರೀಂಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ. ತಬ್ಲಿಗ್ ಜಮಾತ್ ಸಭೆಯಿಂದಾಗಿಯೇ ದೇಶದಲ್ಲಿ ಕೊರೊನಾ ಸೋಂಕು ಪ್ರಕರಣಗಳು ಹೆಚ್ಚಾಗಿದ್ದಾಗಿ ಮಾಧ್ಯಮಗಳಲ್ಲಿ ವರದಿಯಾಗಿದ್ದವು. ಆದರೆ ಪ್ರಮಾಣಪತ್ರ ಬಗ್ಗೆ ತೃಪ್ತಿ ಕರವಾಗಿಲ್ಲ ಎಂದು ಹೇಳಿದೆ.

ಸೋಂಕು ಹರಡಲು ತಬ್ಲೀಗಿಗಳೆ ಕಾರಣ ಎಂದು ವಿವಿಧ ಕಾರಣ ಎಂದು ವಿವಿಧ ಸಂಘಟನೆಗಳು ಸಲ್ಲಿಸಿಸದ್ದ ವಿಚಾರಣೆ ಇಂದು ನಡೆಯಿತು.
ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಲಿಸಿಟರ್ ಜನರಲ್ ತುಷಾರ್ ಮೆಹ್ಹಾ ವಾದ ಮಂಡಿಸುವ ಸಂಧರ್ಭದಲ್ಲಿ ಮುಖ್ಯ ನ್ಯಾಯಮೂರ್ತಿ ಎಸ್. ಎ ಬೊಬಡೆ ಹಾಗೂ ವಿ.ರಾಮಸುಬ್ರಮಣ್ಯಂ ಅವರನ್ಮೊಳಗೊಂಡ ನ್ಯಾಯಪೀಠ ಅತೃಪ್ತಿ ವ್ಯಕ್ತಪಡಿಸಿತು.
ನೀವು ಸಲ್ಲಿಸಿರುವ ಎರಡು ಪ್ರಮುಖ ಪ್ರಶ್ನೆಗಳಿಗೆ ಉತ್ತರವೆ ಇಲ್ಲ. ಈ ನಡೆ ಒಪ್ಪಲು ಆಗುವುದಿಲ್ಲ.‌ನೀವು ಸೂಕ್ತ ಪ್ರಮಾಣಪತ್ರ ಸಲ್ಲಿಸಿಲ್ಲ ಎಂದು ಅಭಿಪ್ರಾಯಪಟ್ಟಿತು.
ಇಂತಹ‌‌ ಸುದ್ದಿಗಳಿಗೆ ಕಡಿವಾಣ ಹಾಕಲು‌ ಇರುವ ಮಾರ್ಗಗಳ ಕುರಿತ ಮಾಹಿತಿಯನ್ನು ಬಯಸಿದ್ದೆವು. ಇಂತಹ ಸುದ್ದಿಗಳಿಗೆ ಅಂಕುಶ ಹಾಕಲು ಯಾವುದೇ ಮಾರ್ಗಗಳು ಇಲ್ಲದಿದ್ದಲ್ಲಿ ಹೊಸ‌ ಕಾರ್ಯವಿಧಾನವನ್ನು ಜಾರಿಗೆ ತರುವಂತೆ ಕೇಂದ್ತಸರ್ಕಾರಕ್ಕೆ ಸೂಚನೆ ನೀಡಿದ ಬಳಿಕ ಮುಂದಿನ ವಿಚಾರಣೆಯನ್ನು ಮೂರು ವಾರಗಳ ಕಾಲ ಮುಂದೂಡಿತು.