ತಬಲಾ ರಾಣಿ ರಿಂಪಾ ಸಿವಾ ಅವರಿಂದ ತಬಲಾ ಸೋಲೋ

ಬಸವಕಲ್ಯಾಣ : ಸೆ.16:ಹೂಗಾರ ಮಾದಯ್ಯನವರು 12ನೇ ಶತಮಾನದಲ್ಲಿ ಬಸವಣ್ಣನವರ ಜತೆಗೂಡಿ ಶರಣರಿಗೆ ಹೂವು ಪೂರೈಸುವ ಕಾಯಕ ಕೈಗೊಂಡಿದ್ದರು ಸಮಾಜದಲ್ಲಿ ಹೂವು ಪೂಣಿಸಿದ ದಾರದಂತೆ ಬಾಳಬೇಕು ಎಂದು ಹರಳಯ್ಯ ಗವಿಯ ಪೂಜ್ಯ ಡಾ. ಗಂಗಾಂಬಿಕಾ ಅಕ್ಕ ನುಡಿದರು.

ಅವರು ಇಲ್ಲಿನ ಬಿಕೆಡೆಬಿ ಕಲ್ಯಾಣ ಮಂಟಪದಲ್ಲಿ ಅಂತರಾರಷ್ಟ್ರೀಯ ಲಿಂಗಾಯತ ಧರ್ಮಕೇಂದ್ರ ಹಾಗೂ ಅಖಿಲ ಬಾರತ ಲಿಂಗವಂತ ಹರಳಯ್ಯ ಪೀಠದ ಸಂಯುಕ್ತಾಶ್ರಯದಲ್ಲಿ ವಚನ ಟ್ರೆಡಂಗ್ ಸೋಲಫಷನ್ ಬಸವಕಲ್ಯಾಣ ರವರ ಪ್ರಾಯೋಜಕತ್ವದಲ್ಲಿ ನಡೆದ ಶರಣ ಹೂಗಾರ ಮಾದಯ್ಯನವರ ಜಯಂತಿ ಹಾಗೂ ತಬಲಾ ಸೋಲೋ ಕಾರ್ಯಕ್ರಮದ ದಿವ್ಯಸನ್ನಿಧಿಯನ್ನು ವಹಸಿಕೊಂಡು ಮಾತನಾಡಿ, ಶರಣರ ಕಾಯ ಮತ್ತು ಕಾಯಕವೆರಡು ಕೈಲಾಸವೆಂದು ಆ ಈಶ್ವರನಿಗೆ ತಿಳಿ ಹೇಳಲು ಕೈಲಾಸದ ಈಶ್ವರನ್ನು ಇವರಿಗೆ ಆರ್ಶಿರ್ವದಿಸದರು ಎಂದು ಜನಪದದದ ಹಾಡಿನ ಮೂಲಕ ಮಾರ್ಮಿಕವಾಗಿ ತಿಳಿಸಿದರು.

ನೇತೃತ್ವ ವಹಿಸಿದ ನದಿಶಿನ್ನೂರ ಹೂಗಾರ ಹೂಗಾರ ಮಾದಯ್ಯನವರ ಶಕ್ತಿ ಪೀಠದ ಪೂಜ್ಯ ಗುರುದೇವರು ಮಾತನಾಡಿ, ಬಸವಣ್ಣನವರ ಸಮಕಾಲೀನಲ್ಲಿ ಜನ್ಮ ತಾಳಿದ ಶರಣ ಹೂಗಾರ ಮಾದಯ್ಯನವರ ಬದುಕು ಜೀವನ ಕಾರ್ಯಕ್ಷಮತೆ ಸಮಾಜಕ್ಕೆ ಸಂದೇಶವಾಗಿದೆ ಎಂದರು

ಮುಖ್ಯಅತಿಥಿಗಳಾದ ಹಿರಿಯ ಸಾಹಿತಿ ಡಾ. ಸಿದ್ದುಯಾಪಲರವಿ ಮಾತನಾಡಿ, ಈ ದೇಶದಲ್ಲಿ ಅನೇಕ ಮಹಾಶರಣರು ಹುಟ್ಟಿ ಸಮಾಜಗಳಿಗೆ ಪ್ರೇರಣೆ ಕೊಟ್ಟಿದ್ದಾರೆ. ಬಸವಣ್ಣನವರ ಸಮಕಾಲೀನಲ್ಲಿ ಜನ್ಮ ತಾಳಿದ ಶರಣ ಮಾಯ್ಯನವರು ಕಾಯಕದ ಮೂಲಕ ಸಮಜಾಕ್ಕೆ ಶಕ್ತಿ ತುಂಬಿದವರಾಗಿದ್ದಾರೆ ಎಂದರು.

ಕಲ್ಯಾಣ ಕರ್ನಾಟಕ ಹೂಗಾರ ಮಾದಣ್ಣ ಸಮಾಜದ ಅಧ್ಯಕ್ಷ ಬಸವರಾಜ ಹೂಗಾರ ಉದ್ಘಾಟಿಸಿ ಮಾತನಾಡಿ, ಶಿವಶರಣ ಹೂಗಾರ ಮಾದಯ್ಯನ ಬಗ್ಗೆ ಬೆಳಕು ಚೆಲ್ಲುವ ಅಗತ್ಯವಿದೆ. ಅವರ ಬಗ್ಗೆ ಸಂಶೋಧನಾ ವಿಧ್ಯಾರ್ಥಿಗಳು ಅಧ್ಯಯನ ಮಾಡಲು ವಿಪುಲ ಅವಕಾಶಗಳಿವೆ ಎಂದರು.

ಬಿಡಿಪಿಸಿ ಅಧ್ಯಕ್ಷ ಅನಿಕುಮಾರ ರಗಟೆ ಅಧ್ಯಕ್ಷತೆ ವಹಿಸಿಕೊಂಡಿದ್ದರು. ವೇದಿಕೆಯ ಮೇಲೆ ಬೀದರ ವಚನ ಟ್ರೇಡಿಂಗ್ ಸೋಲುಷನ್ ವ್ಯವಸ್ಥಾಪಕ ನಿರ್ದೇಶಕ ಅಲ್ಲಮಪ್ರಭು ನಾವದಗೇರೆ ತಾಲೂಕ ಹೂಗಾರ ಸಮಾಜದ ಅಧ್ಯಕ್ಷ ವಿಠಲ ಹೂಗಾರ ಸಂಗೀತ ಶಿಕ್ಷಕ ರಾಜಕುಮಾರ ಹೂಗಾರ ಬನ್ನೆಪ್ಪಾ ಪೂಜಾರ, ಲಕ್ಷ್ಮಿಬಾಯಿ ಪಾಟೀಲ ಜಗದೇವಿ ಹೂಗಾರ ಇತರರಿದ್ದರು. ಖ್ಯಾತ ಸಂಗೀತ ಮತ್ತು ಹಾಸ್ಯ ಕಲಾವಿದರಾದ ವೈಜಿನಾಥ ಸಜ್ಜನಶೆಟ್ಟಿ ನಿರೂಪಿಸಿದರು.

ತಬಲಾ ಸೋಲೋ: ಕಾರ್ಯಕ್ರಮದಲ್ಲಿ ತಬಲಾ ರಾಣಿ ಎಂದೇ ಖ್ಯಾತರಾದ ಕಲ್ಕತ್ತಾದ ರಿಂಪಾ ಸಿವಾ ಅವರಿಂದ ಜುರುಗಿದ ತಬಲಾ ವಾದದ ವಿವಿಧ ಪ್ರಕಾರಗಳು ತಬಲಾ ಸೋಲೋ ನೆರೆದಿದ್ದ ಸರ್ವ ಜನರನ್ನು ಮಂತ್ರ ಮುಗ್ದರನ್ನಾಗಿಸಿತ್ತು..

ಇದಕ್ಕೂ ಮೊದಲು ಬೀದರನ ಶಿವಾನಿ ಅವರಿಂದ ವಚನ ಗಾಯನ ನಡೆಸಿಕೊಟ್ಟರೆ ಅಕ್ಕನ ಬಳಗ ,ಮತ್ತು ನೀಲಮ್ಮನ ಬಳಗದವರು ಪ್ರಾರ್ಥನೆ ಮಾಡಿಸಿದರು. ಕಾರ್ಯಕ್ರಮದಲ್ಲಿ ಪತ್ರಕರ್ತ ಸಂಘದ ಅಧ್ಯಕ್ಷ ವೀರಶೆಟ್ಟಿ ಮಲಶೆಟ್ಟಿ, ರೇವಣಪ್ಪಾ ರಾಯವಾಡೆ, ಬಸವರಾಜ ತೊಂಡಾರೆ ಮಲ್ಲಿಕಾರ್ಜುನ ಕುರಕೋಟೆ ಬಸವಕಲ್ಯಾಣ ವಿ.ಟಿಎಸ್ ವ್ಯವಸ್ಥಾಕರಾದ ಪ್ರದೀಪ ವಿಸಾಜಿ, ಉದಯಕುಮಾರ ಮೂಳೆ, ಮಹಾದೇವಪ್ಪಾ ಇಜಾರೆ, ಸಿದ್ಧಣ್ಣಾ ಹಂಗರಗಿ ಸೇರಿದಂತೆ ಅನೇಕರಿದ್ದರು.