(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ: ನಿನ್ನೆಯಷ್ಟೇ ಚಾಲನೆಗೊಂಡ ರಾಜ್ಯ ಸರ್ಕಾರದ ಗ್ಯಾರೆಂಟಿ ಯೋಜನೆಗಳಲ್ಲಿ ಒಂದಾದ “ಗೃಹಲಕ್ಷ್ಮಿ” ಯ ಲಾಭಕ್ಕಾಗಿ ಬಳ್ಳಾರಿ ಒನ್, ಸ್ಪಂದನ ಕೇಂದ್ರಗಳಿಗೆ ಮಹಿಳೆಯರು ಮುಗಿಬಿದ್ದಿದ್ದಾರೆ.
ಗೃಹಲಕ್ಷ್ಮೀ ಯೋಜನೆಯಡಿ ಮಹಿಳೆಯರು ತಮ್ಮ ಅಕೌಂಟ್ ಗೆ ಮಾಸಿಕ ಎರಡು ಸಾವಿರ ರೂ ಪಡೆಯಲು. ಮಹಿಳಾ ಮತ್ತು ಮಕ್ಕಳ ಇಲಾಖೆಯಿಂದಲೇ ತಮ್ಮ ಮೊಬೈಲ್ ಗೆ ಮೆಸೇಜ್ ಬರುತ್ತೆ. ಅದರಲ್ಲಿ ಒನ್ ಸೇವಾ ಕೇಂದ್ರಗಳಿಗೆ ತೆರಳಿ ನೋಂದಣಿ ಮಾಡಿಕೊಳ್ಳಲು ದಿನಾಂಕ ಮತ್ತು ಸಮಯ ನೀಡುತ್ತಾರೆ. ಆಗ ಹೋಗಿ ಸಂಬಂಧಿಸಿದ ದಾಖಲೆ ನೀಡಿ ನೋಂದಣಿ ಮಾಡಿಕೊಳ್ಳಬೇಕೆಂದು ಹೇಳಿದೆ.
ಆದರೂ ಮಹಿಳೆಯರು ಇಂದು ಮೆಸೇಜ್ ಬಂದವರು, ಬರದವರೂ ವೆಬ್ ಕೇಂದ್ರಗಳಿಗೆ ನೂರಾರು ಸಂಖ್ಯೆಯಲ್ಲಿ ಬಂದಿದ್ದಾರೆ. ಇದಕ್ಕೆ ಅವರ ತಪ್ಪು ತಿಳುವಳಿಕೆ ಕಾರಣ ಆಗಿದೆ.
ಜೊತೆಗೆ ಅನೇಕ ಮಹಿಳೆಯರದ್ದು ಆಧಾರ್ ಅಪ್ಡೇಟ್ ಆಗದಿರುವುದು, ಬ್ಯಾಂಕಿಗೆ ಲಿಂಕ್ ಆಗದಿರುವುದು ಸೇರಿದಂತೆ ಹಲವು ಸಮಸ್ಯೆಗಳಿಂದ ಅವನ್ನು ಸರಿಪಡಿಸಲು ಮಹಿಳೆಯರು ನೂಕು ನುಗ್ಗಲು ಹೆಚ್ಚಿದೆ.
ಬಳ್ಳಾರಿಯ ಸ್ಪಂದನ ಕೇಂದ್ರದಲ್ಲಿ ಬೆಳಿಗ್ಗೆಯೇ ಜನ ಬಂದು ಸೇರಿದ್ದರು.
ಹತ್ತು ಗಂಟೆ ವೇಳೆಗೆ ಸಿಬ್ಬಂದಿ ಬರುವುದರೊಳಗೆ ಜನ ಸಿಬ್ಬಂದಿ ಬಂದಿಲ್ಲ ಎಂದು ಕೂಗಾಡುತ್ತಿದ್ದುದು ಕಂಡು ಬಂತು.