ತಪ್ಪಿದ ಭಾರಿ ಬೆಂಕಿ ಅನಾಹುತಚಲಿಸುತ್ತಿದ್ದ ಲಾರಿಯಲ್ಲಿ ಕುಕ್ಕರ್ ಸ್ಫೋಟ

ವಿಜಯಪುರ,ಏ 18: ಚಲಿಸುತ್ತಿದ್ದ ಲಾರಿಯಲ್ಲಿ ಅಡುಗೆ ಮಾಡಲು ಚಿಕ್ಕ ಗ್ಯಾಸ್ ಮೇಲೆ ಇಟ್ಟಿದ್ದ ಕುಕ್ಕರ್ ಸ್ಫೋಟಗೊಂಡು ಗ್ಯಾಸ್ ಉರುಳಿ ಲಾರಿಗೆ ಬೆಂಕಿ ತಗುಲಿದ ಘಟನೆ ವಿಜಯಪುರ ತಾಲ್ಲೂಕಿನ ತಿಡಗುಂದಿ ಬ್ರಿಡ್ಜ್ ಮೇಲೆ ನಡೆದಿದೆ.
ಘಟನೆಯಲ್ಲಿ ಯಾರಿಗೂ ಹಾನಿಯಾಗಿಲ್ಲ. ಲಾರಿ ಮುಂಭಾಗ ಸುಟ್ಟು ಭಸ್ಮವಾಗಿದೆ. ಲಾರಿಯಲ್ಲಿ ಅಡುಗೆ ಮಾಡಿಕೊಳ್ಳಲು ಕುಕ್ಕರ್ ಇಟ್ಟು ಲಾರಿ ಚಲಿಸುತ್ತಿದ್ದಾಗ ಏಕಾಏಕಿ ಕುಕ್ಕರ್ ಸ್ಪೋಟಗೊಂಡಿದೆ.
ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿದೆ. ಲಾರಿಗೆ ಬೆಂಕಿ ತಗುಲಿದ್ದರಿಂದ ಟ್ರಾಫಿಕ್ ಜಾಮ್ ಉಂಟಾಗಿತ್ತು. ವಿಜಯಪುರ ಗ್ರಾಮೀಣ ಪೆÇಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.