ತಪ್ಪಿತಸ್ಥರಿಗೆ ಮರಣದಂಡನೆ ಶಿಕ್ಷೆಯಾಗಲಿ : ಶಾಸಕ ಲಕ್ಷ್ಮಣ ಸವದಿ

ಅಥಣಿ :ಜು.11: ಹಿರೇಕೋಡಿಯ ನಂದಿ ಪರ್ವತ ಆಶ್ರಮದ ಜೈನ ಮುನಿ ಕಾಮಕುಮಾರ ನಂದಿ ಮಹಾರಾಜರ ಭೀಕರ ಹತ್ಯೆಯ ಬಗ್ಗೆ ಅಥಣಿ ಶಾಸಕ ಲಕ್ಷ್ಮಣ ಸವದಿ ಸದನದಲ್ಲಿ ವಿಷಯ ಪ್ರಸ್ತಾಪಿಸಿ ಸರ್ಕಾರದ ಗಮನ ಸೆಳೆದರು,
ಈ ಹತ್ಯೆಯ ಬಗ್ಗೆ ಶಾಸಕ ಲಕ್ಷ್ಮಣ ಸವದಿ ಸದನದಲ್ಲಿ ಮಾತನಾಡಿ ಅಯ ಜೈನ ಮುನಿಯವರ ಹತ್ಯೆಯು ನಾಗರಿಕ ಸಮಾಜ ತಲೆತಗ್ಗಿಸುವಂತಹದ್ದಾಗಿದೆ. ಈ ಹತ್ಯೆಯ ಬಗ್ಗೆ ಹೇಳುವುದಕ್ಕೆ ಎದೆ ಝಲ್ ಎನ್ನುತ್ತದೆ ಯಾರೂ ನಿರೀಕ್ಷಿಸಲಾರದಂತಹ ಭೀಕರ ಕೊಲೆ ನಡೆದಿದೆ. ಇದನ್ನು ಯಾರೂ ಸಮರ್ಥಿಸಲು ಸಾಧ್ಯವಿಲ್ಲ, ಇಂತಹ ಕೊಲೆ ಗಡುಕರಿಗೆ ಎಂತಹ ಕಠಿಣ ಶಿಕ್ಷೆ ನೀಡಿದರೂ ಕಡಿಮೆ ಇದೆ, ಎಂದ ಅವರು ಈ ಕೊಲೆಯ ಹಿಂದೆ ಯಾರೇ ಇರಲಿ ಎಷ್ಟೇ ದೊಡ್ಡವರಿರಲಿ ಸರ್ಕಾರ ನಿಷ್ಪಕ್ಷಪಾತ ತನಿಖೆ ನಡೆಸಿ ಪೆÇಲೀಸ್ ಅಧಿಕಾರಿಗಳು ಕಾನೂನಿನಲ್ಲಿರುವ ಅವಕಾಶವನ್ನು ಬಳಸಿಕೊಂಡು ತಪ್ಪಿತಸ್ಥರಿಗೆ ಮರಣ ದಂಡನೆ ಶಿಕ್ಷೆಯಾಗುವಂತೆ ನೋಡಿಕೊಳ್ಳಬೇಕು ಎಂದರು. ಕಾಮಕುಮಾರ ನಂದಿ ಮಹಾರಾಜರು ನನ್ನ ಮತಕ್ಷೇತ್ರದ ಅದರಲ್ಲೂ ಅವರು ನನ್ನ ಸ್ವಗ್ರಾಮದ ಪಕ್ಕದಲ್ಲಿರುವ ಖವಟಕೊಪ್ಪ ಗ್ರಾಮದವರು. 1964 ರಲ್ಲಿ ಜನಿಸಿದ ಅವರು ದೆಹಲಿಯ ಅಶ್ರಮವೊಂದರಲ್ಲಿ 15 ವರ್ಷಗಳ ಕಾಲ ನೆಲೆಸಿ ದೇಶಕ್ಕೆ ಶಾಂತಿ, ಅಹಿಂಸೆಯ ಸಂದೇಶ ಸಾರಿದವರು. ಬಹುದೊಡ್ಡ ಜಮೀನುದಾರರಾದ ಉಗಾರೆ ಮನೆತನಕ್ಕೆ ಸೇರಿದ ಇವರು ತಮ್ಮ 22 ನೇಯ ವಯಸ್ಸಿನಲ್ಲಿಯೇ ಎಲ್ಲವನ್ನೂ ತ್ಯಜಿಸಿ ಮುನಿಗಳಾಗುವ ಕಠೋರ ವ್ರತ ಮಾಡಿದ್ದಾರೆ. ಶರೀರ ದಂಡನೆ, 24 ಗಂಟೆಯಲ್ಲಿ ಒಂದು ಬಾರಿ ಮಾತ್ರ ಆಹಾರ ಸೇವನೆ ಮಾಡುತ್ತಿದ್ದರು ಎಂದು ತಿಳಿಸಿದರು.
ಜೈನ ಧರ್ಮದ ಬಗ್ಗೆ ನನಗೆ ಅಪಾರ ಗೌರವವಿದೆ,
ಈ ಕೊಲೆಯಲ್ಲಿ ರಾಜಕಾರಣ ಬೆರೆಸುವ ಅವಶ್ಯಕತೆ ಇಲ್ಲ, ಇಲ್ಲಿ ಆಡಳಿತ ಪಕ್ಷ, ವಿರೋಧ ಪಕ್ಷ ಅಂತಾ ಇಲ್ಲ, ಎಲ್ಲರೂ ನಿಷ್ಪಕ್ಷಪಾತವಾಗಿ ಎಲ್ಲರೂ ಸೇರಿಕೊಂಡು ಇನ್ನು ಮುಂದೆ ಇಂತಹ ಘಟನೆ ಮರುಕಳಿಸದಂತೆ ಸರ್ಕಾರದ ಮೇಲೆ ಒತ್ತಡ ತರೋಣ ಎಂದರು,