ತಪ್ಪಿತಸ್ಥರಿಗೆ ಉಗ್ರ ಶಿಕ್ಷೆಗೊಳಪಡಿಸಬೇಕೆಂದು ಕರವೇ ಪ್ರತಿಭಟನೆ

ಅಲೆಮಾರಿ ಸಿಂಧೂಳ್ಳು ಸಮುದಾಯ – ಯುವತಿಯರ ಮೇಲೆ ಅತ್ಯಾಚಾರ, ಕೊಲೆ
ಲಿಂಗಸುಗೂರ.ನ.೧೨- ಲಿಂಗಸುಗೂರ ಪಟ್ಟಣದಲ್ಲಿ ಕರ್ನಾಟಕ ಕರ್ನಾಟಕ ರಕ್ಷಣಾ ವೇದಿಕೆ ಲಿಂಗಸುಗೂರು ಘಟಕ ಸಿಂಧೂಳ್ಳು ಸಮುದಾಯವು ಬಳ್ಳಾರಿ ಜಿಲ್ಲೆಯ ಸಿರಗುಪ್ಪ ತಾಲೂಕಿನ ತೆಕ್ಕಲಕೋಟೆಯ ವಾರ್ಡ ನಂ. ೧ರಲ್ಲಿ ವಾಸವಾಗಿದ್ದಾರೆ. ಈ ಸಮುದಾಯದ ಮೂರು ಜನ, ಯುವತಿಯರು ದಿನಾಂಕ: ೨೯-೧೦ ೨೦೨೧ರಂದು ಹೊಟ್ಟೆಪಾಡಿಗಾಗಿ ಚಿಂದಿ, ಹಳೇ ಪ್ಲಾಸ್ಟಿಕ್ ಸಂಗ್ರಹಿಸಲು ಸಿರಗುಪ್ಪದ ದೇಶನೂರು ಗ್ರಾಮಕ್ಕೆ ತೆರಳಿದ್ದಾರೆ ಎಂದು ತಿಳಿದು ಬಂದಿದೆ. ಮೂರು ಜನ ಯುವತಿಯರು ಸೇರಿ ಹಳೇ ಪ್ಲಾಸ್ಟಿಕ್ ಇತ್ಯಾದಿಗಳನ್ನು ಸಂಗ್ರಹಿಸಿದ್ದಾರೆ. ಮೂರು ಜನ ಯುವತಿಯರಲ್ಲಿ ಒಬ್ಬ ಯುವತಿಯನ್ನು ಅವರು ಸಂಗ್ರಹಿಸಿದ ವಸ್ತುಗಳನ್ನು ಕಾಯ್ದುಕೊಂಡು ಇರು ನಾವು ಇನ್ನೊಂದಿಷ್ಟು ಆಯ್ದುಕೊಂಡು ಬರುತ್ತೇವೆ ಎಂದು ಹೇಳಿ ಕುಮಾರಿ ಜೇಜಮ್ಮು ಮತ್ತು ಸಿದ್ದಮ್ಮ ಪೇಪರ್ ಆಯ್ದುಕೊಂಡು ಬರಲು ಹೋಗಿದ್ದಾರೆ. ಆದರೆ ತುಂಬಾ ಸಮಯವಾದ ನಂತರವೂ ಅವರು ಬರದಿದ್ದಾಗ ಈ ಹುಡುಗಿ ಹುಡುಕುತ್ತಾ ಹೊರಟಿದ್ದಾಳೆ. ಎದುರಿಗೆ ಸಿಕ್ಕ ಒಬ್ಬ ವ್ಯಕ್ತಿಯನ್ನು ವಿಚಾರಿಸಿದಾಗ ಆ ವ್ಯಕ್ತಿ ಹೇಳಿದ್ದೇನೆಂದರೆ, ನಿಮ್ಮ ಇಬ್ಬರು ಹುಡುಗಿಯರು ನದಿಯಲ್ಲಿ ಜಿಗಿದು ಸತ್ತು ಹೋಗಿದ್ದಾರೆ ಎಂದು ಹೇಳಿದ್ದನಂತೆ. ಸತತ ಎರಡು ದಿನ ಹುಡುಕಿದ ನಂತರ ದೇಶನೂರು ಗ್ರಾಮದ ನದಿಯ ಪಂಪ್‌ಸೆಟ್ ರೂಮಿನ ಹತ್ತಿರ ಇವರ ದೇಹಗಳು ಪತ್ತೆಯಾಗಿವೆ ಎಂದು ಸಿಂಧೋಳ್ಳು ಸಮುದಾಯದ ಮುಖಂಡರು ತಿಳಿಸಿದ್ದಾರೆ.
ಈ ಯುವತಿಯರ ದೇಹದ ಮೇಲೆ ಅಲ್ಲಲ್ಲಿ, ಗಾಯದ ಗುರುತುಗಳು ಕಂಡು ಬರುತ್ತಿರುವುದರಿಂದ ಇದು ಆತ್ಮಹತ್ಯೆ ಅಂಶ ಖಂಡಿತ ಅಲ್ಲಾ ಎಂದು ಮೇಲ್ನೋಟಕ್ಕೆ ಕಂಡು ಬರುತ್ತದೆ. ಆದರೆ ಇದು ಆತ್ಮಹತ್ಯೆ ಎಂದು ಬಿಂಬಿಸುವ ಪ್ರಯತ್ನ ನಡೆಯುತ್ತಿದೆ. ಆದರೆ ಇದು ಖಂಡಿತವಾಗಿ ಆತ್ಮಹತ್ಯೆಯಾಗಿರಲಾರದು. ಯಾರೋ ಅತ್ಯಾಚಾರಿಗಳು ಅತ್ಯಾಚಾರ ಮಾಡಿ ಕೊಲೆ ಮಾಡಿರುವ ಸಾಧ್ಯತೆ ಇದೆ.
ಅಲೆಮಾರಿ ಬುಡಕಟ್ಟು ಮಹಿಳೆಯರ ಮೇಲೆ ಅತ್ಯಾಚಾರದಂತಹ ಘಟನೆಗಳನ್ನು ನಡೆದಾಗಲೂ ಪೋಲಿಸ್ ಸ್ಟೇಷನ್‌ಗೆ ಹೋಗಿ ದೂರು ದಾಖಲಿಸುವಂತಹ ತಿಳುವಳಿಕೆ, ಧೈರ್ಯ ಮತ್ತು ಸಾಕ್ಷರತೆ ಇಲ್ಲದಿರುವುದರಿಂದ ಆದಷ್ಟೋ ಪ್ರಕರಣಗಳು ಬೆಳಕಿಗೆ ಬಾರದೆ ಮುಚ್ಚಿ ಹೋಗುತ್ತಿವೆ. ಬಳ್ಳಾರಿ ಜಿಲ್ಲೆಯ ತೆಕ್ಕಲಕೋಟಿಯ ಜೇಜಮ್ಮ (೧೬ ವರ್ಷ) ಮತ್ತು ಸಿದ್ದಮ್ಮ (೧೮ ವರ್ಷ) ಇವರನ್ನು ದುಷ್ಕರ್ಮಿಗಳು ಅತ್ಯಾಚಾರ ಮಾಡಿ ಕೊಲೆ ಮಾಡಿರುವ ಶಂಕೆ ಇದೆ.
ದಯವಿಟ್ಟು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಪೋಲಿಸ್ ಇಲಾಖೆಯಿಂದ ತನಿಖೆಗೆ ಒಳಪಡಿಸಿ ತಪ್ಪಿತಸ್ಥರಿಗೆ ಉಗ್ರಶಿಕ್ಷೆ ನೀಡಬೇಕೆಂದು ಕರ್ನಾಟಕ ರಕ್ಷಣಾ ವೇದಿಕೆ ಲಿಂಗಸುಗೂರು ಘಟಕ ತಮ್ಮಲ್ಲಿ ಒತ್ತಾಯಿಸುತ್ತದೆ, ಈ ಸಂದರ್ಭದಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ತಾಲ್ಲೂಕು ಅದ್ಯೆಕ್ಷರಾದ ಜಿಲಾನಿಪಾಶ .ಶಿವರಾಜ್ ನಾಯಕ. ಅಜೀಜ್ ಪಾಷಾ.ಚಂದ್ರು ನಾಯಕ. ರವಿಕುಮಾರ ಅನಿಲಕುಮಾರ. ಕರಿಯಪ್ಪ .ಶಾಮಣ್ಣ. ಸಿದ್ದಪ್ಪ. ಇನ್ನಿತರರು ಉಪಸ್ಥಿತರಿದ್ದು ಲಿಂಗಸುಗೂರ ಸಹಾಯಕ ಆಯುಕ್ತರಿಗೆ ಮನವಿ ಸಲ್ಲಿಸಿದರು.