ತಪ್ಪಿತಸ್ಥರಾದವರು ರಾಜೀನಾಮೆ ನೀಡುವ
ಆನಂದ್ ಸಿಂಗ್ ಗೆ ಖದೀರ್ ಸವಾಲು


ಸಂಜೆವಾಣಿ ವಾರ್ತೆ
ಹೊಸಪೇಟೆ, ಸೆ.08: ಆಲಿಬಾಬಾ ಚಾಲೀಸ್ ಚೋರರನ್ನು ಬಯಲಿಗೆಳೆಯುವ,  ನನ್ನ ವಿರುದ್ದ ವ್ಯವಸ್ಥಿತವಾಗಿ ಪಿತೂರಿ ನಡೆಯುತ್ತಿದೆ ಎಂದು ಸಚಿವ ಆನಂದಸಿಂಗ್ ಹೇಳಿಕೆಗೆ ಆಕ್ಷೇಪಿಸಿದ ನಗರಸಭೆಯ 6ನೇ ವಾರ್ಡ್ ಸದಸ್ಯ ಅಬ್ದುಲ್ ಖದೀರ್ ಸಚಿವರಿಗೆ ಪಂಥಾಹ್ವಾನ ನೀಡಿದರು.
ಹೊಸಪೇಟೆಯ ಪತ್ರಿಕಾಭವನದಲ್ಲಿ  ಸುದ್ದಿಗೋಷ್ಠಿಯನ್ನು ಉದ್ದೇಸಿಸಿ ಮಾತನಾಡಿದ ಅವರು. ನಾನು ರಾಜಕೀಯವಾಗಿ  ಬೆಳೆಯುತ್ತಿರುವ ಹಾಗೂ ಸದ್ಯ ಆಗುತ್ತಿರುವ ಬೆಳವಣಿಗೆಯನ್ನು ಗಮನಿಸಿದರೆ ಏನು ಆಗುತ್ತಿದೆ, ಯಾಕೆ ಆಗುತ್ತಿದೆ ಎಂದು ತಿಳಿಯದಾಗಿದೆ. ಈ ಎಲ್ಲವನ್ನೂ ಬಯಲಿಗೆಳೆಯುವ ಮೂಲಕ ಸತ್ಯ ಹೊರಬರುವಂತೆ ಮಾಡುವೆ ಎಂದಿರುವುದು ಸಂತೋಷದಿಂದ ಸ್ವಾಗತಿಸುವೆ ಎಂದಿರುವ ಖದೀರ್ ಅವರು ಮುಂದೆ ನಿಂತು ಸರ್ವೆ ಮಾಡಿಸೋಣ ತಪ್ಪಿತಸ್ಥರಾದವರು ರಾಜೀನಾಮೆ ನೀಡೋಣ ನಾನು ತಪ್ಪು ಮಾಡಿದ್ದರೆ ನಗರಸಭಾ ಸದಸ್ಯತ್ವಕ್ಕೆ ಅವರ ತಪ್ಪಿದ್ದರೆ ಸಚಿವ ಹಾಗೂ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲಿ ಎಂದು ನಗರಸಭೆಯ 6ನೇ ವಾರ್ಡ್ ಸದಸ್ಯ ಅಬ್ದುಲ್ ಖದೀರ್ ಸಚಿವರಿಗೆ ಚಾಲೇಂಚ್ ಮಾಡಿದರು.
ಯಾವುದೋ ಸರ್ವೆ ನಂಬರ್ ಗೆ ಕ್ಲೀನ್ ಚೀಟ್ ಸಿಕ್ಕಿದೆಯೋ ಅದರಲ್ಲಿ ಯಾವುದೇ ಆರೋಪ ಇಲ್ಲ, ಆದರೆ ದೂರು ಇರುವುದು  ಬೇರೆ,  ಕ್ಲೀನ್ ಚೀಟ್ ಇರುವುದೇ ಬೇರೆ, ಜನರ ದಿಕ್ಕುತಪ್ಪಿಸುವ ಕೆಲಸ ಸಚಿವ ಆನಂದಸಿಂಗ್ ಮಾಡುತ್ತಿದ್ದಾರೆ. ಸರ್ಕಾರ ಜಾಗ ಅಪಹರಿಸಿ ತಮ್ಮ ಕಾರ್ಯಕ್ಕೆ ಅಡ್ಡಿಯಾಗಿರುವವರನ್ನು ಭೂಗಳ್ಳರು ಎನ್ನುವ ಮೂಲಕ ತಮ್ಮ ಕಾರ್ಯ ಸಾಧಿಸಲು ಹೊರಟಿದ್ದಾರೆ. ಸಚಿವ ಹಾಗೂ ಶಾಸಕರಾಗಿ ಸಾರ್ವಜನಿಕರ ಆಸ್ತಿ ಕಾಪಾಡಬೇಕಾದವರು ಆಸ್ತಿಯನ್ನು ಲಪಟಾಯಿಸುತ್ತಿರುವುದು ಅಕ್ಷ್ಯಮ್ಯ. ಜೊತೆಗೆ ಅನಗತ್ಯವಾಗಿ ಯಾರನ್ನೋ ಆಲಿಬಾಬಾ ಚಾಲೀಸ್ ಚೋರ್ ಎಂದು ಪದೆ ಪದೆ ಸುಳ್ಳು ಹೇಳಿ ಸತ್ಯ ಮಾಡಲು ಹೊರಟಿದ್ದಾರೆ ಎಂದರು. ಸಚಿವರಾಗಿ ಅಕ್ರಮದಲ್ಲಿ ಪಾಲ್ಗೊಂಡು ಇನ್ನೂ ಅನೇಕ ಅಕ್ರಮಗಳಲ್ಲಿ ಭಾಗಿಯಾಗಿರುವ ಸಚಿವರ ಮತ್ತಷ್ಟು ಅಕ್ರಮ ಬಯಲು ಮಾಡುವೆ ಎಂದು ಖದೀರ್ ತಿಳಿಸಿದರು.

Attachments area