ತಪ್ಪದೇ ಮತ ಚಲಾಯಿಸಬೇಕು; ಜಿ.ಪಂ. ಸಿಇಒ ಸ್ವರೂಪ ಟಿ.ಕೆ.

ಹುಬ್ಬಳ್ಳಿ,ಏ11 : ಕೈಗಾರಿಕೆಗಳ ಉದ್ಯೋಗಿಗಳು ಕಡ್ಡಾಯವಾಗಿ ಮತದಾನ ಮಾಡಬೇಕು. ಅಲ್ಲದೇ ತಮ್ಮ ಕುಟುಂಬದ ಸದಸ್ಯರುಗಳು ಸಹ ತಪ್ಪದೇ ಮತ ಚಲಾಯಿಸಬೇಕು. ಆ ಮೂಲಕ ಸಂವಿಧಾನದ ಹಕ್ಕನ್ನು ಚಲಾಯಿಸುವಂತಾಗಬೇಕು ಎಂದು ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸ್ವರೂಪ .ಟಿ.ಕೆ. ಹೇಳಿದರು.
ಹುಬ್ಬಳ್ಳಿಯ ಉತ್ತರ ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘಗಳ ಕಚೇರಿಯಲ್ಲಿ ಸ್ವೀಪ್ ಸಮಿತಿ ವತಿಯಿಂದ ಜರುಗಿದ ಲೋಕಸಭಾ ಚುನಾವಣೆಯು ಮತದಾನ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ಹಾಗೂ ಮತದಾನದ ಕೇಂದ್ರ ನೋಡುವ ಬಗ್ಗೆ ಓಟರ್ ಹೆಲ್ಪ್ ಲೈನ್ ಅಪ್ಲಿಕೇಶನ್ ಅಥವಾ ಹೆಲ್ಫ್ ಲೈನ್ ನಂಬರ್ 1950 ಕರೆ ಮಾಡಿ ಮಾಹಿತಿ ಪಡೆದುಕೊಳ್ಳಬಹುದಾಗಿದೆ. ಏಪ್ರೀಲ್ 28 ರಂದು ಆಯೋಜಿಸುವ ನಮ್ಮ ನಡೆ ಮತದಾನದ ಕಡೆ ಅಭಿಯಾನದಲ್ಲಿ ತಪ್ಪದೇ ಭಾಗವಹಿಸುವಂತೆ ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದವರ ಮತದಾನದ ಕುರಿತಾದ ಸಮಸ್ಯೆಗಳಿಗೆ ಪ್ರತ್ಯುತ್ತರ ನೀಡಿದರು.
ಖೈರುದ್ದೀನ ಶೇಖ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ ಮುಖ್ಯ ಯೋಜನಾಧಿಕಾರಿಗಳಾದ ದೀಪಕ್ ಮಡಿವಾಳರ, ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಶಿವಪುತ್ರಪ್ಪ, ಉಪ ನಿರ್ದೇಶಕ ಭೀಮಪ್ಪ ಹಾಗೂ ಇತರೆ ಸಣ್ಣ ಕೈಗಾರಿಕೆಗಳ ಮಾಲೀಕರು, ಉದ್ಯೋಗಿಗಳು, ಇತರರು ಹಾಜರಿದ್ದರು.
ಎನ್.ಕೆ.ಎಸ್.ಎಸ್.ಐ.ಎ ಅಧ್ಯಕ್ಷರಾದ ಗಿರೀಶ್ ನಾಲವಡಿ ಸ್ವಾಗತಿಸಿದರು. ಕನ್ನೂರ್ ವಂದಿಸಿದರು.