ತಪಾಸಣಾ ಕೇಂದ್ರ ನಿರ್ಮಾಣ

ನೇಸರಗಿ,ಮಾ19: ಲೋಕಸಭಾ 2024 ಚುನಾವಣೆಯ ಹಿನ್ನೆಲೆಯಲ್ಲಿ ಪ್ರದೇಶಗಳಲ್ಲಿ ಆದೇಶದ ಮೇರೆಗೆ ತಪಾಸಣಾ ಕೇಂದ್ರಗಳನ್ನು ನಿರ್ಮಿಸಲಾಗಿದ್ದು, ವಾಹನಗಳ ತಪಾಸಣೆಯನ್ನು ಕಟ್ಟುನಿಟ್ಟಾಗಿ ಮಾಡಲಾಗುತ್ತದೆ.
ಲೋಕಸಭೆಯ ಚುನಾವಣೆಯ ಹಿನ್ನೆಲೆಯಲ್ಲಿ ನೇಸರಗಿ ಬಾಗಲಕೋಟ ಬೆಳಗಾವಿ ಹೆದ್ದಾರಿಯ ತಪಾಸಣಾ ಕೇಂದ್ರಕ್ಕೆ ಚಾಲನೆ ನೀಡಿದ ನೇಸರಗಿ ಪೆÇೀಲಿಸ್ ಠಾಣೆಯ ಸಿಪಿಐ ರಾಘವೇಂದ್ರ ಹವಾಲ್ದಾರ್ ಅವರು, ಚುನಾವಣಾ ಆಯೋಗ ಹಾಗೂ ಜಿಲ್ಲಾ ಚುನಾವಣಾಧಿಕಾರಿಯವರ ಕಟ್ಟುನಿಟ್ಟಿನ ಸೂಚನೆ ಹಿನ್ನೆಲೆಯಲ್ಲಿ ಪ್ರತಿ ಪೆÇೀಲಿಸ್ ಠಾಣೆಯ ವ್ಯಾಪ್ತಿಯ ಪ್ರದೇಶದಲ್ಲಿ ತಪಾಸಣಾ ಕೇಂದ್ರಗಳನ್ನು ತೆರೆಯಲಾಗಿದೆ. ಬಾಗಲಕೋಟ ವಿಜಯಪುರ ಹೈದರಾಬಾದದಿಂದ ಗೋವಾ ಮಹಾರಾಷ್ಟ್ರ ಕಡೆ ಬಂದು ಹೋಗುವ ವಾಹನಗಳನ್ನು ತಪಾಸಣೆಗೊಳಪಡಿಸಿ ಹಾಗೂ ಸಂಶಯಾಸ್ಪದ ವ್ಯಕ್ತಿಗಳನ್ನು ಈ ಕೇಂದ್ರದಲ್ಲಿ ತಪಾಸಣೆಗೆ ಒಳಪಡಿಸಲಾಗುತ್ತದೆ ಎಂದರು.ತಪಾಸಣಾ ಕೇಂದ್ರದಲ್ಲಿ ಪೆÇಲೀಸರು ಸೇರಿದಂತೆ ಸರಕಾರಿ ಇಲಾಖೆ ಅಧಿಕಾರಿಗಳು ಸಿಬ್ಬಂದಿ ಕಾರ್ಯನಿರ್ವಹಿಸಲಿದ್ದಾರೆ ಎಂದು ಹೇಳಿದರು.
ಹೊರ ರಾಜ್ಯ ಹಾಗೂ ಜಿಲ್ಲೆಯಿಂದ ಬರುವ ಎಲ್ಲ ವಾಹನಗಳ ತಪಾಸಣೆ ಮಾಡಲಾಗುತ್ತಿದೆ. ದಿನದ 24 ಗಂಟೆಗಳು ಕಾರ್ಯ ನಿರ್ವಹಿಸುತ್ತಿರುವ ಕೇಂದ್ರಗಳಲ್ಲಿ 6 ಮಂದಿ ಎಕ್ಸಿಕ್ಯುಟಿವ್ ಮ್ಯಾಜಿಸ್ಪ್ರೇಟರ್ ಹಾಗೂ ಸಹಾಯಕರು ದಿನದ 24 ಗಂಟೆಯಂತೆ ಕಾರ್ಯನಿರ್ವಹಿಸಲಿದ್ದಾರೆ. ಎಂದರು.
ಈ ಸಂಧರ್ಭದಲ್ಲಿ ಚೇಕ್ ಪೆÇೀಸ್ಟ್ ತನಿಖಾಧಿಕಾರಿ ಗಂಗಪ್ಪ ಮರೇನ್ನವರ, ಪಿಎಸ್‍ಐ ಸಿದ್ದಪ್ಪ ಯಡಹಳ್ಳಿ, ವಿ. ಎಸ್. ಡೋಣಿ, ಡಬ್ಲುಪಿಸಿ ಎಸ್. ಐ. ಕೆಂಚವ್ವಗೋಳ, ಬಿ. ಡಿ. ಹಮ್ಮಿಣಿ, ಸುನೀಲ ಸಂಗಮ್ಮನವರ, ಭೀಮರಾವ ಕಡೆಟ್ಟಿ ಇದ್ದರು.