`ತಪಸಿ’ ಬಿರುಸಿ ಚಿತ್ರೀಕರಣ

`ತಪಸಿ’ ಚಿತ್ರಕ್ಕೆ ಬಿರುಸಿನ ಚಿತ್ರೀಕರಣ ಸಾಗಿದೆ. ನಾಯಕಿ ಜೊತೆಗೆ ಇತರ ಪಾತ್ರದಾರಿಗಳು ಅಭಿನಯಿಸಿದ ದೃಶ್ಯಗಳು ಒಂದು ವಾರದಿಂದ ಚಿತ್ರೀಕರಣ ನಡೆಯುತ್ತಿದೆ.

ಚಿತ್ರವನ್ನು ನಿರ್ಮಿಸಿರುವ ಸ್ಪೆನ್ಸರ್ ಮ್ಯಾಥ್ಯು ನಿರ್ದೇಶನ ಮಾಡುತ್ತಿದ್ದಾರೆ. ಫೈಟ್-ಮಾಸ್ಟರ್ ಅಶೋಕ್, ಸಂಕಲನ-ಅರುಣ, ತಾರಾಗಣದಲ್ಲಿ ಅಮೇರಾ, ಬಾಲರಾಜ್ ವಾಡಿ, ರಥರ್ವ, ಸಚಿನ್ ಭಾಸ್ಕರ್, ಅನುಷಾ ಮುಂತಾದವರಿದ್ದಾರೆ. 

ಚಿತ್ರೀಕರಣವನ್ನು ಬೆಂಗಳೂರು, ಮಂಗಳೂರಿನಲ್ಲಿ ನಡೆಸಲಾಗುತ್ತದೆ ಕನ್ನಡ ಮತ್ತು ಇಂಗ್ಲೀಷ್ ಎರಡು ಭಾಷೆಗಳಲ್ಲಿ ನಿರ್ಮಾಣವಾಗುತ್ತಿರುವ  ಚಿತ್ರದಲ್ಲಿ ಇಂದು ಸಮಾಜದಲ್ಲಿ ಪಿಡುಗು ರೂಪದಲ್ಲಿ ಕಾಡುತ್ತಿರುವ ಡ್ರಗ್ಸ್ ಹಾಗೂ ಮದ್ಯಪಾನದ ಸುತ್ತ ನಡೆಯುವ ಕಥಾವಸ್ತುವುಳ್ಳ ಈ ಚಿತ್ರವು ಮಹಿಳಾ ಪ್ರಧಾನ ಚಿತ್ರವಾಗಿರುತ್ತದೆ.