
ಮೈಸೂರು: ಮೇ.18:- ಶಾಸಕ ತನ್ವೀರ್‍ಸೇಠ್ ಅವರಿಗೆ ಉಪ ಮುಖ್ಯಮಂತ್ರಿ ಸ್ಥಾನ ನೀಡಬೇಕು ಎಂದು ಒತ್ತಾಯಿಸಿ ಕಾಂಗ್ರೆಸ್ ಮುಖಂಡರು ಮತ್ತು ಅಲ್ಪಸಂಖ್ಯಾತರ ಘಟಕದ ಪದಾಧಿಕಾರಿಗಳು ನಗರದ ಪುರಭವನ ಎದುರಿನ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆ ಬಳಿ ಪ್ರತಿಭಟಿಸಿದರು.
ಕಾಂಗ್ರೆಸ್‍ನ ಹೈಕಮಾಂಡ್, ರಾಜ್ಯ ನಾಯಕರಾದ ಡಿ.ಕೆ.ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರು ತನ್ವೀರ್‍ಸೇಠ್ ಪP?ಷÀಕ್ಕಾಗಿ ದುಡಿದ ಸೇವೆಯನ್ನು ಮನಗಾಣಬೇಕು ಎಂದು ಆಗ್ರಹಿಸಿ, ಪ್ಲೇ ಕಾರ್ಡ್ ಮತ್ತು ಪಕ್ಷದ ಬಾವುಟ ಹಿಡಿದು ಒಕ್ಕೊರಲಿನಿಂದ ಆಗ್ರಹಿಸಿದರು.
ನಗರದ ನರಸಿಂಹರಾಜ ಕ್ಷೇತ್ರದಲ್ಲಿ ಸತತ 6ನೇ ಬಾರಿಗೆ ತನ್ವೀರ್‍ಸೇಠ್ ಅವರು ಶಾಸಕರಾಗಿ ಆಯ್ಕೆಯಾಗಿದ್ದಾರೆ. ಈ ಹಿಂದೆ ಅವರಿಗೆ ನೀಡಿದ್ದ ಸಾರ್ವಜನಿಕ ಶಿP?ಷÀಣ, ಅಲ್ಪಸಂಖ್ಯಾತರ ಇಲಾಖೆಯನ್ನು ಸಮರ್ಥವಾಗಿ ನಿರ್ವಹಿಸಿದ್ದಾರೆ. ಅವರಿಗೆ ಈ ಬಾರಿ ಉಪ ಮುಖ್ಯಮಂತ್ರಿ ಸ್ಥಾನ ನೀಡಬೇಕು. ಮೈಸೂರು ಭಾಗಕ್ಕೆ ರಾಜಕೀಯವಾಗಿ ಪ್ರಾತಿನಿಧ್ಯ ದೊರೆಯುವ ಜತೆಗೆ ಅಲ್ಪಸಂಖ್ಯಾತ ಶಾಸಕರಲ್ಲಿ ಹಿರಿಯರು ಮತ್ತು ಅನುಭವಿಗಳಾದ ತನ್ವೀರ್‍ಸೇಠ್ ಅವರಿಗೆ ಉತ್ತಮ ಸ್ಥಾನಮಾನ ಕಲ್ಪಿಸಬೇಕು ಎಂದು ಒತ್ತಾಯಿಸಿದರು. ಪ್ರತಿಭಟನೆಯಲ್ಲಿ ನಗರ ಕಾಂಗ್ರೆಸ್ ವಕ್ತಾರ ರಾಜೇಶ್, ಸೈಯದ್ ಫಾರೂಖ್, ಕಾಂಗ್ರೆಸ್‍ನ ವಿವಿಧ ವಿಭಾಗದ ಅಧ್ಯಷÀರು, ಬ್ಲಾಕ್ ಅಧ್ಯP?ಷÀರು ಮತ್ತು ಪದಾಧಿಕಾರಿಗಳು ಭಾಗವಹಿಸಿದ್ದರು.