
ಸಂಜೆವಾಣಿ ವಾರ್ತೆ
ಕೊಟ್ಟೂರು, ಮೇ.19: ಕಳೆದ ಎಪ್ರಿಲ್ 21 ರಂದು 2023ರ ಸಾಲಿನ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಣೆಗೊಂಡಾಗ ಪಟ್ಟಣದ ಇಂದು ಕಾಲೇಜಿನ ಕಲಾ ವಿಭಾಗದಲ್ಲಿ ಕುಶನಾಯ್ಕ್ ಮತ್ತು ಕರಿಬಸಮ್ಮ ರಾಜ್ಯಕ್ಕೆ ದ್ವಿತೀಯ ಸ್ಥಾನವನ್ನು ಪಡೆದುಕೊಂಡಿದ್ದರು. ಕುಶನಾಯ್ಕ್ ಮತ್ತು ಕೆ ಕೃಷ್ಣ ಅವರು ಮರು ಮೌಲ್ಯಮಾಪನಕ್ಕೆ ಅರ್ಜಿಯನ್ನು ಸಲ್ಲಿಸಿದ್ದರು. ಈ ಮರು ಮೌಲ್ಯಮಾಪನದ ಫಲಿತಾಂಶ ಪ್ರಕಟಣೆಗೊಂಡಾಗ ಎರಡು ಅಂಕಗಳು ಹೆಚ್ಚು ಗಳಿಸಿ ರಾಜ್ಯಕ್ಕೆ ಪ್ರಥಮ ಸ್ಥಾನವನ್ನು ಗಳಿಸಿದ್ದಾರೆ. ಸತತ ಎಂಟನೇ ಬಾರಿಗೆ ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸಿ ಇಂದು ಕಾಲೇಜ್ ತನ್ನ ಸ್ಥಾನವನ್ನು ಭದ್ರಗೊಳಿಸಿದೆ.
ಕುಶ ನಾಯಕ್ ಅವರಿಗೆ ಮೊದಲು 592 ಅಂಕ ಪಡೆದಿದ್ದರು. ನಂತರ ಮರು ಮೌಲ್ಯಮಾಪನಕ್ಕೆ ಅರ್ಜಿಯನ್ನು ಸಲ್ಲಿಸಿದ್ದರು ಇದರ ಫಲಿತಾಂಶ ಪ್ರಕಟಣೆಗೊಂಡಾಗ ಎರಡು ಅಂಕ ಹೆಚ್ಚಾಗಿ 594 ಅಂಕ ಪಡೆದು ರಾಜ್ಯಕ್ಕೆ ಪ್ರಥಮ ಸ್ಥಾನವನ್ನು ಪಡೆದುಕೊಂಡರೆ. ಕೃಷ್ಣ ಇವರು ಮೊದಲ ಫಲಿತಾಂಶದಲ್ಲಿ 591 ಅಂಕ ಗಳಿಸಿದ್ದರು. ಇವರು ಮರು ಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಿದ್ದರು. ನಂತರದ ಫಲಿತಾಂಶದಲ್ಲಿ ಎರಡು ಅಂಕ ಹೆಚ್ಚು ಗಳಿಸಿ 593 ಅಂಕ ಪಡೆದು ರಾಜ್ಯಕ್ಕೆ ದ್ವಿತೀಯ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಕುಶ ನಾಯಕ್ 594, ಕೆ ಕೃಷ್ಣ 593, ಕರಿಬಸಮ್ಮ 592 ಅಂಕ ಗಳಿಸಿ ಪ್ರಥಮ, ದ್ವಿತೀಯ, ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ.