ತನ್ನ ನೋವೆ ಮಹಿಳಾ ಸಾಹಿತಿಗಳಿಗೆ ಕಥಾವಸ್ತು


ಸಂಜೆವಾಣಿ ವಾರ್ತೆ
ಹಗರಿಬೊಮ್ಮನಹಳ್ಳಿ. ನ.14 ಪುರುಷರಿಗೆ ಅಭಿವ್ಯಕ್ತಿ ಸ್ವಾತಂತ್ರ್ಯವಿತ್ತು. ಅವರು ಹೆಣ್ಣಿನ ಅಂಗಾಂಗಗಳ ಬಗ್ಗೆ ವರ್ಣಿನೆ ಮಾಡುತ್ತಾ ಬಂದರು. ಆದರೆ ಮಹಿಳೆ ಬರೆಯತೊಡಗಿದಾಗ ಎಂದೂ ಮುಗಿಯದ ತನ್ನ ನೋವಿನ ಬಗ್ಗೆ ಬರೆದಳೇ ಹೊರತು ಸೌಂದರ್ಯ ಆಕೆಯ ಆದ್ಯತೆಯಾಗಲಿಲ್ಲ ಎಂದು -ಕೊಟ್ಟೂರಿನ ಭಾಗೀರಥಿ ಕಾಲೇಜಿನ ಪ್ರಾಂಶುಪಾಲರು ನಿರ್ಮಲಾ ಶಿವನಗುತ್ತಿ ಹೇಳಿದರು.
ತಾಲೂಕಿನ ತಂಬ್ರಹಳ್ಳಿ ಯ ಬಂಡೆ ರಂಗನಾಥ ದೇಗುಲದ ಆವರಣದಲ್ಲಿ ಶನಿವಾರ ನಡೆದ ಕವಿಗೋಷ್ಠಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು
ಅಧ್ಯಕ್ಷತೆ ವಹಿಸಿ ಹರಪನಹಳ್ಳಿ ಉಪನ್ಯಾಸಕ ಮಲ್ಲಿಕಾರ್ಜುನ್ ಮಾತನಾಡಿ ಚಲನಶೀಲವಾದ ಬದುಕನ್ನು ಕಾವ್ಯ ಸಮರ್ಥವಾಗಿ ಕಟ್ಟಿಕೊಡುತ್ತದೆ. ಕಾವ್ಯವು ನೋವನ್ನು ಅಭಿವ್ಯಕ್ತಿಸಿ, ಬದುಕನ್ನು ಸಹ್ಯವಾಗಿಸುತ್ತದೆ
ಕಾರ್ಯಕ್ರಮದಲ್ಲಿ ಸಾಹಿತಿ ಸುಧಾ ಚಿದಾನಂದಗೌಡ ಪ್ರಾಸ್ತಾವಿಕವಾಗಿ ಮಾತನಾಡಿ ನೋವಿಗೆ ಸ್ಪಂದಿಸುವುದು ನಿಜವಾದ ಕಾವ್ಯ. ಹೊಸಜಿಲ್ಲೆ ವಿಜಯನಗರದ ಹೊಸ್ತಿಲಲ್ಲಿರುವಾಗ ಇತಿಹಾಸದ ಹಿಂದನ ಕಪ್ಪುಕಥೆಯನ್ನೂ ಮರೆಯಬಾರದು. ವಿಜಯನಗರ ಕಾಲದಲ್ಲೂ ಸ್ತ್ರೀಶೋಷಣೆಯಿತ್ತು ಎಂದರು.
ಅಬ್ದುಲ್ ಹೈ ತೋರಣಗೊಲ್, ಪಿ. ಆರ್ ವೆಂಕಟೇಶ್ ಕಾವ್ಯ, ಬಂಡಾಯ ಧೋರಣೆಯನ್ನು ಕುರಿತು ಮಾತನಾಡಿದರು.
 ಕವನ ವಾಚಿಸಿದ ಕವಿಗಳು
ಮೇಟಿ ಕೊಟ್ರಪ್ಪ, ಉಪ್ಪಾರ‌ಬಸಪ್ಪ, ಹುರುಕಡ್ಲಿ ಶಿವಕುಮಾರ್, ಎ.ಆರ್. ಪಂಪಣ್ಣ, ಮೇಟಿ ಕೊಟ್ರಪ್ಪ, ವಿಶಾಲ್ ಎಂ. ಸುಜಾತ, ಶಿಕ್ಷಕಿಯರಾದ ಹೊಸಪೇಟೆಯ ಅರುಂಧತಿ, ಆರತಿ, ಅರುಣಾ:ಅರುಣಾ ಕೊಟ್ರೇಶ್,ಶಾಂತಶ ರುದ್ರಪ್ಪ,ಆಶಾ ಮೈದೂರು, ಚಿಕ್ಕೇರಿ ಓಬಮ್ಮ, ಶಾಂತಾ ಹೆಚ್.ವಾಸಂತಿ ಸಾಲ್ಮನಿ,  ಚೇತನ್ ರಾಜ್, ಲಕ್ಷ್ಮೀಬಾಯಿ, ಮಂಜುನಾಥ ಮೋರಗೇರಿ, ಕಾಡಜ್ಜಿ ಮಂಜುನಾಥ, ಓಂಪ್ರಕಾಶ್ ಭಾಗವಹಿದ್ದರು.