ತನು ಮನು ಪ್ರೇಮಕಥೆ

“ಕೆಂಪಿರುವೆ”  ಚಿತ್ರದ ಬಳಿಕ ನಿರ್ದೇಶಕ ವೆಂಕಟ್ ಭಾರಧ್ವಜ್  ” ನಗುವಿನ ಹೂಗಳ ಮೇಲೆ” ಚಿತ್ರದ ಮೂಲಕ ತನು – ಮನು ನಡುವಿನ ಪ್ರೇಮಕಥೆಯನ್ನು ತೆರೆಗೆ ಕಟ್ಟಿಕೊಡಲು  ಮುಂದಾಗಿದ್ದಾರೆ.

ಹಾಡುಗಳ ಬಿಡುಗಡೆ ವೇಳೆ ಮಾತನಾಡಿದ ನಿರ್ದೇಶಕ  ವೆಂಕಟ್ ಭಾರಧ್ವಜ್,  ಡಾ. ರಾಜ್ ಕುಮಾರ್ ನಟಿಸಿದ್ದ “ಭಾಗ್ಯವಂತರು” ಚಿತ್ರಕ್ಕಾಗಿ ಚಿ. ಉದಯ ಶಂಕರ್ ಬರೆದಿದ್ದ ಹಾಡಿನ ಸಾಲಿನ‌ ಪದ ತೆಗೆದು ಚಿತ್ರದ ಶೀರ್ಷಿಕೆ‌ ಇಡಲಾಗಿದೆ. ಪ್ರೇಮಕಥೆ  ಕಟ್ಟಿಕೊಡಲಾಗುತ್ತಿದೆ.

ನಾಯಕಿ ಶರಣ್ಯ ಅವರನ್ನು‌ ಅಭಿಷೇಕ್ ರೆಫರ್ ಮಾಡಿದರು. ಚಿತ್ರವನ್ನು ಮಲೆನಾಡು, ಕರಾವಳಿ ಭಾಗದಲ್ಲಿ  ಚಿತ್ರೀಕರಣ ಮಾಡಲಾಗಿದೆ. ಪ್ರೇಮಕ್ಕೆ ಸಾವಿಲ್ಲ‌‌. ವಯಸ್ಸಿನ ಮಿತಿ ಇಲ್ಲ‌ ಎನ್ನುವುದನ್ನು ಚಿತ್ರದಲ್ಲಿ ತೋರಿಸಲಾಗಿದೆ‌27 ದಿನಗಳಲ್ಲಿ ಚಿತ್ರೀಕರಣ ಮಾಡಲಾಗಿದೆ ಎಂದರು.

ನಟಿ ಶರಣ್ಯ ಶೆಟ್ಟಿ, ತನು,ಮನುವಿನ ಪ್ರೇಮಕಥೆ ಚಿತ್ರದಲ್ಲಿದೆ.ತಂದೆಗೆ ಡಾಕ್ಟರ್  ಆಗಬೇಕು  ಎನ್ನುವ ಆಸೆ ಇತ್ತು. ಆದರೆ ನಾನು ಇಂಜಿನಿಯರ್ ಮಾಡಿದೆ. ಚಿತ್ರದಲ್ಲಿ ವೈದ್ಯೆಯ ಪಾತ್ರ ಮಾಡಿದ್ದೇ‌ನೆ ಚಿತ್ರ ಎಲ್ಲರಿಗೂ ಇಷ್ಟವಾಗಲಿದೆ ಎಂದರು.

ನಟ ಅಭಿಷೇಕ್ ದಾಸ್, ಮುಗ್ದ ಹುಡುಗನ ಪಾತ್ರ,ಮರವಂತೆ ಬೀಚ್,  ನದಿಯಲ್ಲಿ ಈಜಿದ್ದೇನೆ. ಇಂಜಿನಿಯರ್ ಪಾತ್ರ ನನ್ನದು ಎಂದರು. ನಿರ್ಮಾಪಕಕ ರಾಧಾ ಮೋಹನ್  ಸಮಯ ನೋಡಿಕೊಂಡು ಚಿತ್ರ ಬಿಡುಗಡೆ ಮಾಡುವ ಉದ್ದೇಶವಿದೆ ಎಂದರೆ ಕಲಾವಿದರಾದ  ಗಿರೀಶ್ ಬೆಟ್ಟಪ್ಪ, ಬೆನಕ ನಂಜಪ್ಪ, ಜ್ಯೋತಿ ಮರೂರು ಚಿತ್ರದ ಬಗ್ಹೆ ಮಾಹಿತಿ  ಹಂಚಿಕೊಂಡರು. ಲವ್ ಪ್ರಾಣ್ ಮೆಹ್ತಾ ಚಿತ್ರಕ್ಕೆ ಸಂಗೀತ, ಪ್ರಮೋದ್ ಭಾರತೀಯ  ಛಾಯಾಗ್ರಹಣವಿದೆ.