
(ಸಂಜೆವಾಣಿ ಪ್ರತಿನಿಧಿಯಿಂದ)
ಬೆಂಗಳೂರು,ಆ,.೧೨:ಬಿಬಿಎಂಪಿ ಅಗ್ನಿ ಅವಘಡಕ್ಕೆ ಯಾರು ಕಾರu ಎಂಬುದನ್ನು ಈಗಲೇ ತೀರ್ಮಾನಕ್ಕೆ ಬರಲು ಸಾಧ್ಯವಿಲ್ಲ. ತನಿಖೆ ನಂತರ ಎಲ್ಲವೂ ಬಯಲಾಗಲಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಹೇಳಿದರು.
ಬೆಂಗಳೂರಿನ ಸದಾಶಿವನಗರದ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಕಾಂಗ್ರೆಸ್ ಪಕ್ಷದ ಬೆಂಕಿ ಆಕಸ್ಮಿಕವಲ್ಲ ಷಡ್ಯಂತ್ರ ಎಂದು ಟ್ವೀಟ್ ಮಾಡಿದ್ದಾರೆ ಅದನ್ನು ಗಮನಿಸಿದ್ದೇನೆ. ಯಾರೋ ಹುಡುಗರು ಟ್ವೀಟ್ ಮಾಡಿದ್ದಾರೆ ಅದನ್ನು ಅಳಿಸಿ ಹಾಕಿಸಿದ್ದೇನೆ. ತನಿಖೆಯಾಗುವವರೆಗೂ ಇದಕ್ಕೆ ಯಾರು ಕಾರಣ ಎಂಬುದನ್ನು ಹೇಳಲು ಆಗದು ಎಂದರು.
ಬೆಂಕಿ ಅವಘಡದಲ್ಲಿ ದಾಖಲೆಗಳಿಗೆ ಯಾವುದೇ ಹಾನಿಯಾಗಿಲ್ಲ ಕಚೇರಿಯನ್ನು ಬೇರೆ ಕಡೆಗೆ ಸ್ಥಳಾಂತರಿಸುವಂತೆ ಸೂಚಿಸಿದ್ದೇನೆ ಎಂದು ಅವರು ಹೇಳಿ ಈ ಹಿಂದೆಯಲ್ಲ ಬಿಬಿಎಂಪಿಯಲ್ಲಿ ಬೆಂಕಿ ಬಿದ್ದು ಕಡತಗಳು ನಾಶವಾಗಿದ್ದನ್ನು ನೋಡಿದ್ದೇನೆ.ಈಗಂತೂ ಯಾವುದೇ ಕಡತ ನಾಶವಾಗಿಲ್ಲ ಎಂದರು.
ಈ ಅವಘಡದ ಬಗ್ಗೆ ಬಿಬಿಎಂಪಿಯಿಂದ ಪೊಲೀಸ್‌ನಿಂದ ಹಾಗೂ ಇಂಧನ ಇಲಾಖೆಯಿಂದ ತನಿಖೆಗೆ ಆದೇಶಿಸಿದ್ದೇನೆ. ತನಿಖೆ ನಂತರ ಎಲ್ಲವೂ ಬಯಲಾಗಲಿದೆ ಎಂದರು.