ತನಿಖೆ ಗೆ ಆಗ್ರಹಿಸಿ ಮನವಿ


ಸಂಜೆವಾಣಿ ವಾರ್ತೆ
ಮೊಳಕಾಲ್ಮೂರು,ಜೂ.20: ಸ್ಥಳೀಯ ಪಟ್ಟಣ ಪಂಚಾಯಿತಿಯಲ್ಲಿ ಬಾರಿ ಬ್ರಷ್ಟಾಚಾರ ನಡೆದಿದೆ ಎಂದು ಸ್ಥಳೀಯ ಸಂಘಟನೆ ಗಳಾದ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಮತ್ತು ದಲಿತ ಸಂಘರ್ಷ ಸಮಿತಿ ಇಂದು ಪಟ್ಟಣದ ಪಟ್ಟಣ ಪಂಚಾಯಿತಿ ಎದುರು ಪ್ರತಿಭಟನೆ ನಡೆಸಿದವು
ಈ ಹಿಂದೆ 2019 ರಿಂದ 2023ರ ವರೆಗೆ ಪಟ್ಟಣ ಪಂಚಾಯಿತಿಯಲ್ಲಿ ಬ್ರಷ್ಟಾಚಾರ ನಡೆದಿದೆ ಎಂದು ತಿಳಿದು ಬಂದಿದೆ,  ಆದದರಿಂದ ಆಗಿನ ಪಟ್ಟಣ ಪಂಚಾಯಿತಿ ಅಧ್ಯಕ್ಷ ರಾದ ಲಕ್ಷ್ಮಣ್ ಮತ್ತು ಮುಖ್ಯಾಧಿಕಾರಿಯಾದ ಕಾಂತರಾಜು ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ತನಿಖೆ ಪ್ರಾರಂಭಿಸಬೇಕು ಎಂದು ಸಂಘಟನೆಗಳು  ಸರ್ಕಾರವನ್ನು ಓತ್ತಾಯಿಸಿದವು.
ಅವರ ಅವಧಿಯಲ್ಲಿ ಸುಮಾರು ಒಂಬತ್ತು ಕೋಟಿ ರೂಪಾಯಿ ಗಳಷ್ಟು ಅವ್ಯವಹಾರ ವಾಗಿದೆ ಎಂದು ಶಂಕಿಸಲಾಗಿದ್ದು ಕೂಡಲೇ ಇವರ ವಿರುದ್ಧ ತನಿಖೆ ನಡೆಸಬೇಕೆಂದು ಓತ್ತಾಯಿಸಿ ಈಗೀನ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಯಾದ ಶ್ರೀಮತಿ ಲೀಲಾವತಿ ಅವರ ಮೂಲಕ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಿದರು.
ಇವರ ಮನವಿ ಪತ್ರ ದಲ್ಲಿ ಇನ್ನು ಅನೇಕ ಹಕ್ಕೊತ್ತಾಯ ಗಳು ಇದ್ದವು.
ಈ ಸಂದರ್ಭದಲ್ಲಿ ರಾಜ್ಯ ರೈತ ಸಂಘದ ಉಪಾಧ್ಯಕ್ಷ ಬೇಡರಡ್ಡಿಹಳ್ಳಿ ಬಸವರಡ್ಡಿ, ತಾಲೂಕು ರೈತ ಸಂಘದ ಅಧ್ಯಕ್ಷ ಮರ್ಲಹಳ್ಳಿ ರವಿಕುಮಾರ್, ತಾಲೂಕು ದಲಿತ ಸಂಘರ್ಷ ಸಮಿತಿಯ ಅಧ್ಯಕ್ಷ ಕೆರೆ ಕೊಂಡಾಪುರ ಪರಮೇಶ್ವರಪ್ಪ, ರಮೇಶ್ ಶ್ರೀನಿವಾಸ, ಉಮೇಶ್ ಮಹೇಂದ್ರ, ನಾಗರಾಜ್ ಯಜ್ಜೇನಹಳ್ಳಿ, ಕನಕ ಶಿವಮೂರ್ತಿ, ಎಸ್. ಟಿ. ಚಂದ್ರಣ್ಣ,ಎಸ್.ಮಂಜುನಾಥ್, ಪಿ. ಟಿ. ನಿಂಗಣ್ಣ, ಈರಣ್ಣ, ನಾಗರಾಜ್, ಮಂಜಣ್ಣ, ದೊಡ್ಡ ಸೂರಯ್ಯ, ದೊಡ್ಡ ಪಾಪಯ್ಯ,ದಡ್ಡೇಯ್ಷ, ವೀರೇಶ್, ಬೆಲ್ಲದ ಮಲ್ಲಯ್ಯ, ಇನ್ನು ಮುಂತಾದವರಿದರು.