ತನಿಖೆಯಿಂದ ಸತ್ಯ ಹೊರಬರಲಿ!

ಮೈಸೂರು:ಜ:27: ಗಣರಾಜ್ಯೋತ್ಸವದಂದು ದೆಹಲಿಯಲ್ಲಿ ರೈತರ ಪ್ರತಿಭಟನೆಯ ವೇಳೆ ನಡೆದ ಹಿಂಸಾಚಾರ ವನ್ನು ಶಾಸಕ ಸಾ.ರಾ.ಮಹೇಶ್ ಖಂಡಿಸಿದರು.
ಮೈಸೂರಿನಲ್ಲಿಂದು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು ತಿಂಗಳುಗಳಿಂದ ಹೋರಾಟ ಮಾಡುತ್ತಿರುವ ಕೆಲವು ರೈತರು ನಿನ್ನೆ ತಮ್ಮ ವ್ಯಾಪ್ತಿಯನ್ನು ಮೀರಿದ್ದಾರೆ. ಇದು ಪೆÇಲೀಸರ ವೈಫಲ್ಯ ಅಥವಾ ರೈತರ ದುಡುಕು ನಿರ್ಧಾರ ಅಂತಲೂ ಹೇಳಬಹುದು. ನಿನ್ನೆಯ ಈ ಘಟನೆ ಆಗಬಾರದಿತ್ತು. ಪ್ರಧಾನಿ,ರಾಷ್ಟ್ರಪತಿ ಇರುವ ಜಾಗದಲ್ಲಿ ಪೆÇಲೀಸರು ಮತ್ತು ರೈತರು ಇಬ್ಬರಿಗೂ ನೋವಾಗಿದೆ. ಘಟನೆಗೆ ಯಾರೇ ಕಾರಣವಾಗಿದ್ದರೂ ಸರಿಯಲ್ಲ. ಹೋರಾಟದ ಸಂದರ್ಭದಲ್ಲೂ ಪ್ರತಿಭಟನಾಕಾರರು ನಮ್ಮ ಆಸ್ತಿ ನಮ್ಮ ಸರ್ಕಾರ ಅನ್ನೋದನ್ನು ಗಮನದಲ್ಲಿಟ್ಟುಕೊಳ್ಳಬೇಕು. ಪೆÇಲೀಸರು ಪ್ರತಿನಿತ್ಯ ನಮ್ಮ ಕೆಲಸವನ್ನು ಮಾಡೋರು, ರೈತರು ದೇಶದ ಬೆನ್ನೆಲುಬು.ಈ ಇಬ್ಬರಿಗೂ ನೋವಾಗಿದೆ. ಆದರೆ ಈ ಘಟನೆ ನಡೆದಿರೋದು ನಿಜಕ್ಕೂ ಖಂಡನೀಯ. ತನಿಖೆಯಿಂದ ಸತ್ಯ ಹೊರಬರಬೇಕು ಎಂದರು.
ಪಾಲಿಕೆ ಮೈತ್ರಿ ವಿಚಾರ ಕುರಿತು ಪ್ರತಿಕ್ರಿಯಿಸಿ ಪಾಲಿಕೆ ಮೈತ್ರಿ ವಿಚಾರದಲ್ಲಿ ತಟಸ್ಥವಾಗಿದ್ದೇವೆ. ಮೈತ್ರಿ ಬಗ್ಗೆ ಇನ್ನೂ ಯಾವುದೇ ಚರ್ಚೆಯಾಗಿಲ್ಲ. ಮೀಸಲಾತಿ ಪ್ರಕಟವಾಗುವವರೆಗೂ ನಾವು ಯಾವುದೇ ನಿರ್ಧಾರ ಕೈಗೊಳ್ಳುವುದಿಲ್ಲ. ನಗರ ಪಾಲಿಕೆ ಸದಸ್ಯರು, ಮಾಜಿ ಮೇಯರುಗಳು, ಕೆಲವು ಕಾಂಗ್ರೆಸ್ ನವರು ನಡೆದುಕೊಂಡ ರೀತಿಗಳನ್ನು ನಮ್ಮ ಗಮನಕ್ಕೆ ತಂದಿದ್ದಾರೆ. ನಗರದ ಇತರೆ ಕಾಂಗ್ರೆಸ್ ನಾಯಕರ ಜೊತೆ ನಮ್ಮ ಸಂಬಂಧ ಚೆನ್ನಾಗಿದೆ.
ಯಾರೋ ಇಬ್ಬರು ಮೂವರ ನಡವಳಿಕೆಯಿಂದ ಪಕ್ಷವನ್ನು ದೂರೋಕೆ ಸಾಧ್ಯವಿಲ್ಲ. ಆದರೆ ಮೀಸಲಾತಿ ಪ್ರಕಟ ನಂತರ ನಮ್ಮ ಸದಸ್ಯರ ತೀರ್ಮಾನದಂತೆ ನಡೆದುಕೊಳ್ಳುತ್ತೇವೆ. ಎರಡು ಪಕ್ಷಗಳು ರಾಜಕೀಯವಾಗಿ ನಮ್ಮ ವಿರೋಧಿಗಳೇ,ಹಾಗಾಗಿ ಸದ್ಯ ತಟಸ್ಥವಾಗಿ ಇರುತ್ತೇವೆ ಎನ್ನುವ ಮೂಲಕ ಮೈತ್ರಿ ಕುರಿತು ದ್ವಂದ್ವ ನಿಲುವು ವ್ಯಕ್ತಪಡಿಸಿದರು.