ತತ್ವ ಸಿದ್ಧಾಂತ ಮತ್ತು ಬೋಧನೆಗಳಿಂದ ಮಹಾ ತಪಸ್ವಿ ಬುದ್ಧರು ವಿಶ್ವಮಾನ್ಯರಾಗಿದ್ದಾರೆ : ಶಾಸಕ ಲಕ್ಷ್ಮಣ ಸವದಿ

ಅಥಣಿ : ಡಿ.3:ಮಹಾ ತಪಸ್ವಿ ಭಗವಾನ್ ಬುದ್ಧರು ಒಂದು ಧರ್ಮಕ್ಕೆ ಮಾತ್ರ ಸೀಮಿತವಾಗಿಲ್ಲ. ಅವರ ತತ್ವ ಸಿದ್ಧಾಂತಗಳು ಹಾಗೂ ಬೋಧನೆಗಳನ್ನು ಅವಲೋಕಿಸಿದಾಗ ಅವರು ವಿಶ್ವ ಮಾನವರ ಸಾಲಿನಲ್ಲಿ ನಿಲ್ಲುತ್ತಾರೆ. ಅದಕ್ಕೆ ಕಾರಣ ಭಗವಾನ್ ಬುದ್ಧರ ತತ್ವಗಳು ಹಾಗೂ ಪವಿತ್ರ ಚಿಂತನೆಗಳು. ಎಂದು ಮಾಜಿ ಉಪಮುಖ್ಯಮಂತ್ರಿ ಹಾಗೂ ಶಾಸಕ ಲಕ್ಷ್ಮಣ ಸವದಿ ಹೇಳಿದರು.
ಅವರು ಅಥಣಿ ಪಟ್ಟಣದ ಶಂಕರ ನಗರದಲ್ಲಿರುವ ಬುದ್ಧ ವಿಹಾರಕ್ಕೆ ಭೇಟಿ ನೀಡಿ ಸನ್ಮಾನ ಸ್ವೀಕರಿಸಿ ಮಾತನಾಡಿದರು. ಗೌತಮ ಬುದ್ಧರ ಆದರ್ಶಮಯ ಜೀವನವನ್ನು ನಾವೆಲ್ಲರೂ ದೈವ ಸ್ವರೂಪದಿಂದ ನೋಡುತ್ತೇವೆ. ಅವರು ಬೋಧಿಸಿದ ತತ್ವ ಸಿದ್ಧಾಂತಗಳನ್ನು
ಮೈಗೂಡಿಸಿಕೊಂಡಾಗ ನಮ್ಮ ಬದುಕು ಕೂಡ ಸುಂದರವಾಗುತ್ತದೆ ಎಂದ ಅವರು, ಪಟ್ಟಣದಲ್ಲಿ ಸ್ಥಾಪಿಸಲಾಗಿರುವ ಈ ಬುದ್ಧ ವಿಹಾರವನ್ನು ಸರಳ ಸಮಾರಂಭ ಆಯೋಜಿಸುವ ಮೂಲಕ ಉದ್ಘಾಟನೆ ಕಾರ್ಯಕ್ರಮವನ್ನು ನೆರವೇರಿಸೋಣ. ಮುಂಬರುವ ದಿನಗಳಲ್ಲಿ ನಾನು ಶಾಸಕರ ಪ್ರದೇಶಾಭಿವೃದ್ಧಿ ಯೋಜನೆಯಡಿ 25 ಲಕ್ಷ ರೂ ಅನುದಾನವನ್ನು ಒದಗಿಸುತ್ತೇನೆ. ಆ ಅನುದಾನದಿಂದ ಇಲ್ಲಿ ಧ್ಯಾನ ಮಂದಿರ ಮತ್ತು ಗ್ರಂಥಾಲಯ ಸ್ಥಾಪ????ಯ ಭೂಮಿ ಪೂಜೆಗೆ ಸಚಿವರನ್ನು ಕರೆಯಿಸಿ ಅದ್ದೂರಿ ಕಾರ್ಯಕ್ರಮ ನೆರವೇರಿಸೋಣ ಎಂದು ಹೇಳಿದರು.
ಈ ಸಂದರ್ಭದಲ್ಲಿ ಅಥಣಿ ಬ್ಲಾಕ ಕಾಂಗ್ರೆಸ್ ಅಧ್ಯಕ್ಷ ಸಿದ್ದಾರ್ಥ ಸಿಂಗೆ, ಕಾಂಗ್ರೆಸ್ ಮುಖಂಡ ಗಜಾನನ ಮoಗಸೂಳಿ, ಮಾತನಾಡಿದರು,
ಈ ವೇಳೆ ಪುರಸಭೆ ಮಾಜಿ ಅಧ್ಯಕ್ಷ ಹಾಗೂ ಹಾಲಿ ಸದಸ್ಯ ರಾವಸಾಬ ಐಹೊಳೆ. ಪುರಸಭೆಯ ಸದಸ್ಯರಾದ ಕಲ್ಲೇಶ ಮಡ್ಡಿ, ರಾಜು ಗುಡೊಡಗಿ
ಬುದ್ಧ ವಿಹಾರ ಕಮಿಟಿಯ ಅಧ್ಯಕ್ಷ ಎಸ್ ಬಿ ದೊಡ್ಡಮನಿ, ಆರ್ ಡಿ ದೊಡ್ಡಮನಿ, ಪರಶುರಾಮ ಚುಬಚಿ, ಬಿ ಕೆ ದೊಡ್ಡಮನಿ, ಡಿ ಆರ್ ನಿಡೋಣಿ, ಟಿ ಎಲ್ ಕಾಂಬಳೆ, ಜೆ ವಿ ದರೂರ, ಟಿ ಎಲ್ ಸೂರ್ಯವಂಶಿ, ಸಂಜು ಕಾಂಬಳೆ, ಶ್ರೀಮತಿ ಆರ್ ಬಿ ಘಟಕಾಂಬಳೆ, ಎಸ್ ಕೆ ನಿಡೋಣಿ, ಎಸ್ ಬಿ ಕಾಂಬಳೆ, ಪುರಸಭೆ ಸದಸ್ಯರು ಹಾಗೂ ಬುದ್ದಿ ಯಾರ್ ಕಮಿಟಿಯ ಸದಸ್ಯರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ಬುದ್ಧ ವಿಹಾರ್ ಕಮಿಟಿ ಕಾರ್ಯದರ್ಶಿ ಆರ್ ಡಿ ದೊಡ್ಡಮನಿ ಸ್ವಾಗತಿಸಿದರು, ಶಿವಾನಂದ ಮೇಲ್ಗಡೆ, ಕಾರ್ಯಕ್ರಮ ನಿರೂಪಿಸಿದರು, ಪರಶುರಾಮ ಚುಬಚಿ ವಂದಿಸಿದರು.