ತತ್ವಶಾಸ್ತ್ರದ ಜ್ಞಾನದಿಂದ ಮೇರು ವ್ಯಕ್ತಿತ್ವ ನಿರ್ಮಾಣ

ಕಲಬುರಗಿ :ನ.21: ಸತ್ಯ, ಶಾಶ್ವತವಾದ ವಸ್ತುವಿನ ಅಸ್ಥಿತ್ವ ಅರಿತು ನೈಜ ಆಚರಣೆಯ ಬಗ್ಗೆ ತಿಳಿಸಿಕೊಡುವ ತತ್ವಶಾಸ್ತ್ರ ಎಲ್ಲಾ ಶಾಸ್ತ್ರಗಳಿಗೆ ಮೂಲವಾಗಿದೆ. ಇದರ ಜ್ಞಾನವನ್ನು ಅರಿತುಕೊಂಡು ಆಚರಿಸಿದರೆ ಮೇರು ವ್ಯಕಿತ್ವ ನಿರ್ಮಾಣವಾಗಲು ಸಾಧ್ಯವಿದೆ ಎಂದು ಉಪನ್ಯಾಸಕ, ಚಿಂತಕ ಎಚ್.ಬಿ.ಪಾಟೀಲ ಅಭಿಪ್ರಾಯಪಟ್ಟರು.
ನಗರದ ಆಳಂದ ರಸ್ತೆಯ ಶಿವನಗರದಲ್ಲಿರುವ ‘ಮಲ್ಲಿನಾಥ ಮಹಾರಾಜ ಟ್ಯೂಟೋರಿಯಲ್ಸ್’ನಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಭಾನುವಾರ ಹಮ್ಮಿಕೊಳ್ಳಲಾಗಿದ್ದ ‘ವಿಶ್ವ ತತ್ವಶಾಸ್ತ್ರ ದಿನಾಚರಣೆ’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಯುನೆಸ್ಕೋ 2002ರಲ್ಲಿ ಈ ದಿನವನ್ನು ಘೋಷಿಸಿ ಆಚರಿಸುವಂತೆ ತಿಳಿಸಿದೆ. ತತ್ವಶಾಸ್ತ್ರವು ಯಾವುದೇ ವಿಷಯ, ಸಂಗತಿಗಳನ್ನು ವೈಚಾರಿಕ ನೆಲೆಗಟ್ಟಿನ ಮೇಲೆ ನಿರ್ಣಯ ಕೈಗೊಳ್ಳುತ್ತದೆ. ಅದಕ್ಕಾಗಿ ತತ್ವಶಾಸ್ತ್ರವನ್ನು ಸಿದ್ದಾಂತವೆಂದು ಕರೆಯುತ್ತಾರೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ದೇವೇಂದ್ರಪ್ಪ ಗಣಮುಖಿ, ರೇಣುಕಾಚಾರ್ಯ ಸ್ಥಾವರಮಠ, ವೀರೇಶ ಬೋಳಶೆಟ್ಟಿ ನರೋಣಾ, ವಿನೋದಕುಮಾರ ಎಸ್.ಮಾಳಾ, ಓಂಕಾರ ಗೌಳಿ ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.