ತತ್ವಜ್ಞಾನಿಗಳ ಮಾರ್ಗೋಪಾಯ ನಮಗೆ ದಾರಿ ದೀಪ


ಸಂಜೆವಾಣಿ ವಾರ್ತೆ
ಸಿರುಗುಪ್ಪ, ಸೆ.10: ನಗರದ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಜಿಲ್ಲಾ ಪಂಚಾಯತ, ತಾಲೂಕು ಪಂಚಾಯತ್, ತಾಲೂಕು ಆಡಳಿತ, ತಾಲೂಕು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಸಹಯೋಗದೊಂದಿಗೆ ಬ್ರಹ್ಮ ಶ್ರೀ ನಾರಾಯಣ ಗುರು ಜಯಂತ್ಯೋತ್ಸವ ಅಂಗವಾಗಿ ಶ್ರೀ ನಾರಾಯಣ ಗುರುಗಳ ಭಾವಚಿತ್ರಿಕ್ಕೆ ಶಾಸಕ ಎಂ.ಎಸ್.ಸೋಮಲಿಂಗಪ್ಪ ಪುಷ್ಪಾರ್ಚನೆ ನಡೆಸಿದರು.
ನಂತರ ಮಾತನಾಡಿದ ಅವರು ನಾರಾಯಣ ಗುರುಗಳು ಚಿಕ್ಕವಯಸ್ಸಿನಲ್ಲೇ ತತ್ವಜ್ಞಾನವನ್ನು ಪಡೆದುಕೊಂಡಿದ್ದರು, ಶಿವ ದೇವಾಲಯ ಕಟ್ಟಿ ಹಿಂದುಳಿದ ವರ್ಗಗಳಿಗೆ ಮಾರ್ಗದರ್ಶನದೊಂದಿಗೆ ಶಿವ ದಾರ್ಶನಿಕವನ್ನು ಸಾರ್ವಜನಿಕರಿಗೆ ತತ್ವದ ಮೂಲಕ ತೋರಿಸಿ ಕೊಟ್ಟಿದ್ದಾರೆ. ಜ್ಞಾನಿಗಳು, ಶರಣರ, ತತ್ವ ಜ್ಞಾನಿಗಳ ಜಯಂತಿಯನ್ನು ಆಚರಿಸುವುದುರಿಂದ ಅವರ ಆದರ್ಶಗಳನ್ನು, ತತ್ವಜ್ಞಾನದ ಮಾರ್ಗೋಪಾಯಗಳು ನಮಗೆ ದಾರಿ ದೀಪವಾಗಿವೆ, ಅಂದಿನ ಜ್ಞಾನ ಇಂದಿಗೂ ಪ್ರಸ್ತುತವಾಗಿದೆ ಎಂದು ಹೇಳಿದರು
ರಾಮಯ್ಯ ಮಹಿಳಾ ಪದವಿ ಕಾಲೇಜನ ಪ್ರಾಂಶುಪಾಲ ಭೀಮಲಿಂಗಪ್ಪ ವಿಶೇಷ ಉಪನ್ಯಾಸ ನೀಡಿದರು.
ತಹಶೀಲ್ದಾರ ಎನ್.ಆರ್.ಮಂಜುನಾಥಸ್ವಾಮಿ, ಇ.ಒ.ಮಡಗಿನಬಸಪ್ಪ, ತಾಲೂಕು ಆರೋಗ್ಯ ಅಧಿಕಾರಿ ಡಾ.ಈರಣ್ಣ, ಸಮಾಜ ಕಲ್ಯಾಣ ಪ.ಜಾ. ನಿರ್ದೇಶಕಿ ರಾಜೇಶ್ವರಿ, ತಾಲೂಕು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ನಿರ್ದೇಶಕ ಎ.ಗಾದಿಲಿಂಗಪ್ಪ,  ನಗರಸಭೆ ಸದಸ್ಯ ಮೇಕೆಲಿ ವೀರೇಶ, ಮುಖಂಡರಾದ ರಾಮಾಂಜನಿ, ಎಸ್.ಮಲ್ಲಿಕಾರ್ಜುನ, ತೆಕ್ಕಲಕೋಟೆ ಸಿದ್ದಪ್ಪ ಇದ್ದರು.

Attachments area