ತತ್ವಜ್ಞಾನಿಗಳು ಆವಿಷ್ಕಾರ ಮಾಡುತ್ತಾರೆ

ಚಿತ್ರದುರ್ಗ.ಜೂ.೨೦: ನಗರದ ಎಸ್.ಜೆ.ಎಂ. ತಾಂತ್ರಿಕ ಮಹಾವಿದ್ಯಾಲಯದಲ್ಲಿ ಸ್ಫೂರ್ತಿ-2ಏ22 ಕ್ರೀಡಾ ಮತ್ತು ಸಾಂಸ್ಕೃತಿಕ ಉತ್ಸವದ ಉದ್ಘಾಟನಾ ಸಮಾರಂಭದ ದಿವ್ಯಸಾನಿಧ್ಯ ವಹಿಸಿ ಆಶೀರ್ವಚನ ನೀಡಿದ ಎಸ್.ಜೆ.ಎಂ.ವಿದ್ಯಾಪೀಠದ ಅಧ್ಯಕ್ಷರು ಹಾಗೂ ಎಸ್.ಜೆ.ಎಂ.ವಿಶ್ವವಿದ್ಯಾಲಯದ ಕುಲಾಧಿಪತಿಗಳಾದ ಪರಮಪೂಜ್ಯ ಡಾ.ಶ್ರೀ ಶಿವಮೂರ್ತಿ ಮುರುಘಾ ಶರಣರು, ನಾವು  ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಬದುಕುತ್ತಿದ್ದೇವೆ. ಆವಿಷ್ಕಾರಗಳು ಕೇವಲ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರಕ್ಕೆ ಸೀಮಿತವಾಗದೇ ಆದ್ಯಾತ್ಮಿಕ, ಸಾಮಾಜಿಕ, ವೈದ್ಯಕೀಯ ಕ್ಷೇತ್ರ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲು ಆಗಿವೆ. ತತ್ವಜ್ಞಾನಿಗಳು ಆವಿಷ್ಕಾರಗಳನ್ನು ಮಾಡುತ್ತಾರೆ. ಬಸವಣ್ಣ, ಬುದ್ಧ, ಡಾ.ಅಂಬೇಡ್ಕರ್, ಗಾಂಧೀಜಿಯವರು ಸಹ ಆವಿಷ್ಕಾರಗಳನ್ನು ಮಾಡಿದ್ದಾರೆ. ನಮ್ಮ ನೆಚ್ಚಿನ ಹವ್ಯಾಸವೆಂದರೆ ಸಂಶೋಧನೆ. ಆವಿಷ್ಕಾರ ಪರಿವರ್ತನೆಗೆ ಕಾರಣವಾಗುತ್ತದೆ. ಹಸಿರು ಕ್ರಾಂತಿ, ಅಕ್ಷರ ಕ್ರಾಂತಿ, ಸಾಮಾಜಿಕ ಕ್ರಾಂತಿ, ಶ್ವೇತ ಕ್ರಾಂತಿ, ತಂತ್ರಜ್ಞಾನ ಕ್ರಾಂತಿಗಳು ನಡೆಯುತ್ತಲೇ ಇರುತ್ತವೆ, ಅವುಗಳ ಮೌಲ್ಯಮಾಪನ ಎಂದಿಗೂ ಅಂತ್ಯವಾಗುವುದಿಲ್ಲ ಅದು ಸದಾ ನಿರಂತರ. ಇಂದಿನ ಭಾರತೀಯ ಸಮಾಜಕ್ಕೆ ಸಮರ್ಪಣಾ ಮನೋಭಾವದಿಂದ ಕೂಡಿದ ಮಾನಸಿಕವಾಗಿ, ದೈಹಿಕವಾಗಿ, ಬೌದ್ಧಿಕವಾಗಿ ಸಮಯೋಚಿತವಾದ ಆಲೋಚನೆಗಳುಳ್ಳ ಯುವಸಮೂಹದ ಅವಶ್ಯಕತೆಯಿದೆ. ನೀವು ಈ ನಿಟ್ಟಿನಲ್ಲಿ ಸಮರ್ಪಣಾ ಮನೋಭಾವದಿಂದ ಮಾನಸಿಕವಾಗಿ, ದೈಹಿಕವಾಗಿ, ಬೌದ್ಧಿಕವಾಗಿ ಸಮಯೋಚಿತವಾದ ಆಲೋಚನೆಗಳೊಂದಿಗೆ ದೃಢವಾಗಿ ನಿಮ್ಮ ಭವಿಷ್ಯ ರೂಪಿಸಿಕೊಳ್ಳಬೇಕು. ಸ್ಫೂರ್ತಿ ಎಂದರೆ ಸುಗಮವಾಗಿ ಸಾಗುವ ವ್ಯಕ್ತಿತ್ವದೊಂದಿಗೆ, ಶುದ್ಧ, ಆಶಾವಾದಿ, ಸಂಘಟನಾ ಸಾರ್ಮರ್ಥ್ಯ, ಕ್ರಮಬದ್ಧ, ಪ್ರತಿಭೆ, ಬುದ್ಧಿವಂತಿಕೆ ಹಾಗೂ ಉನ್ನತವಾದ ಚಿಂತನೆಗಳನ್ನು ಮೈಗೂಡಿಸಿಕೊಳ್ಳುವ ನಿಟ್ಟಿನಲ್ಲಿ ನಿಮಗೆ ಸ್ಫೂರ್ತಿ ಉತ್ಸವವು ಸಹಕಾರಿಯಾಗಲಿ ಎಂದು ನುಡಿದರು.ರಾಜ್ಯ ಖನಿಜ ನಿಗಮದ ಅಧ್ಯಕ್ಷರು ಹಾಗೂ ಎಸ್.ಜೆ.ಎಂ.ವಿದ್ಯಾಪೀಠದ ಆಡಳಿತಮಂಡಳಿ ನಿರ್ದೇಶಕರಾದ ಶ್ರೀ ಎಸ್ ಲಿಂಗಮೂರ್ತಿ ಮಾತನಾಡಿ, ಕರೋನದ 2 ವರ್ಷಗಳ ಕಷ್ಟಕಾಲದಲ್ಲಿ ನಾವೆಲ್ಲ ಆತಂಕದಲ್ಲಿ ಜೀವನ ಕಳೆದವು. ನಮ್ಮ ಆತ್ಮೀಯರನ್ನು ಕಳೆದುಕೊಂಡೆವು. ಪೂಜ್ಯರ ಹಾಗೂ ದೇವರ ಆಶೀರ್ವಾದದಿಂದ ಕರೋನ ಸಂಕಷ್ಟದಿAದ ನಾವು ಹೊರ ಬಂದಿದ್ದೇವೆ. ಎರಡು ವರ್ಷಗಳ ನಂತರ ನೀವು ಬಹು ಉತ್ಸಾಹದಿಂದ ಈ ಕಾರ್ಯಕ್ರಮವನ್ನು ಆಯೋಜಿಸಿರುತ್ತೀರಿ. ಎಸ್.ಜೆ.ಎಂ.ಐ.ಟಿ ಕಳೆದ 42 ವರ್ಷಗಳಿಂದ ವಿದ್ಯಾರ್ಥಿಗಳಿಗೆ ಉನ್ನತವಾದ ವ್ಯಾಸಂಗವನ್ನು ನೀಡುತ್ತಾ ಬಂದಿದೆ. ಶ್ರೀಗಳು ನಮ್ಮ ಜಿಲ್ಲೆಯಲ್ಲಿ ನೂತನ ವಿಶ್ವವಿದ್ಯಾಲಯವನ್ನು ಸ್ಥಾಪಿಸಿದ್ದಾರೆ. ಇದು ನಮ್ಮ ಮಧ್ಯ ಕರ್ನಾಟಕಕ್ಕೆ ಅನುಕೂಲವಾಗಲಿದೆ. ಮುರುಘಾಮಠವು ಕರ್ನಾಟಕದಲ್ಲಿ ವೈಚಾರಿಕಾ ಕ್ರಾಂತಿಯನ್ನು ಮಾಡುತ್ತಾ ಬಂದಿದ್ದು, ಜಾತ್ಯಾತೀತ ನಿಲುವು ನಮ್ಮ ಮುರುಘಾಮಠದ್ದಾಗಿದೆ. ವಿದ್ಯಾರ್ಥಿಗಳು ಕ್ರೀಡಾ ಮನೋಭಾವ ಬೆಳಸಿಕೊಳ್ಳಬೇಕು. ಕ್ರೀಡಾಮನೋಭಾವದ ವ್ಯಕ್ತಿ ಆರೋಗ್ಯಕರವಾದ ವಾತಾವರಣವನ್ನು ಸೃಷ್ಟಿ ಮಾಡುತ್ತಾನೆ ಎಂದು ನುಡಿದರು.ಪ್ರಾಂಶುಪಾಲರಾದ ಡಾ.ಭರತ್ ಪಿ.ಬಿ. ಮಾತನಾಡಿ, ಕರೋನಾದ ನಂತರದಲ್ಲಿ ನಾವು ಈ ಕಾರ್ಯಕ್ರಮವನ್ನು ಆಯೋಜಿಸುತ್ತಿರುವುದು ಸಂತಸದ ವಿಚಾರ ಹಾಗೂ ಪೂಜ್ಯರ ಆಶೀರ್ವಾದವೇ ಇದಕ್ಕೆ ಮುಖ್ಯ ಕಾರಣ. ಸ್ಪರ್ಧಾತ್ಮಕ ಜಗತ್ತಿಗೆ ಪೂರಕವಾಗಿ ನಾವು ಈ ವರ್ಷದಿಂದ ನೂತನ ಇಂಜಿನಿಯರಿAಗ್ ಕೋರ್ಸುಗಳಾದ ಆರ್ಟಿಪಿಷಿಯಲ್ ಇಂಟೆಲಿಜೆನ್ಸ್ & ಮೆಷಿನ್ ಲಾಂಗ್ವೇಜ್, ಅಗ್ರಿಕಲ್ಚರಲ್ ಇಂಜಿನಿಯರಿAಗ್, ರೊಬೋಟಿಕ್ಸ್ & ಅಟೋಮೇಷನ್, ಕನ್ಸಸ್ಟಕ್ಷನ್ ಅಟೋಮೇಷನ್, ಅಟೋಮೊಬೈಲ್ ಇಂಜಿನಿಯರಿAಗ್ ಪದವಿಗಳನ್ನು ಪ್ರಾರಂಭಿಸುತ್ತಿದ್ದೇವೆ. ಎಸ್‌ಜೆಎಂ ವಿಶ್ವವಿದ್ಯಾಲಯವು ಪೂಜ್ಯರ ಕನಸು. ಶ್ರೀಗಳ ಶ್ರಮದಿಂದ ಇಂದು ವಿಶ್ವವಿದ್ಯಾಲಯ ಸ್ಥಾಪಿತವಾಗಿದೆ. ಶಿಕ್ಷಣವೆನ್ನುವುದು ಕೇವಲ ಅಂಕಪಟ್ಟಿಗಳಿಗೆ ಸೀಮಿತವಾಗದೇ ತಂತ್ರಜ್ಞಾನ, ಕೌಶಲ್ಯಭರಿತ ಶಿಕ್ಷಣವನ್ನು ನಮ್ಮ ವಿಶ್ವವಿದ್ಯಾಲಯದ ಮೂಲಕ ನೀಡುವುದು ಶ್ರೀಗಳ ಉದ್ದೇಶವಾಗಿದೆ. ಶ್ರೀಗಳ ಆಶಯಗಳನ್ನು ಈಡೇರಿಸುವ ದಿಸೆಯಲ್ಲಿ ನಾವುಗಳು ಶ್ರೀಗಳ ಸ್ಫೂರ್ತಿವಾಣಿಗಳೊಂದಿಗೆ ಮುನ್ನೆಡೆಯುತ್ತೇವೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಎಸ್.ಜೆ.ಎಂ.ವಿದ್ಯಾಪೀಠದ ಜಂಟಿಕಾರ್ಯದರ್ಶಿಗಳಾದ ಶ್ರೀ ಎ ಜೆ ಪರಮಶಿವಯ್ಯ, ಎಸ್‌ಜೆಎಂ ವಿಶ್ವವಿದ್ಯಾಲಯದ ಕುಲಸಚಿವರಾದ ಡಾ.ಜಿತೇಂದರ್‌ಸಿAಗ್ ಶೆಖಾವತ್, ಎಸ್.ಜೆ.ಎಂ.ವಿದ್ಯಾಪೀಠದ ಆಡಳಿತಮಂಡಳಿ ನಿರ್ದೇಶಕರಾದ ಶ್ರೀ ಪಟೇಲ್ ಎಸ್.ಶಿವಕುಮಾರ್, ಸ್ಫೂರ್ತಿ-2ಏ22ರ ಮುಖ್ಯ ಸಂಚಾಲಕರಾದ ಡಾ.ಹೆಚ್.ಜೆ.ಲೋಕೇಶ್ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ರೈನ್‌ಬೋ-2022 ಕಾಲೇಜ್ ಮ್ಯಾಗಜೀನ್‌ನ್ನು ಗಣ್ಯರು ಬಿಡುಗಡೆ ಮಾಡಿದರು.

ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಪರೀಕ್ಷೆಯಲ್ಲಿ 8ನೇ ರ‍್ಯಾಂಕ್ ಪಡೆದ ಕು.ಪಿ.ನಯನರನ್ನು ಶ್ರೀಗಳು ಸನ್ಮಾನಿಸಿದರು.

ಕಾರ್ಯಕ್ರಮದಲ್ಲಿ ಪ್ರೊ.ವಿಜಯಲಕ್ಷಿö್ಮ ಎ ಹಿರೇಮಠ್ ಪ್ರಾರ್ಥಿಸಿ, ಪ್ರೊ.ಪೋರಾಳ್ ನಾಗರಾಜ್ ಸ್ವಾಗತಿಸಿ, ಭೂಮಿಕಾ ನಿರೂಪಿಸಿ ಪ್ರೊ.ಶ್ರೀಧರ್ ಎಸ್ ಎನ್ ವಂದಿಸಿದರು.

ಅಹೋಬಲ ಟಿವಿಎಸ್ ಶೋರೂಂನ ನೂತನ ವಾಹನವನ್ನು ಗಣ್ಯರು ಅನಾವರಣಗೊಳಿಸಿದರು.

Attachments area