ತತ್ವಜ್ಞಾನದ ಕುರಿತು ಸಂಶೋಧನೆ ಅಗತ್ಯ:ಡಾ.ಜೆ.ಎಸ್.ಪಾಟೀಲ್

ಕಲಬುರಗಿ:ಮಾ.03: ಜಗತ್ತಿನಲ್ಲಿಯೇ ಭಾರತದಲ್ಲಿನ ಜ್ಞಾನ ಪ್ರಪಂಚ ಅದ್ಭುತವಾಗಿದೆ. ತತ್ವಜ್ಞಾನ ಕುರಿತು ಉನ್ನತ ಮಟ್ಟದಲ್ಲಿ ಸಂಶೋಧನೆಯಾಗಬೇಕಿದೆ ಎಂದು ರಾಜ್ಯ ಕಾನೂನು ವಿಶ್ವವಿದ್ಯಾಲಯದ ವಿಶ್ರಾಂತ ಉಪಕುಲಪತಿ ಡಾ.ಜೆ.ಎಸ್.ಪಾಟೀಲ್ ಅಭಿಪ್ರಾಯ ವ್ಯಕ್ತಪಡಿಸಿದರು.
ನಗರದ ಕನ್ನಡ ಭವನದಲ್ಲಿ ಶ್ರೀವಿಜಯ ಪ್ರಕಾಶನ ಭಾನುವಾರ ಆಯೋಜಿಸಿದ್ದ ಹಿರಿಯ ಪತ್ರಕರ್ತ, ಸಾಹಿತಿ ಡಾ. ಶ್ರೀನಿವಾಸ ಸಿರನೂರಕರ್ ರಚಿಸಿದ ಯಾಜ್ಞವಲ್ಕ್ಯ ಸ್ಮತಿ ಅಂದು-ಇಂದು-ಎಂದೆಂದೂ ಕೃತಿ ಬಿಡುಗಡೆಗೊಳಿಸಿ ಮಾತನಾಡಿದ ಅವರು,ಜ್ಞಾನದ ಮುಖೇನ ಭಾರತ ಜಗತ್ತಿನ ದೊಡ್ಡಣ್ಣನಾಗಿ ಹೊರಹೊಮ್ಮುತ್ತಿರುವ ಪ್ರಸ್ತುತ ಸಂದರ್ಭದಲ್ಲಿ ಪತ್ರಕರ್ತ ಸಿರನೂರಕರ್ ಅವರು ರಚಿಸಿದ ಈ ಕೃತಿ ಅದ್ಭುತ ಕೊಡುಗೆ ಕೊಡಬಲ್ಲದು ಎಂದರು.
ಭಾರತೀಯ ನ್ಯಾಯಶಾಸ್ತçದ ಮೂಲ ಗ್ರಂಥÀ ಮಿತಾಕ್ಷರವಾಗಿದೆ. ವಿಜ್ಞಾನೇಶ್ವರರ ಮಿತಾಕ್ಷರ ಗ್ರಂಥವು ಯಾಜ್ಞ ವಲ್ಕರ ಶ್ಮೃತಿಯನ್ನಾಧರಿಸಿದೆ. ಹೀಗಾಗಿ ನ್ಯಾಯ ಶಾಸ್ತçಕ್ಕೆ ಯಾಜ್ಞವಲ್ಕ್ಯ ರ ಕೊಡುಗೆ ಅನುಪಮವಾಗಿದೆ. ಬ್ರಿಟಿಷರು ರಚಿಸಿದ ಕಾನೂನು ಶಾಸ್ತ್ರದ ಲ್ಲಿಯಾಜ್ಞವಲ್ಕರ ಹಾಗೂ ವಿಜ್ಞಾನೇಶ್ವರರು ಹೇಳಿದ್ದನ್ನೆ ಇದೆ. ಬ್ರಿಟಿಷರು ಬರುವ ಮುನ್ನ ದೇಶದಲ್ಲಿ ನ್ಯಾಯದಾನ ಪದ್ಧತಿ ಎಂದು ಕರೆಯಲಾಗುತ್ತಿತ್ತು. ಅಂದು ಪ್ರಾಯಶ್ಚಿತಕ್ಕೆ ಮಹತ್ವ ನೀಡಲಾಗುತ್ತಿತ್ತು. ಸರ್ವರಿಗೂ ಸಮಾನ ನ್ಯಾಯಯಿತ್ತು ಇಂದು ಕಾನೂನು ಉಲ್ಲಂಘಿಸಿದರೆ ದಂಡ ಎಂದು ಹೆದರಿಸುವ ಪ್ರವೃತ್ತಿ ಬೆಳೆಯುತ್ತಿದೆ. ರಾಜನ ಆಡಳಿತದಲ್ಲಿ ನ್ಯಾಯದಾನ ಪದ್ಧತಿ ಇತ್ತು. ರಾಜನಾದರೂ ಅವನಿಗೂ ರಾಜಧರ್ಮ ಎಂಬ ಕಟ್ಟುಪಾಡಿತ್ತು. ರಾಜಧರ್ಮ ಪರಿಪಾಲನೆಯನ್ನು ಶ್ರೀರಾಮನಿಂದ ಕಲಿಯಬೇಕು ಎಂದರು.
ಪ್ರಾಚೀನ ಭಾರತ ನ್ಯಾಯ ಶಾಸ್ತವು ಪ್ರಪಂಚಕ್ಕೆ ಮಾದರಿಯಾಗಿದೆ. ಮಾನವ ಇಂದು ಕೃತಕ ಬುದ್ದಿ ಮತ್ತೆಯಾಗುತ್ತಿದ್ದಾನೆ. ಮಾನವನಲ್ಲಿ ಅಪಾರ ಜ್ಞಾನವಿದ್ದರೂ ಅದನ್ನು ಸಮರ್ಪಕವಾಗಿ ಬಳಸಿಕೊಳ್ಳುತ್ತಿಲ್ಲ ಎಂದು ಅವರು ಕಳವಳ ವ್ಯಕ್ತಪಡಿಸಿದರು.
ಕೇಂದ್ರೀಯ ವಿಶ್ವವಿದ್ಯಾಲಯ ಭೌತಶಾಸ್ತ್ರ ಪ್ರಾಧ್ಯಾಪಕ ಡಾ.ರಾಜೀವ ಜೋಶಿ ಕೃತಿ ಕುರಿತು ಮಾತನಾಡಿ, ಯಾಜ್ಞವಲ್ಕ್ಯ ರ ವಿಜ್ಞಾನ ಕಾಳಜಿಯನ್ನು ಲೇಖಕ ಡಾ. ಶ್ರೀನಿವಾಸ ಸಿರನೂರಕರ ತಿಳಿಸಿಕೊಡುವ ಪ್ರಾಮಾಣಿಕ ಪ್ರಯತ್ನ ಮಾಡಿದ್ದಾರೆ. ಯಾಜ್ಞವಲ್ಕ್ಯರು ಕೇವಲ ಯೋಗಿಗಳಲ್ಲ ಶ್ರೇಷ್ಠ ವಿಜ್ಞಾನಿಗಳಾಗಿದ್ದರು ಎಂದು ಹೇಳಿದರು.
ಪಂ.ಗೋಪಾಲಾಚಾರ್ಯ ಅಕಮಂಚಿ, ಕೃತಿಯ ಲೇಖಕ ಹಿರಿಯ ಪತ್ರಕರ್ತ ಶ್ರೀನಿವಾಸ ಸಿರನೂರಕರ್, ನೂತನ ವಿದ್ಯಾಲಯ ಸಂಸ್ಥೆ ಅಧ್ಯಕ್ಷ ಡ.ಗೌತಮ ಜಾಗಿರದಾರ, ಹಿರಿಯ ಸಾಹಿತಿ ಡಾ. ಸ್ವಾಮಿರಾವ ಕುಲಕರ್ಣಿ, ನಾರಾಯಣರಾವ ಜವಳಿ, ಡಾ.ಸುರೇಶ ಹೇರೂರ, ಡಾ.ಕೃಷ್ಣ ಕಾಕಲವಾರ, ನಾರಾಯಣ ಕುಲಕರ್ಣಿ, ರಂಗಾಯಣದ ಮಾಜಿ ನಿರ್ದೇಶಕ ಪ್ರಭಾಕರ ಜೋಶಿ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ನ ಅಧ್ಯಕ್ಷ ವಿಜಯಕುಮಾರ ತೇಗಲತಿಪ್ಪಿ, ಕಸಾಪ ಮಾಜಿ ಅಧ್ಯಕ್ಷ ವೀರಭದ್ರ ಸಿಂಪಿ,ಪ್ರೊ. ಪರಿಮಳಾ ಅಂಬೇಕರ್, ಶಕುಂತಲಾ ಜೆ.ಎಸ್. ಪಾಟೀಲ್, ಸಂಧ್ಯಾ ಹೊನಗುಂಟಿಕರ್ ಉಪಸ್ಥಿತರಿದ್ದರು
ಪ್ರಕಾಶನದ ಉಪಾಧ್ಯಕ್ಷ ಜಗನ್ನಾಥ ಉಟಗಿ ಅಧ್ಯಕ್ಷತೆ ವಹಿಸಿದ್ದರು. ಪ್ರಕಾಶನ ಪ್ರಧಾನ ಸಂಚಾಲಕ ಸಂಜೀವ ಸಿರನೂರಕರ್‌ಪ್ರಾಸ್ತಾವಿಕ ಮಾತನಾಡಿದರು. ರಾಘವೇಂದ್ರ ವಕೀಲ, ಲಕ್ಷ್ಮಿ ದೇಶಪಂಡೆ ಸ್ವಾಗತಿಸಿದರು. ವೆಂಕಟೇಶ ಮುದಗಲ್ ವಂದಿಸಿದರು. ವ್ಯಾಸರಾಜ ಸಂತೆಕೆಲ್ಲೂರ ಕಾರ್ಯಕ್ರಮ ನಿರೂಪಿಸಿದರು.