ತತ್ವಗಳನ್ನು ಪಾಲಿಸಿದರೆ ಸಮಾನತೆಯ ಹಕ್ಕು ಲಭ್ಯ

ಬಂಗಾರಪೇಟೆ,ಸೆ,೮- ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಶಿಕ್ಷಣ ಸಂಘಟನೆ ಹೋರಾಟ ಈ ಮೂರು ಸೂತ್ರಗಳನ್ನು ನೀಡಿದ್ದು, ಪ್ರತಿಯೊಬ್ಬ ಭಾರತೀಯ ಕಟ್ಟಕಡೆ ಪ್ರಜೆಯೂ ಸಹ ಈ ತತ್ವಗಳನ್ನು ಪಾಲಿಸಿದರೆ ಮಾನವನಿಗೆ ಸಿಗಬೇಕಾದ ಸಮಾನತೆಯ ಹಕ್ಕು ಹಾಗೂ ಪ್ರತಿಯೊಂದು ಹಕ್ಕುಗಳು ಸಿಗುತ್ತದೆ ಎಂದು ವಾಲ್ಮೀಕಿ ಸ್ವಾಭಿಮಾನಿ ಸಂಘದ ರಾಜ್ಯ ಸಂಚಾಲಕರಾದ ಕಾವರನಹಳ್ಳಿ ವಾಲ್ಮೀಕಿ ಬ್ಯಾಟಪ್ಪ ಅವರು ತಿಳಿಸಿದ್ದಾರೆ.
ಅವರು ಪಟ್ಟಣದ ವಾಲ್ಮೀಕಿ ಅಭಿಮಾನಿ ಸಂಘದ ಕಚೇರಿಯಲ್ಲಿ ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ವಿಚಾರ ಸಂಕೀರ್ಣ ಕಾರ್ಯಕ್ರಮದಲ್ಲಿ ಆತ್ಮವಿಶ್ವಾಸ ವೇದಿಕೆಯ ಸಂಸ್ಥಾಪಕ ರಾಜ್ಯಾಧ್ಯಕ್ಷ ಸೀಸಂದ್ರ ದಿಢೀರ್ ಎಂ.ಎನ್.ಭಾರದ್ವಾಜ್ ಅವರಿಗೆ ಸನ್ಮಾನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಾ, ಸುಮಾರು ವರ್ಷಗಳಿಂದ ಭಾರದ್ವಾಜ್ ಅವರು ಕ್ಷೇತ್ರದಲ್ಲಿ ಗುರುತಿಸಿಕೊಂಡು ನಿಷ್ಠೆ ಪ್ರಾಮಾಣಿಕತೆಯಿಂದ ಉತ್ತಮ ಸಮಾಜ ಸೇವೆ ಮಾಡುತ್ತಿದ್ದಾರೆ.
ಇವರು ಪತ್ರಕರ್ತರಾಗಿ, ಸಂಪಾದಕರಾಗಿ, ಸಮಾಜ ಸೇವಕರಾದ, ಪ್ರಗತಿಪರ ಚಿಂತಕರಾಗಿ, ಹೋರಾಟಗಾರರಾಗಿ, ಕವಿಯಾಗಿ, ಸಾಹಿತಿಯಾಗಿ, ಕನ್ನಡ ಹೋರಾಟಗಾರನಾಗಿ, ದಿನ ದಲಿತರ ನಾಯಕನಾಗಿ, ಅಂಬೇಡ್ಕರ್ ವಾದಿಯಾಗಿ, ಎಷ್ಟು ಸಂಘ ಸಂಸ್ಥೆಗಳನ್ನು ಸಹ ಹುಟ್ಟಿ ಹಾಕಿದ್ದಾರೆ.ಆದರಿಂದ ನಾವು ಇವರಿಗೆ ಇವರ ಸೇವೆಯನ್ನು ಗುರುತಿಸಿ ಸನ್ಮಾನವನ್ನು ಮಾಡುತಿದ್ದೇವೆ ಎಂದು ಹೇಳಿದರು. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಒಂದು ಜಾತಿ ವರ್ಗಕ್ಕೆ ಸೀಮಿತವಲ್ಲ ಎಲ್ಲಾ ವರ್ಗದ ನಾಯಕರು ಎಂದು ಹೇಳಿದರು. ಭಾರತ ಸಂವಿಧಾನ ರಚನೆ ಮಾಡಿ ಇಡೀ ವಿಶ್ವಕ್ಕೆ ಹೊಂಬೆಳಕು ಚೆಲ್ಲಿದ್ದಾರೆ. ಸಂವಿಧಾನವು ಒಂದು ಜಾತಿ ವರ್ಗಕ್ಕೆ ಅಲ್ಲ. ಪ್ರತಿಯೊಬ್ಬ ಕಟ್ಟ ಕಡೆ ಪ್ರಜೆಗೂ ಸಂವಿಧಾನ ಕಾನೂನು ಬೇಕೇ ಬೇಕು ಎಂದು ಹೇಳಿದರು.
ಸಂವಿಧಾನಕ್ಕೆ ಪ್ರತಿಯೊಬ್ಬರು ತಲೆಬಾಗಬೇಕು ಗೌರವಿಸಬೇಕು. ಏಕೆಂದರೆ ಸಂವಿಧಾನದಲ್ಲಿ ಕಾನೂನಿನ ಜ್ಞಾನವಿದೆ. ಕಾನೂನು ಪ್ರತಿಯೊಬ್ಬರಿಗೂ ಬೇಕು. ಕಾನೂನು ಇಲ್ಲವೆಂದರೆ ಸಮಾಜ ನಡೆಯಲು ಸಾಧ್ಯವಿಲ್ಲ ಆದ್ದರಿಂದ ಇಂದಿನ ಆಳುವ ಸರ್ಕಾರಗಳು ಸಂವಿಧಾನ ಅಡಿಯಲ್ಲಿ ಸಾಗುತ್ತಿದೆ ಎಂದು ಹೇಳಿದರು.
ಪ್ರತಿಯೊಬ್ಬರು ಜೀವನದಲ್ಲಿ ಮೇಲೆ ಬರಬೇಕೆಂದರೆ ಶಿಕ್ಷಣದಲ್ಲಿ ಅಭಿವೃದ್ಧಿ ಬಂದರೆ ಮಾತ್ರ ಸಾಧ್ಯ. ಅದಕ್ಕೆ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಓದಿಗೆ ಹಾಗೂ ಶಿಕ್ಷಣಕ್ಕೆ ಹೆಚ್ಚು ಮಹತ್ವ ನೀಡಿದ್ದಾರೆ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಪತ್ರಕರ್ತರಾಗಿ ಶೋಷಿತ ಜನಕ್ಕೆ ಧನಿಯಾಗಿ, ದೀನ ದಲಿತರ ನಾಯಕನಾಗಿ, ಹೋರಾಟಗಾರನಾಗಿ, ಸಮಾಜ ಸುಧಾರಕನ್ನಾಗಿ, ಸಂವಿಧಾನ ಶಿಲ್ಪಿಯಾಗಿ, ವಕೀಲರಾಗಿ, ಕಾನೂನು ಮಂತ್ರಿಯಾಗಿ, ರಾಜಕೀಯ ವ್ಯಕ್ತಿಯಾಗಿ ಹಾಗೂ ಇನ್ನೂ ಅನೇಕ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿ ಮರೆಯಲಾಗದ ಮಾಣಿಕ್ಯ ಹಾಗೂ ಮಹಾತ್ಮರಾಗಿದ್ದಾರೆ ಎಂದು ವಿವರಿಸಿದರು.
ಅಂಬೇಡ್ಕರ್ ಅವರು ಅಸ್ಪೃಶ್ಯತೆಗೆ ಹೋರಾಡಿ ಪ್ರತಿಯೊಬ್ಬ ಪ್ರಜೆಯೂ ಸಹ ಮಾನವನ ಎಂದು ಗುರುತಿಸಿಕೊಟ್ಟ ಮಹಾನ್ ಜ್ಞಾನಿ ಎಂದು ನುಡಿದರು.
ವಾಲ್ಮೀಕಿ ಸ್ವಾಭಿಮಾನಿ ಸಂಘದ ಗೌರವಾಧ್ಯಕ್ಷ ಯಲುವಾಹಳ್ಳಿ ಶ್ರೀ ರಾಮಯ್ಯ ಅವರು ಮಾತನಾಡುತ್ತಾ, ದಲಿತ ನಾಯಕ ದಲಿತ ಹೋರಾಟಗಾರ ಭಾರದ್ವಾಜ್ ಅವರು ಒಂದಲ್ಲ ಒಂದು ಕಾರ್ಯಕ್ರಮಗಳು ಹಾಗೂ ಹೋರಾಟಗಳನ್ನು ಮಾಡಿಕೊಂಡು ಬರುತ್ತಿದ್ದಾರೆ. ಇವರು ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಆದರ್ಶ ತತ್ವಗಳನ್ನು ಪಾಲಿಸುತ್ತಾ, ಸಮಾಜಮುಖಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ದಿಂದ ನಾವುಗಳು ಇಂದು ಸನ್ಮಾನ ಮಾಡುತ್ತಿದ್ದೇವೆ. ಮುಂದಿನ ತಿಂಗಳಿನಲ್ಲಿ ವಾಲ್ಮೀಕಿ ಜಯಂತಿಯಲ್ಲಿ ಇವರಿಗೆ ಇನ್ನೂ ವಿಶೇಷವಾಗಿ ಸನ್ಮಾನವನ್ನು ಮಾಡುತ್ತೇವೆ ಎಂದು ತಿಳಿಸಿದರು.
ಭಾರದ್ವಾಜ್ ಅವರು ಬಹಳ ಸರಳ ಜೀವಿ ಹಾಗೂ ಉತ್ತಮ ವ್ಯಕ್ತಿತ್ವ ಹೊಂದಿದ್ದು, ಎಲ್ಲರ ಹೃದಯಗಳಾಗಿ ಮನಸ್ಸನ್ನು ಗೆದ್ದಿದ್ದಾರೆ ಎಂದು ಪ್ರತಿಪಾದಿಸಿದರು. ದೇವರು ಇವರಿಗೆ ಇನ್ನೂ ಆರೋಗ್ಯ ಐಶ್ವರ್ಯ ನೀಡಿ ಇನ್ನು ಹೆಚ್ಚು ಹೋರಾಟಗಳನ್ನು ಮಾಡುತ್ತಾ ಉತ್ತಮ ಸಮಾಜ ಸೇವೆ ಮಾಡಲಿ ಎಂದು ಹಾರೈಸಿದರು.
ಎಂ.ಎನ್. ಭಾರದ್ವಾಜ್ ಅವರ ಹೋರಾಟ ಇಂದಿನ ಯುವ ಪೀಳಿಗೆಗೆ ಮಾದರಿಯಾಗಲಿ. ಇವರು ಇನ್ನು ಹೆಚ್ಚು ಹೋರಾಟಗಳು ಮಾಡಿ ಉತ್ತಮ ಸಮಾಜ ಸೇವೆ ಮಾಡಲಿ ಎಂದು ಹಾರೈಸಿದರು.
ಈ ಅಂಬೇಡ್ಕರ್ ವಿಚಾರ ಸಂಕೀರ್ಣ ಕಾರ್ಯಕ್ರಮದಲ್ಲಿ ವಾಲ್ಮೀಕಿ ಸ್ವಾಭಿಮಾನಿ ಸಂಘದ ಉಪಾಧ್ಯಕ್ಷ ಆರ್. ಅಶೋಕ್ ಹಾಗೂ ರಾಮಕೃಷ್ಣಪ್ಪ, ಎಂ. ಹೊಸಹಳ್ಳಿ ನಾರಾಯಣಸ್ವಾಮಿ, ದೊಡ್ಡವರು ಚಲಪತಿ, ತನಿ ಮಡಗು ತಿಮ್ಮರಾಯಪ್ಪ, ಹುವರಸನಹಳ್ಳಿ ಮುರುಗಪ್ಪ, ಕುರುಬರಹಳ್ಳಿ ಅಮರನಾಥ್ ಹಾಗೂ ಇನ್ನು ಮುಂತಾದವರು ಭಾಗವಹಿಸಿದ್ದರು.